ಬಿಗ್ ಬಾಸ್ ಮನೆಯ ಆಟ ಫಿನಾಲೆ ಹಂತದಲ್ಲಿ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಆಟದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಪೈಪೋಟಿಯು ಜೋರಾಗಿದೆ.
ಬಿಗ್ ಬಾಸ್ ತಮಿಳು (Bigg Boss Tamil Season 8) ಫಿನಾಲೆ ಹಂತಕ್ಕೆ ಸಮೀಪಿಸುತ್ತಿದೆ. ಬಿಗ್ ಬಾಸ್ ತಮಿಳಿನ ಮನೆಯಿಂದ ಕಳೆದ ವಾರ ಇಬ್ಬರು ಸ್ಪರ್ಧಿಗಳು ಆಚೆ ಬಂದಿದ್ದರು. ಆ ಮೂಲಕ ಡಬಲ್ ಎಲಿಮಿನೇಷನ್ ಮಾಡಿ ವೀಕ್ಷಕರಿಗೆ ಶಾಕ್ ನೀಡಲಾಗಿತ್ತು.
ಈ ವಾರವೂ ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ತನ್ನ ಆಟದ ಮೂಲಕ ದೊಡ್ಮನೆಯಲ್ಲಿ ಗಮನ ಸೆಳೆಯುತ್ತಿದ್ದ ಇಬ್ಬರು ಜನಪ್ರಿಯ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಜೆಫ್ರಿ ಮತ್ತು ಅನ್ಶಿದಾ ಅವರು ಎಲಿಮಿನೇಟ್ ಆಗಿದ್ದರು. ಈ ವಾರ ಮತ್ತೆ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಈ ವಾರದ ಆರಂಭದಲ್ಲಿ 10 ಮಂದಿ ಸ್ಪರ್ಧಿಗಳಲ್ಲಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಇದರಲ್ಲಿ ಸೌಂದರ್ಯಾ ಮತ್ತು ಮುತ್ತುಕುಮಾರನ್ ಎಲಿಮಿನೇಷನ್‌ನಿಂದ ಸುರಕ್ಷಿತವಾಗಿದ್ದರೆ, ಅರುಣ್, ದೀಪಕ್, ಜಾಕ್ವಿಲಿನ್, ಮಂಜರಿ, ಪವಿತ್ರ, ರಾಣವ್, ರಾಯನ್ ಮತ್ತು ವಿಶಾಲ್ ಅವರಂತಹ ಸ್ಪರ್ಧಿಗಳು ನಾಮಿನೇಷ್ ಆಗಿದ್ದಾರೆ.
ಈ ಪೈಕಿ ಮಂಜರಿ (Manjari) ಮತ್ತು ರಾಣವ್ (Raanav) ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಈ ಇಬ್ಬರು 28ನೇ ದಿನ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಆಗಿದ್ದರು.
ಮಂಜರಿ ನಾರಾಯಣನ್ ಅವರು ಚೆನ್ನೈ ಮೂಲದ ನಿರೂಪಕಿ ಮತ್ತು ಮಾಡೆಲ್ ಆಗಿದ್ದು, ಪಬ್ಲಿಕ್ ಸ್ಪೀಕರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಐಟಿ ಇಂಜಿನಿಯರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಟಿವಿಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ರಾಣವ್ ಕಾಲಿವುಡ್ ಚಿತ್ರರಂಗದಲ್ಲಿ ನಟ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿದ್ದು, ತಮಿಳು ಚಿತ್ರರಂಗದಲ್ಲಿ ಜೂನಿಯರ್ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಎಸ್‌ಜೆ ಸೂರ್ಯ ಮತ್ತು ವಿಜಯ್ ಸೇತುಪತಿ ಅಭಿನಯದ ʼಇರೈವಿʼ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನ ಧಾರಾವಾಹಿ ʼತಮಿಳ್ ಕಡವುಲ್ ಮುರುಗನ್ ʼನಲ್ಲಿಯೂ ಪಾತ್ರವನ್ನು ಮಾಡಿ ಮಿಂಚಿದ್ದರು.