Advertisement

ಎಲ್ಲ ವಾಹನಗಳಿಗೂ ಬಿಎಚ್‌ ನೋಂದಣಿಗೆ ಅವಕಾಶ

10:33 PM Dec 16, 2022 | Team Udayavani |

ನವದೆಹಲಿ: ಎಲ್ಲ ವಾಹನಗಳಿಗೂ ಭಾರತ್‌ ಸರಣಿ(ಬಿಎಚ್‌)ಯಡಿ ನೋಂದಣಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅವಕಾಶ ಕಲ್ಪಿಸಿದೆ.

Advertisement

ಭಾರತ್‌ ಸರಣಿಯ ನೋಂದಣಿ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಈ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಸಚಿವಾಲಯ ಹೇಳಿದೆ.

ಈ ಹಿಂದೆ ಹೊಸದಾಗಿ ಖರೀದಿಸುವ ವಾಹನಗಳಿಗೆ ಮಾತ್ರ ಬಿಎಚ್‌ ಸರಣಿಯಡಿ ನೋಂದಣಿಗೆ ಅವಕಾಶವಿತ್ತು. ನೂತನ ನಿಯಮಗಳ ಪ್ರಕಾರ, ಹಿಂದಿನ ನಿಯಮಗಳಡಿ ನೋಂದಣಿಯಾಗಿರುವ ವಾಹನಗಳನ್ನೂ ಬಿಎಚ್‌ ಸರಣಿಗೆ ವರ್ಗಾಯಿಸಲು ಅವಕಾಶ ನೀಡಲಾಗಿದೆ. ಆದರೆ ಈ ನೋಂದಣಿಗೆ ತೆರಿಗೆ ಪಾವತಿಸಬೇಕಾಗುತ್ತದೆ.

ಬಿಎಚ್‌ ಸರಣಿಯ ನೋಂದಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ನಿಯಮ 48ಕ್ಕೆ ತಿದ್ದುಪಡಿ ತರಲು ಸಚಿವಾಲಯ ಪ್ರಸ್ತಾಪಿಸಿದೆ. ಜತೆಗೆ ವಾಹನ ನೋಂದಣಿಗೆ ಮನೆ ಅಥವಾ ಉದ್ಯೋಗದ ಸ್ಥಳ ಯಾವುದಾದರೂ ಒಂದನ್ನು ಅರ್ಜಿಯಲ್ಲಿ ನಮೂದಿಸಲು ಅವಕಾಶ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ದುರುಪಯೋಗ ತಡೆಗಟ್ಟಲು ಉದ್ಯೋಗ ಪ್ರಮಾಣಪತ್ರ ಸಲ್ಲಿಸಲು ಸೂಚಿಸಲಾಗಿದೆ. ವಾಹನದ ಮಾಲೀಕತ್ವವನ್ನು ಇತರರಿಗೆ ವರ್ಗಾವಣೆ ಮಾಡುವ ವೇಳೆ ಬಿಎಚ್‌ ಸರಣಿಯಡಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next