ದಾವಣಗೆರೆ: ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಸೋಮವಾರ ಜಗಳೂರಿನಿಂದ ಪ್ರಾರಂಭಿಸಿದ್ದ ಪಾದಯಾತ್ರೆ ಮಂಗಳವಾರ ದಾವಣಗೆರೆ ತಲುಪಿತು.
ಜಗಳೂರಿನಿಂದ ಬಿಳಿಚೋಡು, ಅಣಜಿ ಮಾರ್ಗವಾಗಿ 60 ಕಿಲೋಮೀಟರ್ ದೂರದ ವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ 40 ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಮುಖಂಡರು, ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಜಗಳೂರಿನಲ್ಲಿ ಕೂಡಲೇ ಬಸ್ ಡಿಪೋ ಪ್ರಾರಂಭಿಸುವ ಮೂಲಕ ಪ್ರತಿ ನಿತ್ಯ ಸಾರ್ವಜನಿಕರು, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಜಗಳೂರಿನಲ್ಲಿ ಬಸ್ ಡಿಪೋ ಪ್ರಾರಂಭಿಸ ಬೇಕು ಎಂದು ಒತ್ತಾಯಿಸಿ ಕಳೆದ 18 ವರ್ಷ ದಿಂದ ನಡೆಸುತ್ತಿರುವ ಹೋರಾಟಕ್ಕೆ ಈಕ್ಷಣದ ವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಜನ ಪ್ರತಿನಿಧಿಗಳು, ಅಧಿಕಾರಿಗಳು ಬರೀ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅಂತಿಮವಾಗಿ ಜಗಳೂರಿನಿಂದ ದಾವಣಗೆರೆಯವರೆಗೆ 60 ಕಿಲೋಮೀಟರ್ ವರೆಗೆ ಪಾದಯಾತ್ರೆ ನಡೆಸಿದ್ದೇವೆ. ಬೇಡಿಕೆ ಈಡೇರಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.
ಶಾಶ್ವತ ಬರಪೀಡಿತ ತಾಲೂಕು ಎಂದೇ ಕರೆಯಲ್ಪಡುವ ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ಜನರು, ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೆ ತೊಂದರೆ ಅನುಭವಿ ಸುತ್ತಿದ್ದಾರೆ.ಬಸ್ ಹಿಡಿಯಲು ಕಿಲೋಮೀಟರ್ ವರೆಗೆ ನಡೆಯಲೇಬೇಕಾದ ಸ್ಥಿತಿ ಇದೆ. ಕೂಡಲೇ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ನವ ಕರ್ನಾಟಕ ರಕ್ಷಣಾ ವೇದಿಕೆಯ ಜೆ. ಮಹಾಲಿಂಗಪ್ಪ, ಮಾದಿಹಳ್ಳಿ ಮಂಜುನಾಥ್, ಆರ್. ಓಬಳೇಶ್, ಕೆ.ಎಚ್. ಆನಂದರಾಜ್, ಆವರಗೆರೆ ಚಂದ್ರು, ಐರಣಿ ಚಂದ್ರು, ಇ. ಶ್ರೀನಿವಾಸ್ ಇತರರು ಇದ್ದರು.
ಇದನ್ನೂ ಓದಿ: Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ