Advertisement

ಸೈನಿಕ ಹುಳು ಕಾಟಕ್ಕೆ ರೈತ ಕಂಗಾಲು

05:23 PM Jun 15, 2020 | Naveen |

ಭರಮಸಾಗರ: ಮುಂಗಾರು ಅವ ಗೆ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ಎಲೆ ಸುಳಿ ಸೈನಿಕ ಹುಳುವಿನ ಕಾಟ ಶುರುವಾಗಿ ಸಸಿ ಹಂತದಲ್ಲೇ ಎಲೆಗಳನ್ನು ತಿಂದುಹಾಕುತ್ತಿರುವ ಬೆಳವಣಿಗೆಯಿಂದ ಚಿತ್ರದುರ್ಗ ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

Advertisement

ತಾಲೂಕಿನಲ್ಲಿ 39 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈಗಾಗಲೇ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಮುಗಿದಿದೆ. ಮೇ ಅಂತ್ಯಕ್ಕೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳದಲ್ಲಿ ಎಲೆ ಸುಳಿ ರೋಗ ಕಾಣಿಸಿಕೊಂಡಿದೆ. ಬೆಳೆಯ ಪ್ರಾರಂಭಿಕ ಹಂತದ ಸುಳಿಯಲ್ಲಿ ಅವಿತು ಬೆಳೆಯುವ ಕುಡಿಯನ್ನು ಈ ಹುಳು ತಿಂದು ಹಾಕುತ್ತಿದೆ. ಎಲೆಯ ಮೇಲೆ ಬಿಳಿ ಬಣ್ಣದ ಮಚ್ಚೆಗಳ ಲಕ್ಷಣಗಳಿವೆ. ಸ್ವಲ್ಪ ಬಲಿತ ಹುಳುಗಳಿರುವ ಗರಿಗಳಲ್ಲಿ ಎಲೆಯು ಹರಿದ ರೀತಿಯಲ್ಲಿ ಕಾಣಿಸುತ್ತದೆ. ಎಲೆಯ ಮೇಲ್ಭಾಗದಲ್ಲಿ ಕಟ್ಟಿಗೆ ಹಿಟ್ಟಿನ ತರಹದ ಹಸಿ ಹಿಕ್ಕೆಗಳಿವೆ. ಇಂಥಹ ಹುಳು ಭಾದೆಯನ್ನು ಆರಂಭದಲ್ಲೇ ನಿಯಂತ್ರಿಸದೆ ಹೋದರೆ ತೆನೆಗಳನ್ನು ಕೊರೆದು ಬೆಳವಣಿಗೆಯಾಗುವ ಕಾಳುಗಳನ್ನು ತಿನ್ನುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಎಲೆ ಸುಳಿ ರೋಗ ಬೀಳದೆ ಇರುವಂಥಹ ಬಿತ್ತನೆ ಬೀಜಗಳನ್ನು ತಯಾರಿಸಲಾಗಿದೆ ಎಂಬ ಕೆಲ ಬಿತ್ತನೆ ಬೀಜ ಕಂಪನಿಗಳ ಪ್ರಚಾರದ ಮೊರೆ ಹೋದ ರೈತರು ಅಂಥಹ ದುಬಾರಿ ಬೀಜಗಳನ್ನೇ ಖರಿದೀಸಿ ಬಿತ್ತನೆ ಮಾಡಿದ್ದರೂ ರೋಗ ಭಾದೆ ನಿಂತಿಲ್ಲ ಎಂಬುದಾಗಿ ಬೆಳೆಗಾರರು ಹೇಳುತ್ತಾರೆ. ಮೋಡದ ವಾತಾವರಣ, ಹೆಚ್ಚಿನ ಮಳೆ, ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶಗಳಿರುವ ಭಾಗಗಳಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗಿದೆ. ಈ ಕೀಟಗಳು ವರ್ಷವೀಡಿ ಬೆಳೆಗಳಿಗೆ ಕಾಟ ನೀಡುವ ವಿಲಕ್ಷಣ ಗುಣವನ್ನು ಹೊಂದಿವೆ.

ಎಲೆ ಸುಳಿ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ ರೈತರು ಆಳವಾದ ಉಳುಮೆ ಮಾಡುವುದರಿಂದ ಕೋಶಗಳನ್ನು ಹೊರಹಾಕಿ ಇತರೆ ಪರಭಕ್ಷಕ ಕೀಟಗಳಿಂದ ಮತ್ತು ಸೂರ್ಯನ ಶಾಖದಿಂದ ನಾಶಪಡಿಸಬಹುದು. ಮುಂಗಾರು ಮೊದಲ ಮಳೆಗೆ ಏಕಕಾಲಕ್ಕೆ ಬಿತ್ತನೆ ಮಾಡಿದರೆ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಿ ಕೀಟಗಳ ಸಂತತಿ ಅಭಿವೃದ್ಧಿಯನ್ನು ತಡೆಯಬಹುದು. ಅಂತರ, ಮಿಶ್ರ ಬೆಳೆ ಬೆಳೆಯುವುದರಿಂದ ಎಲೆ ಸುಳಿ ರೋಗ ಸಾಧ್ಯವಿದೆ. ಶಿಪಾರಸು ಮಾಡಿದ ಪ್ರಮಾಣದ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಬಳಸಿ ಬೆಳೆಯನ್ನು ನಿರ್ವಹಣೆ ಮಾಡುವದರಿಂದಲೂ ರೋಗಭಾದೆಯನ್ನು ತಡೆಯಬಹುದು ಎಂಬುದಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀನಿವಾಸ್‌ ಹೇಳುತ್ತಾರೆ.

ಕೀಟ ನಿಯಂತ್ರಣ ಕ್ರಮಗಳ ಯಾವುದೇ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಮಲ್ಲನಗೌಡ ತಿಳಿಸಿದ್ದಾರೆ.  ಒಟ್ಟಾರೆ ದರ ಕುಸಿತ, ಮಳೆಯ ಅನಿಶ್ಚಿತತೆ, ಅನಾವೃಷ್ಟಿ ಸೇರಿದಂತೆ ನಾನಾ ಸಂಕಷ್ಟಗಳ ಸುಳಿಗೆ ಸಿಲುಕಿದ ಮೆಕ್ಕೆಜೋಳ ಬೆಳೆಗಾರರು ಇದೀಗ ಕೀಟ ಭಾದೆಯಿಂದ ಬೆಳೆಯನ್ನು ಆರಂಭದಲ್ಲೇ ಕಾಪಾಡಿಕೊಳ್ಳಲು ಹರಸಾಹಸಪಡಬೇಕಾಗಿದೆ.

Advertisement

ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next