Advertisement

“ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ’

02:20 AM Jul 12, 2017 | Harsha Rao |

ಪೆರ್ಲ: ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ವ್ಯಾಸ ಜಯಂತಿ(ಗುರುಪೂರ್ಣಿಮಾ ದಿನಾಚರಣೆ)ಯನ್ನು ಆಚರಿಸಲಾಯಿತು.

Advertisement

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುಂಡರೀಕಾಕ್ಷ ಬೆಳ್ಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸುವಿಚಾರ ಗಳನ್ನು ಕಲಿಸಬೇಕು. ಇಂತಹ ಶಿಶು ಮಂದಿರಗಳು ಉತ್ತಮ ಸಂಸ್ಕಾರಯುತ ಶಿಕ್ಷಣ ಲಭಿಸುವಂತೆ ಮಾಡುವಲ್ಲಿ ಇನ್ನಷ್ಟು ಸಹಕಾರಿಯಾಗುತ್ತವೆ. ಮಾತೆಯರು ಈ ನಿಟ್ಟಿನಲ್ಲಿ ಗಮನ ಕೊಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಶುಮಂದಿರ ಸಮಿತಿ ಅಧ್ಯಕ್ಷ ಶ್ರೀಹರಿ ಭರಣೀಕರ್‌ ಅವರು ಶಿಶು ಮಂದಿರದ ಶಿಕ್ಷಣದ ಧ್ಯೇಯಗಳನ್ನು ಹೆತ್ತವರಿಗೆ ವಿವರಿಸಿ ಗುರುವಂದನಾ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿ ದರು. ಇನ್ನೋರ್ವ ಅತಿಥಿ ಪೆರ್ಲದ ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್‌ ಕೆ. ಗುರುವಿನ ಮಹತ್ವ ಹಾಗೂ ಯೋಗ್ಯ ಸಂಸ್ಕಾರಗಳ ಆವಶ್ಯಕತೆಯನ್ನು ತಿಳಿಸಿ ದರು. ಮಾತೃ ಮಂಡಳಿಯ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ ಪ್ರಾರ್ಥಿಸಿದರು. ಶಿಶು ಮಂದಿರದ ಮಾತಾಜಿ ಭಗಿನಿ ಲಾವಣ್ಯ ಮಕ್ಕಳೊಂದಿಗೆ ದೀಪ ಜ್ವಲನ ಶ್ಲೋಕ ಹೇಳಿದರು.

ಶಿಶುಮಂದಿರ ಸಮಿತಿಯ ಕಾರ್ತಿಕ್‌ ಶಾಸ್ತಿÅ ಸ್ವಾಗತಿಸಿದರು. ನಳಿನಿ ಸೈಪಂಗಲ್ಲು ವಂದಿಸಿದರು. ಶಿಶುಮಂದಿರ ಸಮಿತಿಯ ಸುಮಿತ್‌ರಾಜ್‌, ರಮೇಶ್‌ ಪಳ್ಳತ್ತಡ್ಕ, ಕೃಷ್ಣರಾಜ ಪುಣಿಂಚತ್ತಾಯ, ಜಯಶ್ರೀ, ಶ್ಯಾಮಲಾ ಪೆರ್ಲ ಮತ್ತು ಪ್ರೇಮಾ ಆಳ್ವ ಉಪಸ್ಥಿತರಿದ್ದರು. ಮಕ್ಕಳು ಹಾಗು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಹಾಯಕಿ ಹೇಮಾ ಆಚಾರ್‌ ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next