Advertisement

Conference: ಬ್ರಹ್ಮಶ್ರೀ ನಾರಾಯಣಗುರು ಸಂದೇಶ ಇಂದಿನ ಅಗತ್ಯ: ಪೋಪ್‌ ಫ್ರಾನ್ಸಿಸ್‌

03:51 AM Dec 02, 2024 | Team Udayavani |

ತಿರುವನಂತಪುರ: ಜಾಗತಿಕ ಅಸಹಿಷ್ಣುತೆ ತಡೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಉಪದೇಶಗಳು ಸಹಕಾರಿ ಎಂದು ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ.

Advertisement

ಕೇರಳದ ಎರ್ನಾಕುಲಂನ ಅಲುವಾದಲ್ಲಿ ಶ್ರೀ ನಾರಾಯಣಗುರುಗಳು ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಆಚರಣೆ ಅಂಗವಾಗಿ ವ್ಯಾಟಿಕನ್‌ನಲ್ಲಿ ಸೇರಿದ್ದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಪೋಪ್‌ ಫ್ರಾನ್ಸಿಸ್‌ ಅವರು, ಇಂದು ದೇಶ ಮತ್ತು ಜನರ ಮಧ್ಯೆ ಅಸಹಿಷ್ಣುತೆ, ದ್ವೇಷ ಹೆಚ್ಚುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಜಗತ್ತಿಗೆ ಸಮಾಜ ಸುಧಾರಕರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಹೇಳಿದರು.

ಎಲ್ಲೆಡೆ ದ್ವೇಷ ಹೆಚ್ಚುತ್ತಿರುವ ಸಂದರ್ಭದಲ್ಲಿ ಶ್ರೀ ನಾರಾಯಣ ಗುರುಗಳು ಮನುಕುಲದ ಏಕತೆಗಾಗಿ ಸಾರಿದ್ದ ಸಂದೇಶ ಪ್ರಸ್ತುತವಾಗಿದೆ ಎಂದು ಹೇಳಿದರು. ಅಲ್ಲದೇ ಯಾವುದೇ ಹಂತದಲ್ಲಿ, ಯಾವುದೇ ಮಾರ್ಗದಲ್ಲಿ ಯಾರೊಬ್ಬರಲ್ಲೂ ತಾರತಮ್ಯ ತೋರಬಾರದು ಎಂದು ಅವರು ಉಪದೇಶಿಸಿದ್ದರು. ಆದರೆ ದುಃಖಕರ ಸಂಗತಿ ಎಂದರೆ ಈಗಲೂ ಬಡವರು, ದುರ್ಬಲರು, ದಮನಿತರ ವಿಚಾರದಲ್ಲಿ ತಾರತಮ್ಯ, ಬಹಿಷ್ಕಾರ ಪ್ರದರ್ಶನವಾಗುತ್ತಿದೆ ಎಂದು ಪೋಪ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next