Advertisement
ಮಾ. 1ರಂದು 11.40ರ ಸುಮಾರಿಗೆ ಹೊಟೇಲ್‌ಗೆ ಬಂದ ಶಂಕಿತ ಕೇವಲ 10 ನಿಮಿಷದಲ್ಲೇ ತಿಂಡಿ ತಿಂದು ಐಇಡಿ ಇರುವ ಬ್ಯಾಗ್ ಅನ್ನು ಕೈತೊಳೆಯುವ ಸ್ಥಳದಲ್ಲಿಟ್ಟು ತೆರಳಿದ್ದಾನೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ತಲೆಗೆ ಕ್ಯಾಪ್, ಕನ್ನಡಕ ಮತ್ತು ಮಾಸ್ಕ್ ಧರಿಸಿದ್ದು ನಾಲ್ಕೈದು ಬಾರಿ ಮೊಬೈಲ್ ತೆಗೆದು ಮಾತಾಡಿದಂತೆ ನಟಿಸಿರುವುದು ಪತ್ತೆಯಾಗಿದೆ. ಹೀಗಾಗಿ ಆರೋಪಿಯ ಮೊಬೈಲ್ ಜಾಡು ಪತ್ತೆಗಾಗಿ ಹೊಟೇಲ್ ಆವರಣ ಹಾಗೂ ಅಕ್ಕ-ಪಕ್ಕದ ಎಲ್ಲ ಮೊಬೈಲ್ ನೆಟ್‌ವರ್ಕ್‌ನ ಟವರ್ ಡಂಪ್ ಡೇಟಾ ಸಂಗ್ರಹಿಸಿ ಪರಿಶೀಲಿಸಿದಾಗ ಶಂಕಿತ ನಕಲಿ ಮೊಬೈಲ್ ಬಳಸಿರುವುದು ಪತ್ತೆ ಯಾಗಿದೆ.
Related Articles
ಹೊಟೇಲ್‌ಗಿಂತ ಹಿಂದೆ 2 ಕಿ.ಮೀ. ದೂರದಲ್ಲೇ ಬಸ್ ಹತ್ತಿರುವ ಶಂಕಿತ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದು, ನಿಲ್ದಾಣದಲ್ಲೇ ಬ್ಯಾಗ್‌ನಲ್ಲಿದ್ದ ಐಇಡಿಗೆ ಟೈಮ್ ಫಿಕ್ಸ್ ಮಾಡಿರುವ ಸಾಧ್ಯತೆಯಿದೆ. ಏಕೆಂದರೆ, ಬಸ್ ನಿಲ್ದಾಣದಲ್ಲಿ ಬ್ಯಾಗ್ ಪರಿಶೀಲಿಸುವ ದೃಶ್ಯ ಸ್ಥಳೀಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ನೇರವಾಗಿ ಹೊಟೇಲ್‌ಗೆ ಬಂದು ಇಡ್ಲಿ ತಿಂದು, ತೈತೊಳೆಯುವ ಜಾಗದಲ್ಲೇ ಬ್ಯಾಗ್ ಇಟ್ಟು ಪರಾರಿಯಾಗಿದ್ದಾನೆ. ಆಬಳಿಕ ಮಧ್ಯಾಹ್ನ 12.56ಕ್ಕೆ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement