Advertisement
ರಾಜಾಜಿನಗರದ ಪ್ರಕಾಶ್ ನಗರ ನಿವಾಸಿ ಶ್ರೀಧರ್ (35), ರಮೇಶ್ (36) ಮತ್ತು ಶಿವಲಿಂಗ (30) ಹಾಗೂ ಚಂದ್ರಕುಮಾರ್(30) ಬಂಧಿತರು.
Related Articles
Advertisement
ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಮೇಶ್, ತನ್ನ ಕ್ಯಾಂಟೀನ್ನಲ್ಲಿ ಕೆಲಸ ಮಾಡು ವವರಿಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಇಎಸ್ಐ ಕಾರ್ಡ್ ಮಾಡಿಸಿ ಕೊಟ್ಟಿದ್ದ. ಈ ವೇಳೆ ಬೇರೆಯವರಿಗೂ ಮಾಡಿಸಿಕೊಟ್ಟರೆ ಕಮಿಷನ್ ಪಡೆಯಬಹುದು ಎಂದು ಶ್ರೀಧರ್ ಜತೆ ಚರ್ಚಿ ಸಿದ್ದಾನೆ. ನಂತರ ತನಗೆ ಪರಿಚಯಸ್ಥರಾಗಿದ್ದ ಶಿವಲಿಂಗ ಮತ್ತು ಚಂದ್ರಕುಮಾರ್ಗೆ ಮಾಹಿತಿ ನೀಡಿ, ಗ್ಯಾಸ್ ಏಜೆನ್ಸಿಯೊಂದರ ಉದ್ಯೋಗಿ ಶ್ವೇತಾ ಮತ್ತು ಖಾಸಗಿ ಕಂಪನಿಯ ಕಂಪ್ಯೂಟರ್ ಆಪರೇಟರ್ ಶಶಿಕಲಾಗೂ ಮಾಹಿತಿ ನೀಡಿ ದಂಧೆ ಆರಂಭಿಸಿದ್ದಾರೆ. ಇತ್ತೀಚೆಗೆ ಈ ರೀತಿ ಕಾರ್ಡ್ ಪಡೆದ ವ್ಯಕ್ತಿಯೊಬ್ಬ ಹೆಚ್ಚುವರಿ ಹಣ ಪಡೆದ ಬಗ್ಗೆ ಸಿಸಿಬಿಗೆ ದೂರು ನೀಡಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾ ಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ರೋಗಿಗಳನ್ನು ಕರೆದೊಯ್ಯುತ್ತಿದ್ದ ಆರೋಪಿಗಳು: ಆಸ್ಪತ್ರೆಗೆ ಬರುವ ಕೆಲ ರೋಗಿಗಳು ತಮ್ಮ ಆರ್ಥಿಕ ಸಮಸ್ಯೆ ಬಗ್ಗೆ ಹೇಳಿಕೊಳ್ಳುವಾಗ ಅವರನ್ನು ಸಂಪರ್ಕಿಸು ತ್ತಿದ್ದ ಶ್ರೀಧರ್, ಶಿವ ಲಿಂಗ, ಚಂದ್ರಕುಮಾರ್ ಕೂಡಲೇ ರಮೇಶ್ ಬಳಿ ಕರೆದೊಯ್ದು ಇಎಸ್ಐ ಕಾರ್ಡ್ ಬಗ್ಗೆ ಮಾಹಿತಿ ನೀಡಿ, ಹಣ ಪಡೆದು ಕಾರ್ಡ್ ಕೊಡಿಸುತ್ತಿದ್ದರು. ಇನ್ನು ಶ್ವೇತಾ ಮತ್ತು ಶಶಿಕಲಾ ವೈದ್ಯರ ನಕಲಿ ಶಿಫಾರಸ್ಸು ಪತ್ರ ಹಾಗೂ ಸೀಲ್ಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದೆ. ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಎಸಿಪಿ ವಿ.ಗೋವಿಂದರಾಜು ಮತ್ತು ಪಿಐ ದೇವಂದ್ರಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಸು ದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯು ಕ್ತರಾದ ಸತೀಶ್ ಕುಮಾರ್, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತಾ ಇದ್ದರು.