Advertisement

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

06:02 PM Nov 18, 2024 | Team Udayavani |

ಅರಬ್‌ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ಅತೀ ಹೆಚ್ಚು ಗಿನ್ನೇಸ್‌ ದಾಖಲೆಗಳ ಸರಮಾಲೆಯನ್ನು ಧರಿಸಿಕೊಂಡಿರುವ ದುಬಾಯಿ ಇದೀಗ ಮತ್ತೂಂದು ಸಾಹಸಮಯ ಕಾರ್ಯಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ. ಜನನಿ ಬೀಡಾಗಿರುವ Dubai  ನಗರ ವಿಶಾಲವಾಗಿರುವ ರಾಷ್ಟ್ರೀಯ ಹೆದ್ದಾರಿಗಳು ನಾಲ್ಕು ದಿಕ್ಕಿನಲ್ಲಿ ಹಾದೂ ಹೋಗಿದ್ದರೂ ದಿನಪೂರ್ತಿ ಸದಾ ವಾಹನ ಸಂಚಾರಗಳ ದಟ್ಟಣೆ ಹೆಚ್ಚುತಲೇ ಇರುತ್ತದೆ. ತಮ್ಮ ಸ್ವಂತ ವಾಹನವಿದ್ದರೂ ಮೆಟ್ರೊ ರೈಲಿನ ಬಳಕೆ ಮಾಡುವವರ ಸಂಖ್ಯೆಯೂ ಸಹ ಹೆಚ್ಚಿದೆ.

Advertisement

Dubai ಆಡಳಿತ ವ್ಯವಸ್ಥೆ ಜನಮಾನಸಕ್ಕೆ ಅಗತ್ಯವಿರುವ ಸವಲತ್ತುಗಳನ್ನು ನಿರಂತರವಾಗಿ ನೀಡುತ್ತಾ ಬರುತ್ತಿದೆ. ವಿಶ್ವದ ಗಮನ ಸೆಳೆದಿರುವ ಆಕರ್ಷಕ ಪ್ರವಾಸಿ ತಾಣವಾಗಿರುವ ದುಬಾಯಿಯ ಪ್ರಮುಖ ಸ್ಥಳಗಳು ಸದಾ ಪ್ರವಾಸಿಗರಿಂದ ತುಂಬಿರುತ್ತದೆ.

Dubai ರೋಡ್ಸ್‌ ಅಂಡ್‌ ಟ್ರಾನ್ಸ್‌ ‌ಪೋರ್ಟ್‌ ಅಥಾರಿಟಿ ಮತ್ತು ಜೋಬಿ ಎವಿಯೇಶನ್‌ ಅಂಡ್‌ ಸ್ಕೈಪೋರ್ಟ್‌ ಇನ್ಪ್ರಾ ಸ್ಟ್ರಕ್ಚರ್‌ ಜೊತೆಗೂಡಿ ಪಬ್ಲಿಕ್‌ ಟ್ರಾನ್ಸ್ ಪೋರ್ಟ್‌ ಆನ್‌ ದಿ ಸ್ಕೈ ಯೋಜನೆಗೆ ತಯಾರಿ ನಡೆಸುತ್ತಿದೆ. ಡ್ರೋನ್‌ ಏರ್‌ಕ್ರಾಫ್ಟ್‌ ಬಳಸಿ ಭೂಮಿಯಿಂದ ಒಂದು ಸಾವಿರ ಅಡಿಯಿಂದ ಮೂರು ಸಾವಿರ ಅಡಿ ಎತ್ತರದಲ್ಲಿ ನಗರದ ಮಧ್ಯೆ ಗಗನಚುಂಬಿ ಕಟ್ಟಡಗಳ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತದೆ.

Dubai ಫ್ಲಯಿಂಗ್‌ ಟ್ಯಾಕ್ಸಿ ದುಬಾಯಿಯ ಪ್ರಮುಖ ಸ್ಥಳಗಳಾದ Dubai ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್‌ ಜುಮೇರಾ, Dubai ಡೌನ್‌ ಟೌನ್‌, Dubai ಮರಿನಾ ಭಾಗಕ್ಕೆ ನಿಗದಿಪಡಿಸಲಾಗಿದೆ. 2025ರ ಕೊನೆಯ ಭಾಗದಲ್ಲಿ ಪ್ರಯಾಣಿಕರಿಗೆ ಪ್ಲಯಿಂಗ್‌ ಏರ್‌ಟ್ಯಾಕ್ಸಿ ಲಭ್ಯವಾಗುವ ಯೋಜನೆ ಸಿದ್ದವಾಗುತ್ತಿದೆ.

Advertisement

ಕ್ಯಾಲಿಫೋರ್ನಿಯಾದಲ್ಲಿ ಏರ್‌ಟ್ಯಾಕ್ಸಿ ಟೆಸ್ಟ್‌ ಹಂತದಲ್ಲಿದ್ದು, Dubai ಮರುಭೂಮಿಯಲ್ಲಿಯೂ ಸಹ ಪ್ರಾಯೋಗಿಕವಾಗಿ ಟೆಸ್ಟ್‌ ನಡೆಯಲಿದೆ. ಡ್ರೋನ್‌ ಫ್ಲೈಯಿಂಗ್‌ ಏರ್‌ಟ್ಯಾಕ್ಸಿ ಜನಸೇವೆಗೆ ಲಭ್ಯವಾದರೆ, Dubai ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್‌ ಜುಮೇರಾಕ್ಕೆ ರಸ್ಥೆಯ ಮೂಲಕ ಪ್ರಯಾಣ 45 ನಿಮಿಷ ತೆಗೆದುಕೊಂಡರೆ, ಗಗನ ಮಾರ್ಗವಾಗಿ ಏರ್‌ಟ್ಯಾಕ್ಸಿ ಕೇವಲ ಹತ್ತು ನಿಮಿಷ ಮಾತ್ರ ತೆಗೆದುಕೊಳ್ಳುತ್ತದೆ.

ಡ್ರೋನ್‌ ಫ್ಲೈಯಿಂಗ್‌ ಏರ್‌ಕ್ರಾಫ್ಟ್‌ ನಲ್ಲಿ ಪೈಲೆಟ್‌ ಮತ್ತು ನಾಲ್ಕು ಜನ ಪ್ರಯಾಣಿಕರು ತಮ್ಮ ಲಗೈಜ್‌ ಸಹಿತ 200 ಕಿ.ಮಿ. ವೇಗದಲ್ಲಿ ಹೊತ್ತೊಯ್ಯಲಿದೆ. ಎಲೆಕ್ಟ್ರಿಕ್‌ ಏರ್‌ಟ್ಯಾಕ್ಸಿ ಆಕಾಶದಲ್ಲಿ ಹಾರಾಡುವ ಸಮಯದಲ್ಲಿ ಪ್ರಯಾಣಿಕರಿಗೆ ಮೊಬೈಲ್‌ ಬಳಕೆ ಸಹ ಮಾಡಲು ನೆಟ್‌ ವರ್ಕ್‌ ಇರುತ್ತದೆ.

ಪ್ರಯಾಣಿಕರ ಯಾನದ ದರ ಮುನ್ನೂರ ಐವತ್ತು ದಿರಾಂಸ್‌ ನಿಗದಿ ಪಡಿಸಲಾಗಿದೆ. ಏರ್‌ಕ್ರಾಫ್ಟ್ ಚಲಿಸುವಾಗ 45 ಡೆಸಿಬಲ್‌ ಸೌಂಡ್‌ ಮಾಡುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.

ಕಮರ್ಷಿಯಲ್‌ ಲೈಸನ್ಸ್‌ ಪಡೆದಿರುವ ಪೈಲೆಟ್‌ ಉನ್ನತ ಮಟ್ಟದ ತರಭೇತಿ ಪಡೆದಿರುತ್ತಾರೆ. ಅತ್ಯುನ್ನತ ತಂತ್ರಜ್ಞಾನದಿಂದ ತಯಾರಿಸಲಾಗಿರುವ ಡ್ರೋನ್‌ ಫ್ಲೈಯಿಂಗ್‌ ಏರ್‌ಕ್ರಾಫ್ಟ್‌ ಬಿಡುವಿಲ್ಲದ ಉದ್ಯಮಿಗಳಿಗೆ, ಉದ್ಯೋಗಿಗಳಿಗೆ ಸಮಯವನ್ನು ಉಳಿಸಿಕೊಳ್ಳಲು ಸದುಪಯೋಗವಾಗಲಿದೆ. ಬಹು ದೂರದರ್ಶಿತ್ವ ಹೊಂದಿರುವ ಅರಬ್ಬರ ದಾಖಲೆಯನ್ನು ಸೃಷ್ಠಿಸುವ ಕಾರ್ಯ ಯೋಜನೆಯಲ್ಲಿ ಡ್ರೋನ್‌ ಫ್ಲೈಯಿಂಗ್‌ ಏರ್‌ಕ್ರಾಫ್ಟ್‌ ವಿಶೇಷ ಸ್ಥಾನ ಪಡೆದು ಕೊಳ್ಳಲಿದೆ.

*ಬಿ. ಕೆ. ಗಣೇಶ್‌ ರೈ, ದುಬಾಯಿ

Advertisement

Udayavani is now on Telegram. Click here to join our channel and stay updated with the latest news.

Next