Advertisement

Digitisation: ಡಿಜಿಟಲೀಕರಣದಿಂದ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು!

10:15 AM Nov 21, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಪಡಿತರ ಚೀಟಿ ಡಿಜಿಟಲೀಕರಣ ಕ್ರಮಗಳಿಂದಾಗಿ 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ಆಹಾರ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

Advertisement

ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದು ವಿವಾದ ಭುಗಿಲೆದ್ದಿರುವಂತೆಯೇ ಕೇಂದ್ರದಿಂದಲೇ ಈ ಮಾಹಿತಿ ಪ್ರಕಟವಾಗಿರುವುದು ಮಹತ್ವ ಪಡೆದಿದೆ. ದೇಶಾದ್ಯಂತ 80.6 ಕೋಟಿ ಸಾರ್ವಜನಿಕ ವಿತರಣ ವ್ಯವಸ್ಥೆ (ಪಿಡಿಎಸ್‌) ಫ‌ಲಾನುಭವಿಗಳಿದ್ದಾರೆ. ಆದರೆ ಆಧಾರ್‌ ಆಧಾರಿತ ದೃಢೀಕರಣ ಮತ್ತು ಇಕೆವೈಸಿ ವಿಧಾನಗಳ ಮೂಲಕ ಪರಿಶೀಲನೆ ನಡೆಸಿ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಈ ಮೂಲಕ ಸಂಪನ್ಮೂಲ ಸೋರಿಕೆ ಹಾಗೂ ಫ‌ಲಾನುಭವಿಗಳಿಗೆ ಯೋಜನೆಗಳು ತಲುಪಲು ಸಹಾಯಕವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next