Advertisement

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

01:23 AM Nov 17, 2024 | Team Udayavani |

ಬೆಂಗಳೂರು: ಮೊಬೈಲ್‌ ದುರಸ್ತಿ ವಿಚಾರಕ್ಕೆ ತಾಯಿ ಮೇಲೆ ಹಲ್ಲೆಗೆ ಮುಂದಾಗಿದ್ದ ಮಗನಿಗೆ ತಂದೆಯೇ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಲ್ಲದೆ, ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕಾಶಿನಗರ ನಿವಾಸಿ ತೇಜಸ್‌ (14) ಹತ್ಯೆಗೀಡಾದ ಬಾಲಕ. ಕೃತ್ಯ ಎಸಗಿದ ಆತನ ತಂದೆ ರವಿಕುಮಾರ್‌ (44)ನನ್ನು ಬಂಧಿಸಲಾಗಿದೆ. ಆರೋಪಿ ರವಿ ಕುಮಾರ್‌, ಪತ್ನಿ ಶಶಿಕಲಾ ಮತ್ತು ಇಬ್ಬರು ಮಕ್ಕಳಾದ ತೇಜಸ್‌ ಮತ್ತು ವಿಶಾಲ್‌ ಜತೆ ಕಾಶಿನಗರದಲ್ಲಿ ವಾಸವಾಗಿದ್ದರು. ಆರೋಪಿ ಮರಗೆಲಸ ಮಾಡುತ್ತಿದ್ದು ಹಿರಿಯ ಪುತ್ರ ವಿಶಾಲ್‌ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿ. 2ನೇ ಪುತ್ರ ತೇಜಸ್‌ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ದುಶ್ಚಟಗಳ ದಾಸನಾಗಿದ್ದ. ಇತ್ತ ತಂದೆ ರವಿಕುಮಾರ್‌ ಮದ್ಯ ವ್ಯಸನಿಯಾಗಿದ್ದು ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಮೊಬೈಲ್‌ ರಿಪೇರಿ ವಿಚಾರವಾಗಿ ತೇಜಸ್‌ ಪೋಷಕರ ಜತೆ ಗಲಾಟೆ ಮಾಡಿದ್ದಾನೆ. ಅದರಿಂದ ಕೋಪಗೊಂಡ ತಂದೆ ಹಿಗ್ಗಾಮುಗ್ಗ ಥಳಿಸಿದ್ದರಿಂದ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next