Advertisement

Bengaluru ಬೇರೆ ಭಾಷೆಯವರ ಕೈಗೆ ಹೋಗಿದೆ: ಕಣ್ಣೀರಿನ ಕಥೆ ಎಂದ ವಾಟಾಳ್

07:23 PM Jul 17, 2023 | Team Udayavani |

ಬೆಂಗಳೂರು: ”ನಗರದಲ್ಲಿ ಕೊಲೆ ಸುಲಿಗೆಗಳು ನಿರಂತರವಾಗಿ ಹೆಚ್ಚುತ್ತಿದ್ದು ಭೀತಿಯ ವಾತಾವರಣ ನಿರ್ಮಾಣವಾಗಿದೆ. ನಗರ ಬೇರೆ ಭಾಷೆಯವರ ಕೈಗೆ ಹೋಗಿದೆ. ಇದು ಕಣ್ಣೀರಿನ ಕಥೆ” ಎಂದು ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬೆಂಗಳೂರು ನಗರದಲ್ಲಿ ಕೊಲೆ, ಬೆದರಿಕೆ ಲೂಟಿ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ಆಗಿದೆ ಎಂದು ಹೇಳುತ್ತಿಲ್ಲ. ಹತ್ತು ವರ್ಷಗಳಿಂದ ಬೆಂಗಳೂರು ಹಾಳಾಗುತ್ತಿದೆ. ಬೆಂಗಳೂರಿಗೆ ಬಹಳ ಜನ ವಲಸೆ ಬಂದಿದ್ದಾರೆ. ಬೆಂಗಳೂರು ಬೇರೆ ಭಾಷೆಯವರ ಕೈಯಲ್ಲಿ ಹೋಗಿದೆ. ಕನ್ನಡಿಗರು ಕಡಿಮೆಯಾಗುತ್ತಿದ್ದಾರೆ. ಎಲ್ಲೆಲ್ಲೂ ಹೊರಗಡೆಯವರೇ ಇದ್ದಾರೆ. ಅಂಗಡಿ, ಹೋಟೆಲ್, ರಸ್ತೆಯಲ್ಲಿ ಪಾನಿಪೂರಿ ಮಾರುವವರು, ಕಡ್ಲೆ ಕಾಯಿ ಮಾರುವವರು ಕೂಡ ಹೊರಗಿನವರು” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

”ಮೊನ್ನೆ ದಿನ ಒಂದೇ ಕಚೇರಿಯಲ್ಲಿ ಜೋಡಿ ಕೊಲೆ ಆಗಿದೆ. ನಗರದಲ್ಲಿ ಭಯ-ಭೀತಿಯ ವಾತಾವರಣ ನಿರ್ಮಾಣವಾಗಿದೆ.ಕಾರುಗಳನ್ನು ಬೆನ್ನಟ್ಟುತ್ತಾರೆ, ಹೆದರಿಸುತ್ತಾರೆ, ಬೆದರಿಸುತ್ತಾರೆ ಇದಕ್ಕೆ ಎಲ್ಲರ ಆಡಳಿತ ಜವಾಬ್ದಾರಿ. ಬೆಂಗಳೂರು ಉಳಿಸಬೇಕಾಗಿದೆ. ಹೊರಗಡೆಯಿಂದ ಬಂದವರಿಂದ ಕೊಲೆ, ಸುಲಿಗೆ ಆಗುತ್ತಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು” ಎಂದರು.

ಸುರಂಗ ಬಹಳ ಕೆಟ್ಟದ್ದು
”ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಬಹಳ ಅಭಿವೃದ್ಧಿ ಮಾಡುತ್ತೇವೆ ಅಂತ ಹೊರಟಿದ್ದಾರೆ. ಸುರಂಗ ಮಾಡುತ್ತೇವೆ ಎಂದು ಹೇಳಿದ್ದಾರೆ. ಸುರಂಗ ಮಾಡಬೇಡಿ, ಅದರಿಂದ ಬಹಳ ಅಪಾಯ ಇದೆ. ಸುರಂಗ ಬಹಳ ಕೆಟ್ಟದ್ದು, ಅದನ್ನು ಮಾಡಕೂಡದು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next