Advertisement
ಸುಸಜ್ಜಿತ ಬಹುಮಹಡಿ ಕಟ್ಟಡ, ಶಸ್ತ್ರಚಿಕಿತ್ಸಾ ವಿಭಾಗ, ತುರ್ತು ಚಿಕಿತ್ಸೆ ಹಾಗೂ ಪ್ರಯೋಗಾಲ ಯದ ಸೇವೆ ಹಾಗೂ ಹೊಸದಾಗಿ ಖರೀದಿಸಿದ್ದ ಹಾಸಿಗೆಗಳಿದ್ದರೂ, ಯಶವಂತಪುರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅನಾಥವಾಗಿದೆ. ಪ್ರತಿದಿನ ಹತ್ತಾರು ಬಡ ಗರ್ಭಿಣಿಯರು ಒಪಿಡಿ ಹಾಗೂ ಹೆರಿಗೆ ಸೇವೆಗಾಗಿ ಅಲೆದಾಡುವ ಪರಿಸ್ಥಿತಿ ಇದೆ.
Related Articles
Advertisement
ಬಿಬಿಎಂಪಿ-ಆರೋಗ್ಯ ಇಲಾಖೆ ನಡುವೆ ಗೊಂದಲ?
2020ರ ಕೋವಿಡ್ ಬಳಿಕ ನೂತನ ಆಸ್ಪತ್ರೆಯನ್ನು ಹೆರಿಗೆ ಆಸ್ಪತ್ರೆಯಾಗಿ ಉಳಿಸಿಕೊಳ್ಳಬೇಕೋ ಅಥವಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬೇಕೆ ಎನ್ನುವ ಗೊಂದಲವಿತ್ತು. ಈ ನಡುವೆ ಆರೋಗ್ಯ ಇಲಾಖೆ ಈ ಆಸ್ಪತ್ರೆಯನ್ನು ನಡೆಸಲು ಮುಂದಾಗಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದ ನಿರ್ಧಾರ ಕೈಬಿಡಲಾಗಿದೆ. ಇದೀಗ ಮತ್ತೂಮ್ಮೆ ಆಸ್ಪತ್ರೆಯನ್ನು ಸುರ್ಪದಿಗೆ ಪಡೆಯುವ ಕೆಲಸಗಳಾಗುತ್ತಿವೆ. ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸುರ್ಪದಿ ಪಡೆದುಕೊಂಡರೆ ಈ ಆಸ್ಪತ್ರೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉಳಿಯೋದು ಸ್ವಲ್ಪ ಅನುಮಾನವಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವ ಚಿಂತನೆ ಇದೆ.
ಯಶವಂತಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯು ಬಡ ಹೆಣ್ಣು ಮಕ್ಕಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿತ್ತು. ಆಸ್ಪತ್ರೆ ದುರಸ್ತಿಗೊಂಡು 8 ವರ್ಷಗಳು ಪೂರ್ಣಗೊಂಡರು ಹೆರಿಗೆ ಆಸ್ಪತ್ರೆ ಪ್ರಾರಂಭವಾಗಿಲ್ಲ. ಇದರಿಂದಾಗಿ ಬಡ ಹೆಣ್ಣುಮಕ್ಕಳು ತುರ್ತು ಸಂದರ್ಭದಲ್ಲಿ ದೂರದ ಆಸ್ಪತ್ರೆಗೆ ತೆರಳು ಪರಿಸ್ಥಿತಿ ಇದೆ. ●ನಿರ್ಮಲಾ, ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಉಪಾಧ್ಯಕ್ಷೆ
ಪ್ರತಿದಿನ ಹತ್ತಾರು ಹೆರಿಗೆಯಾಗುತ್ತಿದ್ದ ಆಸ್ಪತ್ರೆಯು ಇದೀಗ ನಮ್ಮ ಕ್ಲಿನಿಕ್ ಆಗಿದೆ. ಈ ಪ್ರದೇಶದ ಗರ್ಭಿಣಿಯರು ದೂರ ಪ್ರದೇಶಕ್ಕೆ ತೆರಳಿ ತಪಾಸಣೆ ಹಾಗೂ ಹೆರಿಗೆ ಮಾಡಿಸಿಕೊಳ್ಳಲು ಅನಿವಾರ್ಯತೆ ಇದೆ. ●ಆನಂದ, ಸ್ಥಳೀಯರು.
ಯಶವಂತಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಆರೋಗ್ಯ ಇಲಾಖೆ ಸುರ್ಪದಿಗೆ ತೆಗೆದು ಕೊಳ್ಳಲಿದೆ. ಅದಕ್ಕೆ ಸಂಬಂಧಿಸಿದ ಕೆಲಸಗಳಾಗುತ್ತಿವೆ. ಆಸ್ಪತ್ರೆಯು ಶೀಘ್ರದಲ್ಲಿ ಕಾರ್ಯಾಚರಣೆ ಮಾಡಲಿದೆ. ತಾತ್ಕಾಲಿಕವಾಗಿ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ●ವಿಕಾಸ್ ಕಿಶೋರ್ ಸುರಾಳ್ಕರ್, ಬಿಬಿಎಂಪಿ ಆರೋಗ್ಯ ಆಯುಕ್ತರು
■ ತೃಪ್ತಿ ಕುಮ್ರಗೋಡು