Advertisement

Shivamogga: ಜೀರೋ ಟ್ರಾಫಿಕ್ ನಲ್ಲಿ ಮಂಗಳೂರು ಆಸ್ಪತ್ರೆಗೆ 6 ದಿನದ ಮಗು ರವಾನೆ

08:40 PM Dec 08, 2024 | Vishnudas Patil |

ಶಿವಮೊಗ್ಗ: ತುರ್ತು ಚಿಕಿತ್ಸೆ ಆಗತ್ಯವಿದ್ದ ಹಿನ್ನಲೆಯಲ್ಲಿ ಮಗುವೊಂದನ್ನು ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಮಂಗಳೂರು ಆಸ್ಪತ್ರೆಗೆ ರವಿವಾರ(ಡಿ8) ರವಾನೆ ಮಾಡಲಾಗಿದೆ.

Advertisement

ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಸಾಗರ ಮೂಲದ ಸುಮಂಗಳ ಹಾಗೂ ಲೋಕೆಶ್ ದಂಪತಿ ಮಗು 6 ದಿನದ ಗಂಡು ಮಗುವಿಗೆ ಐದು ದಿನದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಂಗಳೂರಿಗೆ ರವಾನಿಸಲಾಗಿದೆ. ವೈದ್ಯರು, ಅಧಿಕಾರಿಗಳು ಮತ್ತು ಪೊಲೀಸರು ಮಗುವನ್ನು ರವಾನಿಸಲು ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next