Advertisement
ಹೌದು, ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 79 ಮಂದಿ ಬಾಣಂತಿಯರು ಹಾಗೂ 0-1 ವರ್ಷದೊಳಗಿನ 435 ನವಜಾತ ಶಶಿಗಳು ಕೊನೆಯಸಿರು ಎಳೆದಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ರಾಜ್ಯದ ರಾಯಚೂರು, ಕೊಪ್ಪಳ, ಬಾಗಲಕೋಟೆ ಮತ್ತಿತರ ಕಡೆಗಳಲ್ಲಿ ಬಾಣಂತಿಯರ ಸರಣಿ ಸಾವು ರಾಜ್ಯಾದ್ಯಂತ ತೀವ್ರ ಚರ್ಚೆ ಹಾಗೂ ಅಘಾತ ತಂದಿದೆ. ಆದರೆ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ತಾಯಿ, ಮಗು ಸಾವಿನ ಪ್ರಕರಣಗಳು ದಾಖಲಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಹುತೇಕ ಬಾಣಂತಿಯರು ಹಾಗೂ ಮಕ್ಕಳು ಆಸ್ಪತ್ರೆಗಳಲ್ಲಿ ಅಸುನೀಗಿರುವುದು ದುರಂತವಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಬಾಣಂತಿಯರ ಸಾವಿಗಿಂತ ನವಜಾಶು ಶಿಶುಗಳ ಮರಣದ ಸಂಖ್ಯೆ ತೀವ್ರವಾಗಿದೆ. ಕಳೆದ 5 ವರ್ಷದಲ್ಲಿ 435 0-1 ವರ್ಷದೊಳಗಿನ ನವಜಾತ ಶಿಶುಗಳು ಕೊನೆಯುಸಿರು ಎಳೆದಿವೆ. ಜಿಲ್ಲೆಯಲ್ಲಿ ಹುಟ್ಟುವ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಜೊತೆಗೆ ಕಡಿಮೆ ತೂಕ ಇರುವ ಮಕ್ಕಳು ಹೆಚ್ಚು ಮರಣ ಹೊಂದಿದ್ದಾರೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಹಾಗೂ ರಕ್ತದ ಕೊರತೆಯಿಂದ ಬಹಳಷ್ಟು ಮಕ್ಕಳು ಹುಟ್ಟಿದ ಕೂಡಲೇ ಸಾವಿನ ದಾರಿ ಕಂಡಿದ್ದಾರೆ.
ತಾಯಿ, ಮಗು ಮರಣ ತಡೆಗೆ ಏನು ಮಾಡಬೇಕು? :
ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೆ ವಿವಾಹ ಮಾಡುವುದನ್ನು ನಿಲ್ಲಿಸಬೇಕು. ಗರ್ಭಿಣಿಯರು ಕಾಲಕಾಲಕ್ಕೆ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯುವುದರ ಜೊತೆಗೆ ಆರೋಗ್ಯ ತಪಾಸಣೆಗೆ ಒಳಪಡಬೇಕು, ಗರ್ಭದಲ್ಲಿರುವ ಮಗುವಿನ ತೂಕದ ಪ್ರಮಾಣದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಬೇಕು, ಗರ್ಭಿಣಿಯರು ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು, ಗರ್ಭೀಣಿಯರಿಗೆ ಸೂಕ್ತ ಆರೈಕೆ ಮಾಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 79 ಬಾಣಂತಿಯರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ಆ ಪೈಕಿ 30 ಬಾಣಂತಿಯರು ಜಿಲ್ಲೆಯಲ್ಲಿ ಮೃತಪಟ್ಟರೆ, ಉಳಿದ 49 ಬಾಣಂತಿಯರು ಬೆಂಗಳೂರು ಮತ್ತಿತರ ಕಡೆ ಆಸ್ಪತ್ರೆಗಳಿಗೆ ಸಾಗಿಸುವಾಗ ಹೊರ ಜಿಲ್ಲೆಗಳಲ್ಲಿ ಮೃತಪಟ್ಟಿದ್ದಾರೆ. ಇನ್ನೂ 435 ನವಜಾತ ಶಿಶುಗಳು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿವೆ. ಹಿಂದಿನ ವರ್ಷಗಳಿಂದ ಹೋಲಿಸಿದರೆ ಈ ವರ್ಷದಲ್ಲಿ ಜಿಲ್ಲೆಯಲ್ಲಿ ತಾಯಿ, ಮಕ್ಕಳ ಸಾವಿನ ಪ್ರಕರಣ ಕಡಿಮೆ ಆಗಿದೆ. -ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿಗಳು.
– ಕಾಗತಿ ನಾಗರಾಜಪ್ಪ