Advertisement

ಬೆಳಗಾವಿ ಉಪಚುನಾವಣೆ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ ಹಾಕಿದ ಗ್ರಾಮಸ್ಥರು

11:21 AM Apr 17, 2021 | Team Udayavani |

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಶಾಂತಿಯುತವಾಗಿ ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆಯವರೆಗೆ ಶೇ 5.47 ರಷ್ಟು ಮತದಾನವಾಗಿದೆ.

Advertisement

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು.  ಶಾಂತಿಯುತ ಮತದಾನವಾಗುತ್ತಿರುವ ಮಧ್ಯೆ ತಮ್ಮ ಹಳ್ಳಿಯ ಸ್ಥಳಾಂತರಕ್ಕೆ ಒತ್ತಾಯಿಸಿ  ರಾಮದುರ್ಗ‌ ತಾಲೂಕಿನ  ಪ್ರವಾಹ ಪೀಡಿತ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.‌

ಇದನ್ನೂ ಓದಿ : ಮಸ್ಕಿ ಕ್ಷೇತ್ರದಲ್ಲಿ ಐದು ಕಡೆ ಮತಯಂತ್ರ ದೋಷ

ಗ್ರಾಮದ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ರಾಮದುರ್ಗ ತಾಲೂಕಿನ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಗಳ 2500 ಕ್ಕೂ ಅಧಿಕ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ.  ಕಳೆದ ವರ್ಷ ನೆರೆ ಪ್ರವಾಹದಲ್ಲಿ ತೊಂದರೆ ಒಳಗಾಗದ ಗ್ರಾಮಸ್ಥರು ಹಲವು ದಿನಗಳಿಂದ ಗ್ರಾಮವನ್ನು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next