Advertisement

ಬೀಜಾಡಿ: ಹಳದಿ ಮಳೆ ನೀರು !

12:45 AM Nov 18, 2021 | Team Udayavani |

ಕೋಟೇಶ್ವರ: ಬೀಜಾಡಿ ಕಡಲ ಕಿನಾರೆಯ ಸನಿಹದ ನಿವಾಸಿ ಯೋರ್ವರ ಮನೆಯ ಮೇಲೆ ಹಳದಿ ಮಿಶ್ರಿತ ಬಣ್ಣದ ಮಳೆಯ ಹನಿ ಸುರಿದಿದ್ದು, ಅಲ್ಲಿನ ನಿವಾಸಿಗಳಲ್ಲಿ ಕುತೂಹಲ ಹಾಗೂ ಆತಂಕಕ್ಕೆ ಎಡೆ ಮಾಡಿದೆ.

Advertisement

ಸ್ಥಳೀಯ ನಿವಾಸಿ ಪುಂಡಲೀಕ ಬಂಗೇರ ಅವರ ಮನೆಯ ಸ್ಲ್ಯಾಬ್ ಹಾಗೂ ಒಣಗಿಸಲು ಹಾಕಿರುವ ಬಟ್ಟೆ ಸಹಿತ ಗಿಡಮರಗಳ ಎಲೆಯಮೇಲೆ ಹಳದಿ ಮಿಶ್ರಿತ ಮಳೆ ನೀರು ಬಿದ್ದಿದೆ. ಒಣಗಿಸಲು ಹಾಕಿದ ಬಿಳಿ ಬಟ್ಟೆ ಮೇಲೆ ಬಿದ್ದ ಹಳದಿ ಮಿಶ್ರಿತ ಬಣ್ಣದ ಮಳೆ ನೀರಿನ ಕಲೆ ಸ್ವಚ್ಛಗೊಳಿಸಿದಾಗ ಹೋಗದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಳೆ ನೀರು ಸುಮಾರು 100 ಮೀ.ವ್ಯಾಪ್ತಿಯವರೆಗೆ ಪಸರಿಸಿರುವುದು ಕಂಡುಬಂದಿದೆ.

ಈ ಹಿಂದೆ ಅಮಾವಾಸ್ಯೆಬೈಲು ಪರಿಸರದಲ್ಲೂ ಕೂಡ ಇದೇ ರೀತಿಯ ವಿದ್ಯಮಾನ ನಡೆದಿದ್ದು, ವಾತಾವರಣದಲ್ಲಿ ರಾಸಾಯನಿಕ ವಸ್ತು ಮಿಶ್ರಣಗೊಂಡು ಈ ರೀತಿಯ ಮಳೆ ಹನಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next