Advertisement
ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 12 ಕೆರೆಗಳಿವೆ. ಅವುಗಳಲ್ಲಿ 3 ಕೆರೆಗಳ ಹೂಳೆತ್ತಲಾಗಿದೆ. ಮಿಕ್ಕುಳಿದ ಕೆರೆಗಳ ಹೂಳೆತ್ತಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಕೆಲಸಕ್ಕೆ ಯಥೇಚ್ಛ ಕಾರ್ಮಿಕರು ಲಭಿಸದಿರುವುದು ಒಂದು ಕಾರಣವಾದರೇ ಗ್ರಾಮೀಣ ಪ್ರದೇಶದ ಗ್ರಾ.ಪಂ.ಗಳಲ್ಲಿ ಸಂಪನ್ಮೂಲದ ಕೊರತೆ ಇನ್ನೊಂದು ಕಾರಣ.
ಬೀಜಾಡಿಯಲ್ಲಿ ಬೃಹತ್ 20 ಕೊಳಗಳಿವೆ. ಅವುಗಳಲ್ಲಿ ಮೂಡು ಹಾಗೂ ಪಡು ಕೊಳಗಳು ಅವಳಿ ಕೊಳಗಳು. ಇಲ್ಲಿ ಮೂಡು ಕೊಳ ಸೇರಿದಂತೆ 12 ಕೆರೆಗಳ ಹೂಳನ್ನು ಎತ್ತಲಾಗಿದೆ. ಆದರೆ 23 ಎಕರೆ ಪ್ರದೇಶದಲ್ಲಿರುವ ಪಡುಕೊಳ ಸವಾಲಾಗಿದೆ.
ಭಾರೀ ಗಾತ್ರದ ಬೀಜಾಡಿ ಪಡು ಕೊಳದಲ್ಲಿ 10 ಅಡಿ ಆಳದವರೆಗೆ ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಹೂಳೆತ್ತುವ ಕಾಮಗಾರಿಗೆ ಸಂಪನ್ಮೂಲ ಒದಗಿಸುವುದು ಸಣ್ಣ ನೀರಾವರಿ ಇಲಾಖೆಗೆ ಕಷ್ಟಸಾಧ್ಯ. ಈ ದಿಸೆಯಲ್ಲಿ ಸರಕಾರದ ಇನ್ನಿತರ ಯೋಜನೆಯಡಿ ಆರ್ಥಿಕ ಸಹಾಯ ನೀಡಿದಲ್ಲಿ ಕೆರೆಯ ಹೂಳೆತ್ತಲು ಸಾಧ್ಯ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪಡುಕೊಳ ಹೂಳೆತ್ತಲು ಬೇಕು ಅನುದಾನ
ಬೀಜಾಡಿಯ ಪಡು ಕೊಳ ಹೂಳೆತ್ತಲು ಸವಾಲಾಗಿದ್ದು, ಸರಿಸುಮಾರು 9 ಕೋಟಿ ರೂ. ಅನುದಾನ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಸರ್ವೇ ಮಾಡಿ ಕ್ರಮ ಕೈಗೊಂಡಲ್ಲಿ ಈ ಭಾಗದ ನಿವಾಸಿಗಳ ಬಹಳಷ್ಟು ವರುಷಗಳ ಬೇಡಿಕೆ ಈಡೇರಿದಂತಾಗುವುದು.
Related Articles
ಬೀಜಾಡಿ ಪಡುಕೊಳ ಸುಮಾರು 23 ಎಕರೆ ವಿಸ್ತೀರ್ಣ ಹೊಂದಿದ್ದು, ಅದರ ಹೂಳೆತ್ತಲು ಪಂಚಾಯತ್ ಸಂಪನ್ಮೂಲ ಎಲ್ಲಿಯೂ ಸಾಲದು. ಸಂಪೂರ್ಣವಾಗಿ ಹೂಳು ತುಂಬಿದ್ದು, ವಿವಿದೆಢೆ ಒತ್ತುವರಿ ಆಗಿರುವ ಬಗ್ಗೆ ಕೂಡ ದೂರು ಕೇಳಿಬರುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿವಿಧ ಯೋಜನೆಯಡಿ ಸಂಪನ್ಮೂಲ ಒದಗಿಸಿದಲ್ಲಿ ಹೂಳೆತ್ತುವ ಕೆಲಸ ಮಾಡುತ್ತೇವೆ.
– ಪ್ರಕಾಶ ಜಿ. ಪೂಜಾರಿ, ಅಧ್ಯಕ್ಷರು, ಬೀಜಾಡಿ ಗ್ರಾ.ಪಂ.
Advertisement
-ಡಾ| ಸುಧಾಕರ ನಂಬಿಯಾರ್