Advertisement

BBK11: ರಂಜಿತ್‌ ನನ್ನ ಸಹೋದರನಂತೆ.. ಮತ್ತೆ ಬಿಗ್‌ಬಾಸ್‌ ಹೋಗೋ ಬಗ್ಗೆ ಮೌನ ಮುರಿದ ಜಗದೀಶ್

06:39 PM Oct 20, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ದಲ್ಲಿ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಎಂಟ್ರಿಯಾಗಿದ್ದ ವಕೀಲ ಜಗದೀಶ್‌ (Lawyer Jagadish) ಅವರು ಅನಿರೀಕ್ಷಿತ ಘಟನೆಯೊಂದರಲ್ಲಿ ಮನೆಯಿಂದ ವಾರದ ಮಧ್ಯದಲ್ಲೇ ಆಚೆ ಬಂದಿದ್ದಾರೆ.

Advertisement

ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಅವರನ್ನು ಶೋನಿಂದ ಹೊರಗೆ ಕಳುಹಿಸಲಾಗಿದೆ. ಈ ಕುರಿತು ಅವರು ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಕಿಚ್ಚನ ಮುಂದೆ ವಿಡಿಯೋ ಕಾಲ್‌ನಲ್ಲಿ ತನ್ನ ವರ್ತನೆಗೆ ಕ್ಷಮೆ ಕೇಳಿದ್ದಾರೆ.

ಬಿಗ್‌ಬಾಸ್‌ನಿಂದ ಆಚೆ ಬಂದಿರುವ ಜಗದೀಶ್‌ ಮತ್ತೆ ಬಿಗ್‌ ಬಾಸ್‌ಗೆ ಬರಬೇಕೆನ್ನುವ ಆಗ್ರಹವನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಜಗದೀಶ್‌ ಪರ ಬೆಂಬಲ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: BBK11: ಆತ ಹೀರೋ, ಸಿಂಹವಲ್ಲ ಅವನು ಇಲಿ.. ಜಗದೀಶ್‌ ಬಗ್ಗೆ ರಂಜಿತ್‌ ಮಾತು

ಮಾಧ್ಯಮವೊಂದರ ಜತೆ ಮಾತನಾಡಿರುವ ಜಗದೀಶ್‌ ಬಿಗ್‌ ಬಾಸ್‌ ಮನೆಯ ಅನುಭವದ ಬಗ್ಗೆ ಮಾತನಾಡಿದ್ದಾರೆ.

Advertisement

ಬಿಗ್‌ ಬಾಸ್‌ ಕನ್ನಡ ಇದ್ದಂತೆ..

“ಬಿಗ್‌ ಬಾಸ್‌ ಎನ್ನುವುದು ಒಂದು ರೀತಿಯ ಕನ್ನಡಿ. ನಮ್ಮನ್ನು ಎಳೆ ಎಳೆಯಾಗಿ ಬಿಚ್ಚಿ ತೋರಿಸುವ ಕನ್ನಡಿ ಎಂದರೆ ತಪ್ಪಾಗದು. ಆ ಒಂದು ಪರೀಕ್ಷೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ. ನೀವೇ ನೋಡಿರಬಹುದು ಒಳಗಡೆ ಇರುವ ಜಗದೀಶ್‌, ಹೊರಗೆ ಇರುವ ಜಗದೀಶ್‌ ವಿಭಿನ್ನ. ಇಲ್ಲಿ ಸುಳ್ಳಿಗೆ, ಮೋಸಕ್ಕೆ, ಮುಖವಾಡಕ್ಕೆ, ಮೇಕಪ್‌ಗೆ ಜಾಗವಿಲ್ಲ. ಏನಿದ್ದರೂ ಅದನ್ನೆಲ್ಲ ಬಿಗ್‌ ಬಾಸ್‌ ತೆಗೆದು ಬಿಡುತ್ತದೆ. ನಾಲ್ಕೈದು ದಿನಗಳಲ್ಲೇ ಇದೆಲ್ಲವನ್ನು ನಾವು ತೆಗೆದಿಡಬೇಕಾಗುತ್ತದೆ. ಇಲ್ಲಂದ್ರೆ ಆ ವಾರ ಬರುವ ಪಂಚಾಯ್ತಿನಲ್ಲಿ ನಮ್ಮ ನಗ್ನತೆಯೇ ಎದ್ದು ಕಾಣುತ್ತದೆ ಇದೇ ಬಿಗ್‌ ಬಾಸ್. ಇಷ್ಟು ಕೋಟಿ ಜನರಲ್ಲಿ ನನಗೊಂದು ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಿದೆ. ನನ್ನ ಕೈಯಲ್ಲಿ ಆದದ್ದನ್ನು ನಾನು ಮಾಡಿದ್ದೇನೆ ಎಂದು ಜಗದೀಶ್‌ ಹೇಳಿದ್ದಾರೆ. ‌

ಸ್ಪರ್ಧಿಗಳ ಬಗ್ಗೆ ಏನಂದ್ರು ಜಗದೀಶ್:‌ 

ಇನ್ನು ಸ್ಪರ್ಧಿಗಳ ಬಗ್ಗೆ ಮಾತನಾಡಿದ ಅವರು, ಎಲ್ಲರೂ ಕೂಡ ಅದ್ಭುತ ಆತ್ಮಗಳು. ಅಲ್ಲಿ ಎಲ್ಲರೂ ಕೂಡ ವಿಭಿನ್ನ ವ್ಯಕ್ತಿತ್ವಗಳೇ. ಒಬ್ಬ ಹೀರೋ ಆಗಬೇಕೆಂದರೆ, ಒಬ್ಬ ವಿಲನ್‌ ಇರಲೇಬೇಕು. ಒಬ್ಬ ಹೀರೋ ಇದ್ದಾಗ, ಹೀರೋಯಿನ್‌ ಇರಲೇಬೇಕು. ಬಿಗ್‌ ಬಾಸ್‌ ಮನೆಯಲ್ಲಿ ನನಗೆ ಎಲ್ಲ ರೀತಿಯ ಪಾತ್ರಗಳು ನನಗೆ ರೆಡಿಮೇಡ್‌ ಆಗಿ ಸಿಕ್ಕಿತು. ಅದನ್ನು ನಾನು ಚೆನ್ನಾಗಿ ಬಳಸಿಕೊಂಡೆ ನನ್ನನ್ನು ಬೆಳೆಸಿಕೊಂಡೆ. ಜನರಿಗೆ ಮನರಂಜಿಸಿದೆ ನನ್ನ ಪ್ರಕಾರ ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.

ತಿವಿಕ್ರಮ್‌, ರಂಜಿತ್‌, ಭವ್ಯಾ ಜತೆಗಿನ ವಾಗ್ವಾದದ ಬಗ್ಗೆ ಮಾತನಾಡಿದ ಅವರು, ಅದು ಸಾಮಾನ್ಯ ಅಲ್ವಾ, ಯಾವುದೇ ಇಂಡಸ್ಟ್ರಿ ಬಂದಿರುವ ಯಾವುದೋ ಅಡ್ವೊಕೇಟ್‌ ಅಂತೆ. ನಾವೆಲ್ಲ ಅನೇಕ ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕಷ್ಟಪಟ್ಟು ಬಂದಿದ್ದೇವೆ. ನಾವು ಇಂಡಸ್ಟ್ರಿ ಅವರು ನಾವು ಮಾಡುವ ಪರ್ಫಮೆನ್ಸ್‌ ಅವರು ಮಾಡುತ್ತಾ ಇರುವುದರಿಂದ ಬಹುಶಃ ಅವರಿಗೆ ನೋವಾಗಿರಬಹುದು. ನನಗೆ ಅವರೇನೂ ಮಾಡಿರುವುದಕ್ಕೆ ಬೇಜಾರಿಲ್ಲ. ಅವರೆಲ್ಲ ನನ್ನ ಮನೆ ಕುಟುಂಬದವರು ಇದ್ದ ಹಾಗೆ. ಅದು ಅತಿರೇಕ ಆದದ್ದು ತಪ್ಪಾಯಿತು ಎಂದಿದ್ದಾರೆ.

ರಂಜಿತ್‌ ನನ್ನ ಸಹೋದರನಂತೆ..

ರಂಜಿತ್‌ ಅವರು ದೈಹಿಕವಾಗಿ ಹಲ್ಲೆ ಮಾಡಿದ ಪ್ರಸಂಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏನೂ ಆಗಿಲ್ಲ ಮನೆಯಂಥ ಹೇಳಿದ್ಮೇಲೆ ನನ್ನ ತಮ್ಮಂದಿರು, ಅಕ್ಕ- ತಂಗಿ ಗಲಾಟೆ ಮಾಡಿಕೊಂಡು ಬಿಡುತ್ತೀವಿ ಅದು ಸಾಮಾನ್ಯ. ಅದನ್ನು ನಾನು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ. ರಂಜಿತ್‌ ಹಾಗೆ ಮಾಡಿದ ಅಂಥ ಎಲ್ಲರೂ ಹೇಳಿದ್ರು, ಕಾಮೆಂಟ್ಸ್‌ ನೋಡಿ ನನಗೂ ಭಯ ಆಯಿತು. ರಂಜಿತ್‌ ನನ್ನ ತಮ್ಮ ಇದ್ದಂತೆ. ಅವರೆಲ್ಲ ಕಲಾವಿದರು ಅವರನ್ನು ಸಮಾಜಕ್ಕೆ ಬೇರೆ ಥರ ಬಿಂಬಿಸಬಾರದು. ನನ್ನಿಂದ ತಪ್ಪಾಗಿದ್ರೆ ನಾನು ಕ್ಷಮೆ ಕೇಳಿದ್ದೇನೆ. ಅವರ ಕಡೆಯಿಂದ ತಪ್ಪು ಆಗಿದ್ದರೆ ಅದನ್ನು ಮರೆತು ಮುಂದೆ ಸಾಗೋಣ ಎಂದು ಜಗದೀಶ್‌ ಹೇಳಿದ್ದಾರೆ.

ಅವರು ರೂಲ್ಸ್‌ ಬ್ರೇಕ್‌ ಮಾಡಿದರು. ಹಾಗಾಗಿ ಅವರನ್ನು ಹೊರಗಡೆ ಹಾಕಿದ್ದಾರೆ. ಬಹುಶಃ ಮಾತಿನಲ್ಲೇ ಇದು ಇದ್ದಿದ್ರೆ ಚೆನ್ನಾಗಿ ಇರುತಿತ್ತು. ನನಗೆ ಅನ್ನಿಸುತ್ತದೆ ರಂಜಿತ್‌ ಅವರನ್ನು ಬಲಿಪಶು ಮಾಡಿದ್ದಾರೆ. ರಂಜಿತ್‌ 14 ವರ್ಷ ತಪಸ್ಸು ಮಾಡಿ ಬಂದಂತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದ. ಆ ವ್ಯಕ್ತಿ ಬಗ್ಗೆ ನನಗೆ ಅನುಕಂಪ ಇದೆ. ಆತ ತುಂಬಾ ಒಳ್ಳೆ ವ್ಯಕ್ತಿ. ಪಾಪ ಅವರು ಕೂರ್ಗ್‌ ನಿಂದ ಬೆಂಗಳೂರಿಗೆ ಬಂದು ಇಲ್ಲಿ ಪಾತ್ರಗಳನ್ನು ಮಾಡಿ, ಲೈಫ್‌ ಮಾಡಿಕೊಂಡು, ಬಿಗ್‌ ಬಾಸ್‌ ಚೇಸ್‌ ಮಾಡಿಕೊಂಡು ಬಂದಿದ್ರು. ಆದರೆ ನರಿಗಳ ತರ ಯಾಕೆ ಸಿಲುಕಿಕೊಂಡ್ರು ಅಂಥ ಗೊತ್ತಾಗಿಲ್ಲ. ಬಹುಶಃ ಅವರೆಲ್ಲರ ಷಡ್ಯಂತ್ರಕ್ಕೆ ಅವನು ಬಲಿಪಶು ಆದ ಅಂಥ ನನಗೆ ಅನ್ನಿಸುತ್ತದೆ ಎಂದಿದ್ದಾರೆ.

ಮತ್ತೆ ಬಿಗ್‌ ಬಾಸ್‌ ಹೋಗ್ತಾರಾ?: 

ಬಿಗ್‌ ಬಾಸ್‌ ಬಗ್ಗೆ ಮತ್ತೆ ಹೋಗ್ತೀರಾ ಎನ್ನುವ ಪ್ರಶ್ನೆಗೆ ಮಾತನಾಡಿದ ಅವರು, ಇಲ್ಲ.. ಇಲ್ಲ.. ಅದರ ಬಗ್ಗೆ ನೋ ಕಾಮೆಂಟ್ಸ್‌ ಎಂದು ಹೇಳಿ ಮುಂದೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next