Advertisement
ಹನುಮಂತು ಹಾಗೂ ಗೌತಮಿ ಅವರ ತಂಡದ ನಡುವೆ ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದ ಟಾಸ್ಕ್ ಗಳಲ್ಲಿ ಗೌತಮಿ ಅವರ ತಂಡ ಸೋತಿದ್ದು ಪರಿಣಾಮ ಅವರ ತಂಡದ ಎಲ್ಲರೂ ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದಿದ್ದಾರೆ. ಇನ್ನೊಂದು ಕಡೆ ಹನುಮಂತು ಅವರ ತಂಡದ ಎಲ್ಲ ಸದಸ್ಯರು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ.
Related Articles
Advertisement
ಸೋತ್ರು ಪರವಾಗಿಲ್ಲ ಕೊನೆ ಪಕ್ಷ ಆಡೋಕ್ಕಾದ್ರು ಕೊಡಬೇಕಿತ್ತು. ಎಲಿಮಿನೇಟ್ ಆಗಿ ಬಂದಿದ್ದೀನಿ. ಒಂದೇ ಒಂದು ಟಾಸ್ಕ್ ಆಡೋಕೆ ಕೊಟ್ಟಿಲ್ಲ ಅಂದ್ರೆ ಜನ ಯಾವ ಆಧಾರದ ಮೇಲೆ ಈ ವಾರ ನನಗೆ ವೋಟ್ ಹಾಕಬೇಕೆಂದು ಚೈತ್ರಾ ಕೇಳಿದ್ದಾರೆ.
ನೀವು ಆಡುತ್ತೀನಿ ಅಂಥ ಹೇಳಿದ್ರೆ ನಾನು ಕೂರಿಸುತ್ತಾ ಇರಲಿಲ್ಲ ಎಂದು ಗೌತಮಿ ಚೈತ್ರಾ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾನು ಕೊನೆ ಗೇಮ್ ಆಡುತ್ತೇನೆ ಹೇಳಿದ್ದೆ. ಆದರೆ ಅವಕಾಶ ಕೊಡಲಿಲ್ಲವೆಂದು ಚೈತ್ರಾ ಹೇಳಿದ್ದಾರೆ.
ಇವರಿಗೆ ಅವಕಾಶ ಸಿಗದಕ್ಕೆ ನಾನು ಕಾರಣ ಅಂತೆ ಅದಕ್ಕೆ ದೇವರ ಹತ್ರ ಶಾಪ ಹಾಕುತ್ತಾರೆ. ಇವರ ಹತ್ರ ಸ್ಪೋರ್ಟ್ಸ್ ಮ್ಯಾನ್ ಶಿಪ್ ಕಲಿಯೋಕೆ ನಾನು ಬಂದಿಲ್ಲವೆಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಗೌತಮಿ ದೇವರ ಹತ್ರ ಶಾಪ ಎಲ್ಲಾ ವರ್ಕೌಟ್ ಆಗಲ್ಲವೆಂದಿದ್ದಾರೆ.
ಎಲ್ಲರೂ ಸೇಫ್ ಆದ್ರು ನೀನು ಮಾತ್ರ ಬಕ್ರಾ ಆಗೋದೆ ಎಂದು ರಜತ್ ತ್ರಿವಿಕ್ರಮ್ ಗೆ ಹೇಳಿದ್ದಾರೆ.
ಇನ್ನೊಂದು ಕಡೆ ಇದು ನನ್ನ ಬ್ಯಾಡ್ ಡೇ. ಕ್ಯಾಪ್ಟನ್ ಆಗಿ ನನ್ನ ತಂಡದಿಂದ ಒಬ್ಬರು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಿಲ್ಲ. ಬೇಜಾರ್ ಆಗುತ್ತಿದೆ ಎಂದು ಗೌತಮಿ ಹೇಳಿದ್ದಾರೆ.