Advertisement

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

06:48 PM Oct 16, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ದಲ್ಲಿ ಸ್ಪರ್ಧಿಗಳ ನಡುವಿನ ಜಗಳ ತಾರಕಕ್ಕೇರಿದೆ. ಬಿಗ್‌ಬಾಸ್‌ ಮನೆಯಲ್ಲಿ ತನಗೆ ಹೇಗೆ ಬೇಕೋ ಹಾಗೆ ಇರುತ್ತಿದ್ದ ಜಗದೀಶ್‌ ಅವರ ಮೇಲೆ ಉಳಿದ ಸ್ಪರ್ಧಿಗಳು ಮುಗಿಬಿದ್ದಿದ್ದಾರೆ. ಉಗ್ರಂ ಮಂಜು, ರಂಜಿತ್‌, ಚೈತ್ರಾ ಅವರು ಜಗದೀಶ್‌ ಅವರ ವರ್ತನೆಗೆ ಬೇಸತ್ತು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

Advertisement

ಇಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡೋದಲ್ಲ. ಹಲ್ಕಾ ಮಾತನಾಡೋದಲ್ಲ. ಹೋಗ್ತೇನೆ ಹೋಗ್ತೇನೆ ಅಂಥ ಹೇಳೋದಲ್ಲ. ತಿನ್ನೋ ಊಟಕ್ಕೆ ಗೌರವ ಕೊಡಬೇಕು. ಶೋ ಬಗ್ಗೆ ಇಲ್ಲಸಲ್ಲದ್ದು ಹೇಳೋದಲ್ಲ ಎಂದು ಮಂಜು ಇಲ್ಲಿ ಮುಖಾಮುಖಿಯಾಗಿ ಜಗದೀಶ್ ಗೆ ಹೇಳಿದ್ದಾರೆ.

ಇದು ಇಬ್ಬರ ನಡುವಿನ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದೆ. ಈ ವೇಳೆ ಬಿಗ್‌ ಬಾಸ್‌ ಮನೆಯಲ್ಲಿ ಹಲವು ಸಂಗತಿಗಳು ನಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಜಗದೀಶ್‌ ಅವರು ಮಂಜು ಅವರ ಪಕ್ಕಕ್ಕೆ ಹೋಗಿ ಮುಖಾಮುಖಿಯಾಗಿ ನಿಂತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಆದರೆ ಮುಖಾಮುಖಿ ಆಗುವ ಭರದಲ್ಲಿ ಜಗದೀಶ್‌ ಮಂಜು ಅವರ ತುಟಿಗೆ ಕಿಸ್‌ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದು ಬಿಗ್‌ ಬಾಸ್‌ ನಲ್ಲಿ ಪ್ರಸಾರವಾಗಿಲ್ಲ. ಹಾಗಾಗಿ ಈ ವಿಡಿಯೋ ಬಗ್ಗೆ ಸಂಶಯಗಳು ಎದ್ದಿವೆ.

Advertisement

ಮೂಲಗಳ ಪ್ರಕಾರ ಇದೊಂದು ಡೀಪ್‌ ಫೇಕ್‌ ವಿಡಿಯೋ ಆಗಿದ್ದು, ಎಐ ಮೂಲಕ ಎಡಿಟ್‌ ಮಾಡಿ ಯಾರೋ ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ನಾನಾ ಚರ್ಚೆಗಳು ಇದರ ಬಗ್ಗೆ ಆಗುತ್ತಿದೆ.

ಬಿಗ್‌ ಬಾಸ್‌ ಮನೆಯಿಂದ ಜಗದೀಶ್‌ – ರಂಜಿತ್‌ ಔಟ್?:

ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದಾಗ ಬಿಗ್‌ ಬಾಸ್‌ ಎಲ್ಲರನ್ನು ಕೂರಿಸಿ ಸಮಾಧಾನ ಮಾಡಲು ಯತ್ನಿಸಿದ್ದರು. ಆದರೆ ಮತ್ತೆ ಜಗದೀಶ್‌ – ರಂಜಿತ್‌ ನಡುವೆ ವಾಗ್ವಾದ ಶುರುವಾಗಿದ್ದು, ಇಬ್ಬರು ಹೊಡೆದಾಡಿಕೊಳ್ಳುವವರೆಗೂ ಇದು ಹೋಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ದೊಡ್ಮನೆಯಿಂದ ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಹೊರ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಜಗದೀಶ್‌ ಅವರು ಮನೆಯಿಂದ ಆಚೆ ಬಂದು, ತೆಗೆದುಕೊಂಡಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ಇನ್ನೊಂದು ಕಡೆ ರಂಜಿತ್‌ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದ್ದು, ಅವರು ಮನೆಯಿಂದ ಆಚೆ ಬಂದಿಲ್ಲ ಎನ್ನಲಾಗುತ್ತಿದೆ. ಯಾವುದಕ್ಕೂ ವಾಹಿನಿಯಿಂದಲೇ ಅಧಿಕೃತ ವಿಚಾರ ತಿಳಿದುಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next