Advertisement

ಖಾಸಗಿ ಶಾಲೆಗಳಿಗೆ ಅನುದಾನಕ್ಕೆ ಪ್ರಯತ್ನ

03:09 PM Oct 03, 2019 | Team Udayavani |

ಬಸವಕಲ್ಯಾಣ: ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಸಿಗುವಂತೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು.

Advertisement

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆ ಆಡಳಿತ ಮಂಡಳಿ ಸಂಘದ ವತಿಯಿಂದ ನಗರದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕ್ಷೇತ್ರ ಹಾಗೂ ಹಳ್ಳಿ ಅಭಿವೃದ್ಧಿಯಾಗಬೇಕಾದರೆ ಶಾಲೆಗಳು ಸುಸಜ್ಜಿತವಾಗಿರಬೇಕು. ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿಕೊಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನುದಾನ ರಹಿತ ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಿ ಕಾಮಗಾರಿ ಆರಂಭಕ್ಕೆ 20 ಕೋಟಿ ರೂ. ಬಿಡುಗಡೆಗೆ ಆದೇಶ ನೀಡಿದ್ದಾರೆ.

ಅಲ್ಲದೇ ಹೈ.ಕ.ವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಈ ಭಾಗದ ಜನರ ಬಹುದಿನಗಳ ಕನಸು ಸಾಕಾರಗೊಳಿಸಿದ್ದಾರೆ ಎಂದು ನುಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದದಿಂದ 9 ಬೇಡಿಕೆಗಳ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಭರಶೆಟ್ಟಿ, ರಾಜ್ಯಕ್ಕೆ ಹೋಲಿಸಿದರೆ ಬೀದರ ಜಿಲ್ಲೆಯಲ್ಲಿ ಅನುದಾನ ರಹಿತ ಶಾಲೆಗಳು ಹೆಚ್ಚಾಗಿವೆ. ಆದರೆ ಬಹಳಷ್ಟು ಶೋಚನೀಯ ಸ್ಥಿತಿಯಲ್ಲಿವೆ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಕೊಡಿಸುವ ಹಕ್ಕು ಶಾಸಕರಿಗಿದೆ. ಅದನ್ನು ಪ್ರಮಾಣಿಕತೆಯಿಂದ ಮಾಡಬೇಕು ಎಂದು ಕೋರಿದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ರಾಜೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕ.ಕ. ಹೋರಾಟಗಾರರಾದ ಶಿವರಾಜ ಪಾಟೀಲ ಹಖ್ಯಾಳ, ಶಂಕರರಾವ ಹೊನ್ನಾ, ದೇವೀಂದ್ರ ಕಮಾಲ, ಗುಣವಂತರಾವ್‌ ಮಂಗಳೂರೆ, ಅನೀಲಕುಮಾರ ಬೇಲ್ದಾರ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಗುರುನಾಥರೆಡ್ಡಿ ಚಿಂತಾಕಿ, ಮುಕ್ರಮ ಪಟೇಲ್‌, ನಾರಾಯಣ ರಾಮಪುರೆ, ರಾಜಕುಮಾರ ಅಮಲಾಪುರೆ, ಬಸವರಾಜ ಶೆಟಗಾರ, ಸುರೇಶ ಪಾಟೀಲ, ದೀಪಕ ಗುಡ್ಡಾ, ದಿಲೀಪಗಿರಿ ಗೋಸ್ವಾಮಿ, ಎಂ.ಡಿ. ಅಬ್ದುಲ್‌ ಖಲಿಲ ಗೋಬ್ರೆ, ವಿ.ಟಿ. ಶಿಂಧೆ, ದತ್ತಾತ್ರಿ ಮೂಲಗೆ, ಸೈಯ್ಯದ್‌ ಎಜಾಜ್‌, ರೇವಣಸಿದ್ದಪ್ಪ ಬಿರಾದಾರ, ಜೀತು ನಾರಾಯಣರಾವ್‌, ಎಜಾಜ್‌ ಭೋಸ್ಗಾ, ಮನೋಜ ಮುಡಬಿ, ಬಸವರಾಜ ಮುಸ್ತಾಪುರೆ, ಮಹಾದೇವ ಎನ್‌.ಯಲ್ಲಾಪಿ ಇದ್ದರು. ಸಂಘದ ತಾಲೂಕು ಅಧ್ಯಕ್ಷ ಧನರಾಜ ಎಸ್‌.ದೋಡ್ಡಮನಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next