Advertisement

ಬಂಟ್ವಾಳ: 2.83 ಕೋ.ರೂ.ಗಳಲ್ಲಿ 36 ಕಾಲುಸಂಕ ಮಂಜೂರು

02:49 AM Jul 07, 2020 | Sriram |

ವಿಶೇಷ ವರದಿ- ಬಂಟ್ವಾಳ: ಗ್ರಾಮೀಣ ಭಾಗಗಳಿಂದ ಸರಕಾರಿ ಶಾಲೆಗಳನ್ನು ಸಂಪರ್ಕಿಸುವ ವಿದ್ಯಾರ್ಥಿಗಳಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಸರಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಶಾಲಾ ಸಂಪರ್ಕ ಸೇತು ಯೋಜನೆಯಡಿ ಕಾಲುಸಂಕಗಳಿಗೆ ಅನು ದಾನ ನೀಡುತ್ತಿದ್ದು, 2019-20ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿಗೆ ಒಟ್ಟು 2.83 ಕೋ.ರೂ. ಅನುದಾನದಲ್ಲಿ 36 ಕಾಲುಸಂಕಗಳು ಮಂಜೂರಾಗಿದ್ದು, ಕೆಲವು ಪೂರ್ಣಗೊಂಡಿದ್ದು, ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

ಈ ಕಾಲುಸಂಕಗಳು ಆಯಾಯ ವಿಧಾನಸಭೆ ಕ್ಷೇತ್ರಗಳ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಬಂಟ್ವಾಳ ತಾಲೂಕು ಮೂರು ಕ್ಷೇತ್ರಗಳಿಗೆ ಹಂಚಿ ಕೊಂಡಿರುವ ಹಿನ್ನೆಲೆಯಲ್ಲಿ ಆಯಾಯ ಶಾಸಕರ ಮೂಲಕ ಅನುದಾನ ಮೀಸ ಲಿಡಲಾಗುತ್ತದೆ. ಪ್ರಸ್ತುತ ತಾಲೂಕಿನ ಬಂಟ್ವಾಳ ಕ್ಷೇತ್ರದಲ್ಲಿ 148.58 ಲಕ್ಷ ರೂ., ಪುತ್ತೂರು ಕ್ಷೇತ್ರ 117.45 ಲಕ್ಷ ರೂ., ಮಂಗಳೂರು ಕ್ಷೇತ್ರ 17.10 ಲಕ್ಷ ರೂ. ಅನುದಾನದಲ್ಲಿ ಕಾಲುಸಂಕಗಳು ನಿರ್ಮಾಣಗೊಳ್ಳುತ್ತಿವೆ.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಅವಧಿಯಲ್ಲಿ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೆ ಬಂದಿದ್ದು, ಇದಕ್ಕೆ ಅನುದಾನ ಮೀಸಲಿಡ ಬೇಕಾದರೆ ನಿರ್ದಿಷ್ಟ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಪ್ರದೇಶದ ತೋಡಿನಿಂದ ತೊಂದರೆಯಾಗುತ್ತದೆ ಎಂಬುದನ್ನು ದಾಖಲಿಸಬೇಕಾಗುತ್ತದೆ.

ಪುತ್ತೂರು ಕ್ಷೇತ್ರ
ಪುತ್ತೂರು ಕ್ಷೇತ್ರದಲ್ಲಿ 18 ಕಾಲುಸಂಕಗಳು ನಿರ್ಮಾಣಗೊಳ್ಳುತ್ತಿದ್ದು, ಬಿಳಿಯೂರಿನ ಮನ್ನೇವು 7.50 ಲಕ್ಷ ರೂ., ಇರುವೈಲುನಲ್ಲಿ 4.95 ಲಕ್ಷ ರೂ., ಕಳಿಂಜದಲ್ಲಿ 4 ಲಕ್ಷ ರೂ., ಕೆದಿಲದ ಸತ್ತಿಕಲ್ಲುಬೈಲು, ರಾಜಾಲು ತಲಾ 7 ಲಕ್ಷ ರೂ., ಕುಕ್ಕಾಜೆ 6 ಲಕ್ಷ ರೂ., ಅಳಿಕೆಯ ಮಿತ್ತಳಿಕೆ ದೂಜಮೂಲೆ 7 ಲಕ್ಷ ರೂ., ಚೆಂಡುಕೊಳ ಹೊಸಮನೆ 4 ಲಕ್ಷ ರೂ., ಕೇಕನಾಜೆ 7 ಲಕ್ಷ ರೂ., ವಿಟ್ಲಮುಟ್ನೂರಿನ ತೋಡಬದಿ, ಕಲುವಾಜೆ, ಕಟ್ಟತ್ತಿಲದಲ್ಲಿ ತಲಾ 7 ಲಕ್ಷ ರೂ., ಮಾಣಿಲದ ದಂಡೆಪಾಡಿ, ಮೈಂದಗದ್ದೆಯಲ್ಲಿ ತಲಾ 7 ಲಕ್ಷ ರೂ., ಪೆರುವಾಯಿಯ ಪೇರಡ್ಕದಲ್ಲಿ 7 ಲಕ್ಷ ರೂ., ವಿಟ್ಲದ ಪಾದೆ ಅಂಗಡಿ, ಗೋಳಿತ್ತಡಿ, ಮುದೂರುನಲ್ಲಿ ತಲಾ 7 ಲಕ್ಷ ರೂ.ಗಳಲ್ಲಿ ಕಾಲುಸಂಕ ನಿರ್ಮಾಣಗೊಳ್ಳಲಿದೆ.

ಮಂಗಳೂರು ಕ್ಷೇತ್ರ
ಮಂಗಳೂರು ಕ್ಷೇತ್ರದಲ್ಲಿ ಮೂರು ಕಾಲುಸಂಕಗಳು ನಿರ್ಮಾಣಗೊಳ್ಳಲಿದ್ದು, ಸಜೀಪನಡುವಿನ ಬೈಲಗುತ್ತು 2.10 ಲಕ್ಷ ರೂ., ಬಾಳೆಪುಣಿಯ ಹೊಸ್ಮಾರುನಲ್ಲಿ 10 ಲಕ್ಷ ರೂ., ಚೇಳೂರಿನ ಮಠ ಕೊಪ್ಪಳ ಹಳ್ಳದಲ್ಲಿ 5 ಲಕ್ಷ ರೂ.ಗಳಲ್ಲಿ ಕಾಲುಸಂಕ ನಿರ್ಮಾಣವಾಗಲಿವೆ. ಇದರಲ್ಲಿ ಬಾಳೆಪುಣಿ, ಚೇಳೂರಿನ ಕಾಲು ಸಂಕದಲ್ಲಿ ಲಘುವಾಹನ ಕೂಡ ಸಾಗಬಹುದಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

Advertisement

ಬಂಟ್ವಾಳ ಕ್ಷೇತ್ರ
ಬಂಟ್ವಾಳ ಕ್ಷೇತ್ರಕ್ಕೆ ಒಟ್ಟು 15 ಕಾಲುಸಂಕಗಳು ಮಂಜೂರಾಗಿದ್ದು, ಕೊಳ್ನಾಡಿನ ಕುಲ್ಯಾರು, ನಾರ್ಶದಲ್ಲಿ ತಲಾ 10 ಲಕ್ಷ ರೂ., ಕಾವಳಮೂಡೂರಿನ ಕಲಾಯಿ 10 ಲಕ್ಷ ರೂ., ಗೋಳ್ತಮಜಲಿನ ಅಮೂrರು ಬಂಡಸಾಲೆ, ಅಮೂrರು ಕೆದ್ದದಲ್ಲಿ ತಲಾ 10 ಲಕ್ಷ ರೂ., ಕಡೇಶ್ವಾಲ್ಯದ ಮುಂಡಲಾ, ರಾಜಾಲುನಲ್ಲಿ ತಲಾ 10 ಲಕ್ಷ ರೂ., ಪೆರಾಜೆಯ ಮಂಜೊಟ್ಟಿಯಲ್ಲಿ 10 ಲಕ್ಷ ರೂ., ಕನ್ಯಾನದ ಮಂಡ್ನೂರುನಲ್ಲಿ 9.50 ಲಕ್ಷ ರೂ., ಮುಡುಪಡುಕೋಡಿಯ ಮುನ್ನೂರುಪಾದೆಯಲ್ಲಿ 9.50 ಲಕ್ಷ ರೂ., ಉಳಿಯಲ್ಲಿ 10 ಲಕ್ಷ ರೂ., ಬರಿಮಾರಿನ ಅಲೆತ್ತಿಮಾರುನಲ್ಲಿ 10 ಲಕ್ಷ ರೂ., ಬಾಳ್ತಿಲದ ಕಂಠಿಕದಲ್ಲಿ 10 ಲಕ್ಷ ರೂ., ಸಾಲೆತ್ತೂರಿನಲ್ಲಿ 10 ಲಕ್ಷ ರೂ., ಪಾಣೆಮಂಗಳೂರಿನ ಬೋಳಂಗಡಿ ಅಶ್ವತ್ಥಕಟ್ಟೆಯಲ್ಲಿ 9.58 ಲಕ್ಷ ರೂ.ವೆಚ್ಚದಲ್ಲಿ ಕಾಲುಸಂಕ ನಿರ್ಮಾಣವಾಗಲಿವೆ.

ಮೂರು ಕ್ಷೇತ್ರಗಳಿಗೆ ವಿಂಗಡಣೆ
ಬಂಟ್ವಾಳ ತಾ| ವ್ಯಾಪ್ತಿಯ 3 ವಿಧಾನಸಭೆ ಕ್ಷೇತ್ರಗಳಿಗೆ ವಿಂಗ ಡಣೆ ಮಾಡಿಕೊಂಡು ಶಾಲಾ ಸಂಪರ್ಕಸೇತು ಯೋಜನೆಯ ಕಾಲುಸಂಕಗಳಿಗೆ ಅನುದಾನ ಮೀಸಲಿಡಲಾಗುತ್ತದೆ. 2019- 20ನೇ ಸಾಲಿನಲ್ಲಿ ಒಟ್ಟು 36 ಕಾಲು ಸಂಕಗಳು ನಿರ್ಮಾಣವಾಗ ಬೇಕಿದ್ದು, ಕೆಲವೊಂದರ ಕಾಮಗಾರಿಗಳು ಪೂರ್ಣಗೊಂಡಿವೆ.
– ಷಣ್ಮುಗಂ, ಸ.ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next