Advertisement

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

12:57 PM Nov 05, 2024 | Team Udayavani |

ಬೆಳ್ತಂಗಡಿ: ಮಳೆ ಪ್ರಮಾಣ ಹೆಚ್ಚಾಗಿಧ್ದೋ ಒಟ್ಟಿನಲ್ಲಿ ಬೆಳ್ತಂಗಡಿಯ ಗ್ರಾಮೀಣ, ರಾಜ್ಯ, ರಾಷ್ಟ್ರೀಯ ರಸ್ತೆಗಳು ತೀರ ಹದಗೆಟ್ಟ ಪರಿಣಾಮ ರಸ್ತೆ ಸಂಚಾರ ದುಸ್ತರವಾಗಿದೆ.

Advertisement

ಬೆಳ್ತಂಗಡಿಯಲ್ಲಿ ಈಗಾಗಲೆ ಪುಂಜಾಲ ಕಟ್ಟೆಯಿಂದ ಚಾರ್ಮಾಡಿವರೆಗೆ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ನಡೆಯು ತ್ತಿದೆ. ತೇಪೆ ಕಾರ್ಯವೂ ಸಾಗಿದೆ.ಆದರೂ ಒಂದಷ್ಟು ಸಮಸ್ಯೆಗಳಿವೆ.

ಗ್ರಾಮೀಣ ರಸ್ತೆಗಳಲ್ಲೂ ಹೊಂಡಗುಂಡಿ
ಬೆಳ್ತಂಗಡಿ ತಾಲೂಕು ರಾಜ್ಯದಲ್ಲೇ ಅತೀ ಹೆಚ್ಚು ವಿಸ್ತಾರ ಹೊಂದಿರುವುದರಿಂದ ಅನೇಕ ಗ್ರಾಮೀಣ ರಸ್ತೆಗಳು, ರಾಜ್ಯ ರಸ್ತೆಗಳು ಹಾದು ಹೋಗುತ್ತಿವೆ. ಅನೇಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿದ್ದವು. ಆದರೆ ಈ ವರ್ಷದ ಮಳೆಗೆ ಹದಗೆಟ್ಟಿದೆ. ಪ್ರಮುಖವಾಗಿ ಲಾೖಲದಿಂದ ಕೊಲ್ಲಿ, ದಿಡುಪೆ, ಕಾಜೂರು ಸಾಗುವ ರಸ್ತೆಯಲ್ಲಿ ಲಾೖಲದಿಂದ ಮುಂದೆ ಸಾಗಿದಂತೆ ನಾವೂರು ವರೆಗೆ ರಸ್ತೆಗಳು ಅಲ್ಲಲ್ಲಿ ಹೊಂಡಮಯವಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು, ಬಸ್‌ ಸಂಚಾರ ಇರುವ ಈ ರಸ್ತೆ ವಾಹನಗಳ ಸಂಚಾರದಿಂದ ಕೂಡಿರುತ್ತದೆ. ಈ ರಸ್ತೆಯಲ್ಲಿ ಕನಿಷ್ಠ ಹೊಂಡ ಮುಚ್ಚಲು ಬದಲಿ ಕಾರ್ಯ ನಡೆಸಿಲ್ಲ.

ಕುತ್ರೊಟ್ಟು-ಟಿ.ಬಿ.ಕ್ರಾಸ್‌ ರಸ್ತೆ
ಕುತ್ರೊಟ್ಟುವಿನಿಂದ ಲಾೖಲ ಟಿ.ಬಿ.ಕ್ರಾಸ್‌ (ಉಜಿರೆ) ಸಾಗುವ ರಸ್ತೆಯೂ ಕಳೆದ ಎರಡು ವರ್ಷಗಳಿಂದ ಜಲ್ಲಿ ಹಾಕಿ ಬಿಟ್ಟಿದ್ದು, ಸುಮಾರು 3 ಕಿ.ಮೀ. ರಸ್ತೆ ಡಾಮರೀಕರಣವಿಲ್ಲದೆ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ. ಇದು ನಾವೂರು, ನಡದಿಂದ ಉಜಿರೆಗೆ ಸಾಗುವಲ್ಲಿ ತೀರ ಹತ್ತಿರ ರಸ್ತೆಯಾಗಿದೆ. ಇದಕ್ಕೆ ಅನುದಾನದ ಕೊರತೆಯಿಂದ ಡಾಮರೀಕರಣದ ಭಾಗ್ಯವಿಲ್ಲ.

Advertisement

ಚಂದ್ಕೂರು ದೇವಸ್ಥಾನ ರಸ್ತೆ
ಇತಿಹಾಸ ಪ್ರಸಿದ್ಧ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗುವ ರಸ್ತೆ ತೀರ ಹಳೆಯದಾಗಿದ್ದು ಇನ್ನೂ ಈ ರಸ್ತೆಗೆ ಸಮರ್ಪಕ ಡಾಮರೀಕರಣ ಭಾಗ್ಯ ಸಿಕ್ಕಿಲ್ಲ. ನಡ ಹಾಗೂ ಲಾೖಲ ಗ್ರಾಮ ಪಂಚಾಯತ್‌ಗೆ ಹೊಂದಿಕೊಂಡಿರುವ ಈ ಪ್ರದೇಶಕ್ಕೆ ಕಳೆದ ಅವಧಿಯಲ್ಲಿ ಕಿಂಡಿ ಅಣೆಕಟ್ಟು ಸಹಿತ ರಸ್ತೆ ಭಾಗ್ಯ ದೊರೆತಿತ್ತು. ಆದರೆ ಬಳಿಕ ಯಾವುದೇ ಅಭಿವೃದ್ಧಿ ಭಾಗ್ಯ ದೊರೆತಿಲ್ಲ.

ಕಾಶಿಬೆಟ್ಟು ಅರಳಿ ರಸ್ತೆ
ಕಾಶಿಬೆಟ್ಟುವಿನಿಂದ ಅರಳಿಯಾಗಿ ಮುಂದೆ ಸಾಗಿ ಉಜಿರೆ ಹಾಗೂ ಬೆಳಾಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 10 ವರ್ಷಗಳಿಂದ ಡಾಮರು ಕಂಡಿಲ್ಲ. ಹೊಂಡಮಯ ರಸ್ತೆಗೆ ಕಳೆದ ಅವಧಿಯಲ್ಲಿ ಡಾಮರೀಕರಣ ಭರವಸೆ ಸಿಕ್ಕು ಅರಳಿಯಲ್ಲಿ ಜಲ್ಲಿ ಹಾಸಿ ಬಿಡಲಾಗಿತ್ತು. ಆದರೆ ಡಾಮರೀಕರಣ ಮತ್ತೆ ಹಾಗೆ ಉಳಿದುಕೊಂಡಿದೆ. ಇದೇ ರಸ್ತೆಯಾಗಿ ಮುಂದೆ ಅರಳಿ ಕಿರಿಯಾಡಿ ದೇವಸ್ಥಾನವವಾಗಿ ಬೆಳಾಲು ಸಂಪರ್ಕ ಸಾಗಿಸುವ ರಸ್ತೆಗೆ ಕಾಂಕ್ರೀಟ್‌ ಬೇಡಿಕೆಯಿದ್ದರೂ ಇನ್ನೂ ಅನಾದಿಕಾಲದಿಂದ ಕೆಲವಷ್ಟು ದೂರ ಮಣ್ಣಿನ ರಸ್ತೆಯಲ್ಲೇ ದಿನ ದೂಡುವಂತಾಗಿದೆ. ಈ ಭಾಗದಲ್ಲಿ ನೂರಾರು ಮನೆಗಳಿವೆ.

ಉಜಿರೆ-ಪೆರಿಯಶಾಂತಿ ರಸ್ತೆ
ಉಜಿರೆಯಿಂದ ಪೆರಿಯಶಾಂತಿ ಸಾಗುವ ರಾಜ್ಯ ರಸ್ತೆ ಈಗಾಗಲೆ ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಪ್ರಸಕ್ತ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಯುತ್ತಿದ್ದು ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಕಾಯುತ್ತಿದೆ. ನೀರಚಿಲುಮೆ, ಧರ್ಮಸ್ಥಳ ಸಾಗುವ ಮಧ್ಯೆ ನಿಡ್ಲೆ, ಕೊಕ್ಕಡ ರಸ್ತೆಗಳು ತೀರ ಹದಗೆಟ್ಟಿವೆ. ಇವುಗಳ ಅಭಿವೃದ್ಧಿ ಅಗತ್ಯವಾಗಿದೆ.

ವೇಣೂರು-ಕಾರ್ಕಳ ರಸ್ತೆಗಳು ಅಭಿವೃದ್ಧಿ ಹೊಂದಿದ್ದು, ಕೆಲವೆಡೆ ಅಲ್ಲಲ್ಲಿ ಹೊಂಡ ಗುಂಡಿಗಳಾಗಿದ್ದು ಅಗತ್ಯಕಾಮಗಾರಿ ನಡೆಯಬೇಕಿದೆ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next