Advertisement
ರಾಜಧಾನಿ ಢಾಕಾದಲ್ಲಿ ಪ್ರತಿಭಟನಾ ನಿರತರಾಗಿದ್ದ ಬೃಹತ್ ಗುಂಪು ಹಿಂದೂ ಧರ್ಮಕ್ಕೆ ಸೇರಿದ ನಾಲ್ಕು ದೇವಾಲಯಗಳಿಗೆ ಕೆಲವು ಹಾನಿ ಉಂಟು ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ, ಹಿಂದೂ, ಬೌದ್ಧ, ಕ್ರಿಶ್ಚಿಯನ್ ಸಂಘಟನೆ ಮುಖಂಡ ಕಾಜೋಲ್ ದೇಬ್‌ನಾಥ್ ಹೇಳಿದ್ದಾರೆ.
ಪ್ರತಿಭಟನಾಕಾರರು ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ಇಸ್ಕಾನ್, ಕಾಳಿ ದೇಗುಲ ಸೇರಿದಂತೆ ಹಲವು ಹಿಂದೂ ದೇಗುಲಗಳ ಗುರಿಯಾಗಿಸಿ ಹಾನಿ ಮಾಡಿದ್ದಾರೆ. ಹಿಂಸಾಚಾರದ ವೇಳೆ ಇಬ್ಬರು ಹಿಂದೂ ಕೌನ್ಸಿಲರ್‌ಗಳನ್ನೂ ಹತ್ಯೆಗೈಯ್ಯಲಾಗಿದೆ. ಹಿಂದೂ ಧರ್ಮೀಯರ ಮನೆಗಳ ಮೇಲೂ ದಾಳಿ ನಡೆದಿದೆ. ಅವಾಮಿ ಲೀಗ್ ಪಕ್ಷಕ್ಕೆ ಸೇರಿದ ಕೌನ್ಸಿಲರ್‌ಗ ಳಾದ ಹರಾಧನ್ ರಾಯ್ ಮತ್ತು ಕಾಜಲ್ ರಾಯ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಮ್ಮ ಶ್ರದ್ಧೆಯ ಕಟ್ಟಡಗಳಿಗೆ ಅಲ್ಪಮಟ್ಟಿನ ಹಾನಿಗಳ ಮಾಡಿದ್ದಾರೆ ಎಂದು ಹಿಂದೂ ಮುಖಂಡರೊಬ್ಬರು ಹೇಳಿದ್ದಾರೆ. ಢಾಕಾದ ಧನ್‌ಮೊಂಡಿ ಪ್ರದೇಶದಲ್ಲಿನ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರಕ್ಕೆ ಕೂಡ ಉದ್ರಿಕ್ತ ಬೃಹತ್ ಗುಂಪಿನಿಂದ ಹಾನಿ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.
Related Articles
ಢಾಕಾದ ಧನ್‌ಮೊಂಡಿ ಪ್ರದೇಶದಲ್ಲಿರುವ ಶೇಖ್ ಹಸೀನಾ ತಂದೆ ಶೇಖ್ ಮುಜಿಬೀರ್ ರೆಹಮಾನ್‌ಗೆ ಸಮರ್ಪಿತವಾಗಿರುವ ಬಂಗಬಂಧು ಮೆಮೊರಿಯಲ್ ಮ್ಯೂಸಿಯಂ ಹಾಗೂ ಅದರ ಬಳಿಯ ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದಾರೆ.
Advertisement