Advertisement

Minority Attack: ಬಾಂಗ್ಲಾದಲ್ಲಿ ಭಾರತದ ಬಸ್‌ ಮೇಲೆ ದಾಳಿ, ದೇಶ ವಿರೋಧಿ ಘೋಷಣೆ!

04:24 AM Dec 02, 2024 | Team Udayavani |

ಢಾಕಾ: ತ್ರಿಪುರಾದ ಅಗರ್ತಲಾದಿಂದ ಪಶ್ಚಿಮ ಬಂಗಾಲದ ಕೋಲ್ಕತಾಕ್ಕೆ ಬಾಂಗ್ಲಾದ ರಾಜಧಾನಿ ಢಾಕಾ ಮಾರ್ಗವಾಗಿ ಬರುತ್ತಿದ್ದ ಭಾರತದ ಬಸ್‌ ಮೇಲೆ ಬಾಂಗ್ಲಾದೇಶಿಗರು ದಾಳಿ ನಡೆಸಿ, ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿ, ಭಾರತ ವಿರೋಧಿ ಘೋಷಣೆ ಕೂಗಿದ ಘಟನೆ ನಡೆದಿದೆ. ಬಾಂಗ್ಲಾದ ಬ್ರಹ್ಮಾನ್‌ಬಾರಿಯ ಬಿಶ್ವಾ ರೋಡ್‌ನ‌ಲ್ಲಿ ಈ ಕೃತ್ಯ ನಡೆದಿದೆ ಎಂದು ತ್ರಿಪುರಾದ ಸಾರಿಗೆ ಸಚಿವ ಸುಶಾಂತ ಚೌಧರಿ ರವಿವಾರ ತಿಳಿಸಿದ್ದಾರೆ.

Advertisement

ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ದಾಳಿ ಮುಂದುವರಿದಿರುವಂತೆಯೇ ಈ ಘಟನೆ ಮಹತ್ವ ಪಡೆದಿದೆ. ಬಸ್‌ ಸರಿಯಾದ ಮಾರ್ಗದಲ್ಲಿ ಬರುತ್ತಿದ್ದರೂ ಉದ್ದೇಶಪೂರ್ವಕವಾಗಿ ಟ್ರಕ್‌ ಒಂದು ಢಿಕ್ಕಿ ಹೊಡೆದಿದೆ. ಇದೇ ವೇಳೆ ಬಸ್‌ ಎದುರಿಗೆ ಆಟೋ ರಿಕ್ಷಾ ಬಂದಿದ್ದು, ಬಸ್‌ ಮತ್ತು ಆಟೋಗೆ ಢಿಕ್ಕಿಯಾಗಿದೆ. ತತ್‌ಕ್ಷಣವೇ ಸ್ಥಳೀಯರು ಜಮಾಯಿಸಿ ಕೃತ್ಯ ಎಸಗಿದ್ದಾರೆ ಎಂದು ಚೌಧರಿ ತಿಳಿಸಿದ್ದಾರೆ.

ಜಾಮೀನು ಅರ್ಜಿ ಇಂದು ವಿಚಾರಣೆ:
ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಚಿನ್ಮಯ್‌ ಕೃಷ್ಣ ದಾಸ್‌ ಜಾಮೀನು ಅರ್ಜಿ ವಿಚಾರಣೆ ಸೋಮವಾರ ಛತ್ತೋಗ್ರಾಮ ಕೋರ್ಟ್‌ನಲ್ಲಿ ನಡೆಯಲಿದೆ.

ಪತ್ರಕರ್ತೆ ಮೇಲೆ ಗುಂಪು ದಾಂಧಲೆ
ಬಾಂಗ್ಲಾದ ಪತ್ರಕರ್ತೆ ಮುನ್ನಿ ಸಾಹಾ ಅವರನ್ನು ಜನರ ಗುಂಪೊಂದು ಸುತ್ತುವರಿದು ನಿಂದಿಸಿರುವ ಘಟನೆ ಢಾಕಾ ದಲ್ಲಿ ನಡೆದಿದೆ. ಬಾಂಗ್ಲಾವನ್ನು ಭಾರತದ ಭಾಗವನ್ನಾಗಿಸಲು ಪ್ರಯತ್ನಿಸುತ್ತಿದ್ದೀಯ, ನಿನ್ನ ಕೈಗೆ ವಿದ್ಯಾರ್ಥಿಗಳ ರಕ್ತ ಮೆತ್ತಿದೆ ಎಂದು ಆ ಗುಂಪು ದೂರಿ ದೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಮುನ್ನಿ ಅವರನ್ನು ವಶಕ್ಕೆ ಪಡೆದು,  ಬ ಳಿಕ ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next