Advertisement
ಢಾಕಾದಲ್ಲಿ ಭಾರತದ ಹೈಕಮಿ ಷನರ್ ಆಗಿರುವ ಪ್ರಣಯ್ ವರ್ಮಾ ಅವರನ್ನು ಕರೆಸಿಕೊಂಡು ಈ ಬಗ್ಗೆ ಆಕ್ಷೇಪ ಸಲ್ಲಿಸಲಾಗಿದೆ. ಜತೆಗೆ ಅಗರ್ತಲಾದಲ್ಲಿರುವ ಸಹಾಯಕ ದೂತಾವಾಸ ಕಚೇರಿಯಲ್ಲಿ ಎಲ್ಲ ರೀತಿಯ ವೀಸಾ ಸೇವೆಗಳನ್ನು ರದ್ದುಗೊಳಿಸಿರುವುದಾಗಿಯೂ ಬಾಂಗ್ಲಾದೇಶ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ವಕೀಲರ ಗೈರು: ಕೃಷ್ಣದಾಸ್ ಜಾಮೀನು ಅರ್ಜಿ ಜನವರಿಗೆ
ಢಾಕಾ: ಬಾಂಗ್ಲಾ ದೇಶದಲ್ಲಿ ಬಂಧನಕ್ಕೊಳಗಾದ ಧಾರ್ಮಿಕ ಮುಖಂಡ ಚಿನ್ಮಯ್ ಕೃಷ್ಣದಾಸ್ ಜಾಮೀನು ಅರ್ಜಿ ಜ.2ರಂದು ನಡೆಯಲಿದೆ. ಅವರ ಪರ ವಕೀಲ ರಾಮನ್ ರಾಯ್ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆಸಲಾಗಿತ್ತು. ಆ ಘಟನೆ ಬಳಿಕ ಅವರ ಪರವಾದ ಮಂಡಿಸಲು ಬೇರೆ ವಕೀಲರು ಮುಂದೆ ಬಂದಿಲ್ಲ. ಹೀಗಾಗಿ, ಅವರಿಗೆ ಮಂಗಳ ವಾರ ಜಾಮೀನು ಸಿಕ್ಕಿಲ್ಲ. ಹೀಗಾಗಿ ಛತ್ತೋಗ್ರಾಮ್ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ವಿಚಾರಣೆಯನ್ನು 2025ರ ಜ.2ಕ್ಕೆ ಮುಂದೂಡಿದೆ.
Related Articles
ಢಾಕಾ: ಭಾರತದ ಎಲ್ಲ ಚಾನೆಲ್ಗಳ ಪ್ರಸಾರ ನಿಷೇಧಿಸುವಂತೆ ಬಾಂಗ್ಲಾದೇಶದ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ವಕೀಲರೊಬ್ಬರು ಈ ಅರ್ಜಿ ಸಲ್ಲಿಸಿದ್ದು, ಭಾರತೀಯ ವಾಹಿನಿಗಳು ಬಾಂಗ್ಲಾದೇಶದ ನಿಯಮ ಪಾಲಿಸದೆ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ದೇಶದ ಸಂಸ್ಕೃತಿ ಹಾಳು ಮಾಡುವಂಥ ವಿಷಯಗಳನ್ನು ಪ್ರಸಾರ ಮಾಡುವ ಮೂಲಕ ರಾಷ್ಟ್ರದ ಯುವಜನತೆಯ ಅಧಃಪತನಕ್ಕೆ ಕಾರಣವಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
Advertisement