Advertisement

Bangladesh: ಚಿತ್ತಗಾಂಗ್‌ನಲ್ಲಿ ಘರ್ಷಣೆ; ಚಿನ್ಮಯ್ ದಾಸ್ ಸೇರಿ ಅನುಯಾಯಿಗಳ ವಿರುದ್ಧ ಪ್ರಕರಣ

08:36 AM Dec 09, 2024 | Team Udayavani |

ಢಾಕಾ: ಕಳೆದ ತಿಂಗಳು ಚಿತ್ತಗಾಂಗ್‌ನಲ್ಲಿ ಪೊಲೀಸರು ಮತ್ತು ಧಾರ್ಮಿಕ ಗುರುಗಳ ಬೆಂಬಲಿಗರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಗುರು ಚಿನ್ಮಯಿ ಕೃಷ್ಣ ದಾಸ್ ಮತ್ತು ಅವರ ನೂರಾರು ಅನುಯಾಯಿಗಳ ವಿರುದ್ಧ ಬಾಂಗ್ಲಾದೇಶದಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Advertisement

ಬಾಂಗ್ಲಾದೇಶದ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಚಿತ್ತಗಾಂಗ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಹೆಫಾಜತ್-ಎ-ಇಸ್ಲಾಂ ಕಾರ್ಯಕರ್ತ ಎನಾಮುಲ್ ಹಕ್ ಅವರು ದಾಖಲಿಸಿದ ಪ್ರಕರಣದಲ್ಲಿ ದಾಸ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.

ನವೆಂಬರ್ 26 ರಂದು ಚಿತ್ತಗಾಂಗ್ ನ್ಯಾಯಾಲಯದ ಸಂಕೀರ್ಣದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಕ್ಕಾಗಿ ದಾಸ್ ಅವರ ಅನುಯಾಯಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಹಕ್ ಆರೋಪಿಸಿದ್ದು ಅಲ್ಲದೆ ದಾಳಿಯಲ್ಲಿ ತನ್ನ ಬಲಗೈ ಮೂಳೆ ಮುರಿತವಾಗಿದ್ದು, ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಅವರು ಹೇಳಿದ್ದಾರೆ. ಹಕ್ ಅವರ ಅನಾರೋಗ್ಯದ ಕಾರಣ ದೂರು ನೀಡಲು ವಿಳಂಬವಾಗಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಚಿನ್ಮಯಿ ಕೃಷ್ಣ ದಾಸ್ ಅವರನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದು ಈ ವಿಚಾರವಾಗಿ ಬಾಂಗ್ಲಾದಲ್ಲಿ ಕೆಲವೊಂದು ಘರ್ಷಣೆಗಳೂ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ 27 ರಂದು ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಡಿಸೆಂಬರ್ 3 ರಂದು, ರಂಗಂ ಸಿನಿಮಾ ಹಾಲ್ ಬಳಿ ರಾಜಕೀಯ ಕಾರ್ಯಕರ್ತರು ಮತ್ತು ಇಸ್ಕಾನ್ ಸದಸ್ಯರನ್ನು ಒಳಗೊಂಡ ದಾಳಿಯನ್ನು ಆರೋಪಿಸಿ ಉದ್ಯಮಿಯೊಬ್ಬರು ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ.

ದಾಸ್ ಬಂಧನದ ಬಳಿಕ ಹೆಚ್ಚಾದ ಘರ್ಷಣೆ:
ನವೆಂಬರ್ 25 ರಂದು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಸ್ಕಾನ್ ಮಾಜಿ ಸದಸ್ಯ ಮತ್ತು ಬಾಂಗ್ಲಾದೇಶದ ಸೊಮಿಲಿಟೊ ಸನಾತನಿ ಜಾಗರಣ್ ಜೋಟ್‌ನ ವಕ್ತಾರ ಚಿನ್ಮಯಿ ಕೃಷ್ಣ ದಾಸ್ ಅವರನ್ನು ಬಂಧಿಸಿದ ನಂತರ ಹಿಂಸಾಚಾರ ಉಲ್ಬಣಗೊಂಡಿತು. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆಯಾದ ಚಿತ್ತಗಾಂಗ್‌ನಲ್ಲಿ ಪ್ರತಿಭಟನೆ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆದವು ಎನ್ನಲಾಗಿದೆ.

Advertisement

ಪೊಲೀಸ್ ಕಸ್ಟಡಿಯಲ್ಲಿರುವ ದಾಸ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದು ಕಾನೂನು ಪ್ರಾತಿನಿಧ್ಯದ ಕೊರತೆಯನ್ನು ಉಲ್ಲೇಖಿಸಿ ನ್ಯಾಯಾಲಯವು ಅವರ ಜಾಮೀನು ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿದ್ದರಿಂದ ದಾಸ್ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ.

ಆಗಸ್ಟ್‌ನಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿದೆ. ಹಿಂದೂಗಳ ಮೇಲಿನ ನಿರಂತರ ದಾಳಿಗಳು ಮತ್ತು ಚಿನ್ಮಯಿ ಕೃಷ್ಣ ದಾಸ್ ಬಂಧನ ಸಂಬಂಧಗಳನ್ನು ಇನ್ನಷ್ಟು ಹದಗೆಡಿಸಿದೆ.

ಇದನ್ನೂ ಓದಿ: Syrian Rebels: ಸಿರಿಯಾ ಅಧ್ಯಕ್ಷರ ಅರಮನೆಗೆ ಹೋರಾಟಗಾರರ ಲಗ್ಗೆ!

Advertisement

Udayavani is now on Telegram. Click here to join our channel and stay updated with the latest news.

Next