Advertisement

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

02:04 AM Dec 22, 2024 | Team Udayavani |

ಢಾಕಾ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವಧಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಸರಕಾರದ ವಿರುದ್ಧ ಧ್ವನಿ ಎತ್ತಿದ್ದವರನ್ನೆಲ್ಲ ಅಪಹರಿಸಿ ಹಿಂಸಿಸಲಾಗುತ್ತಿತ್ತು. ಈ ಕೃತ್ಯದಲ್ಲಿ ಭಾರತದ ಕೈವಾಡವೂ ಇದೆ ಎಂದು ಪ್ರಕರಣಗಳ ತನಿಖೆ ನಡೆಸುತ್ತಿರುವ ಆಯೋಗ ಹೇಳಿದೆ.

Advertisement

ಹೀಗೆಂದು ಬಾಂಗ್ಲಾ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಬಿಎಸ್‌ಎಸ್‌ ವರದಿ ಮಾಡಿದೆ. ಯೂನುಸ್‌ ಸರಕಾರ ರಚಿಸಿದ್ದ ಇದೇ ಆಯೋಗ, ಪ್ರಕರಣಗಳಲ್ಲಿ ಹಸೀನಾ ನೆರವಾಗಿ ಭಾಗಿಯಾಗಿದ್ದರೆಂದು ವರದಿ ಬಿಡುಗಡೆಗೊಳಿಸಿತ್ತು. ಬೆನ್ನಲ್ಲೇ ಇದೀಗ ಅಪಹರಿಸಿದ ಹಲವರನ್ನು ಭಾರತಕ್ಕೆ ಕಳುಹಿಸಿ ಅಲ್ಲಿನ ಜೈಲುಗಳಲ್ಲಿ ಕೊಳೆಯುವಂತೆ ಮಾಡ ಲಾಗಿದೆ ಎಂದು ಹೇಳಿದ್ದಲ್ಲದೇ, ಇದು ಆಯೋಗದ ವ್ಯಾಪ್ತಿ ಮೀರಿದ ಕಾರಣ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next