Advertisement
ಅಮೆರಿಕದಲ್ಲೂ ಆಕ್ರೋಶ: ಹಿಂದೂ ನಾಯಕ ಚಿನ್ಮಯಿ ಕೃಷ್ಣದಾಸ್ ಸೆರೆ ಬಂಧನ ಖಂಡಿಸಿದ್ದನ್ನು ಅಮೆರಿಕದಲ್ಲಿನ ಹಿಂದೂ ಸಂಘಟನೆಗಳೂ, ಭಾರತೀಯ ಸಂಘಟನೆಗಳೂ ಧ್ವನಿಯೆತ್ತಿವೆ. ಈ ಹಿಂಸಾಚಾರಗಳನ್ನು ತಡೆಯಲು ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಬೇಡಿಕೆಯಿಟ್ಟಿವೆ. ಫೌಂಡೇಶನ್ ಫಾರ್ ಇಂಡಿಯಾ ಆ್ಯಂಡ್ ಇಂಡಿಯನ್ ಡಯಾಸ್ಪೋರಾ ಸ್ಟಡೀಸ್ (ಎಫ್ಐಐಡಿಎಸ್) ಅಮೆರಿಕ ಅಧ್ಯಕ್ಷ ಜೋ ಬೈಡನ್, ನಿಯೋಜಿತ ಅಧ್ಯಕ್ಷ ಟ್ರಂಪ್‌ಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದು, ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಚಿನ್ಮಯಿ ಕೃಷ್ಣದಾಸ್ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಾಂಗ್ಲಾದೇಶ ಬಂಧಿಸಿರುವುದನ್ನು ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಖಂಡಿಸಿದ್ದು, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. “ಸನಾತನ ಧರ್ಮದ ಪ್ರಮುಖ ನಾಯಕರೊಬ್ಬರನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಜನರ ಜೀವಕ್ಕೆ ಸುರಕ್ಷತೆ ನೀಡಬೇಕು’ ಎಂದು ಹಸೀನಾ ಹೇಳಿದ್ದಾರೆ.