Advertisement
ಬಾಂಗ್ಲಾದೇಶವನ್ನು ಮರಳಿ ಶಕಿಬ್ ಅಲ್ ಹಸನ್ ಮುನ್ನಡೆಸುತ್ತಿರುವುದು ಈ ಸಲದ ವಿಶೇಷ. 2011ರ ಕೂಟದಲ್ಲೂ ಶಕಿಬ್ ಬಾಂಗ್ಲಾದ ಸಾರಥ್ಯ ವಹಿಸಿದ್ದರು. ಅಂದಿನ ಪಂದ್ಯಾವಳಿ ಕೂಡ ಭಾರತದಲ್ಲಿ ನಡೆದಿತ್ತು.
ಶಕಿಬ್ ಸೇರಿದಂತೆ ಬಾಂಗ್ಲಾ ಬಹಳಷ್ಟು ಅನುಭವಿ ಆಟಗಾರರನ್ನು ಹೊಂದಿದೆ. ಕೀಪರ್ ಮುಶ್ಫಿಕರ್ ರಹೀಂ, ಲಿಟನ್ ದಾಸ್, ಮಹಮದುಲ್ಲ, ಪೇಸರ್ ಮುಸ್ತಫಿಜುರ್ ರೆಹಮಾನ್ ಇವರಲ್ಲಿ ಪ್ರಮುಖರು. ಆದರೆ ಇವರೆಲ್ಲರಿಗಿಂತ ಯುವ ಬ್ಯಾಟರ್ ನಜ್ಮುಲ್ ಹುಸೇನ್ ಹೆಚ್ಚು ಅಪಾಯಕಾರಿಯಾಗಿ ಗೋಚರಿ ಸಬಹುದು. ಈ ವರ್ಷದ ಏಕದಿನದಲ್ಲಿ ಅವರು ಬಾಂಗ್ಲಾ ಪರ ಸರ್ವಾಧಿಕ 698 ರನ್ ಬಾರಿಸಿದ್ದಾರೆ. ಹಾಗೆಯೇ ತೌಹಿದ್ ಹೃದಯ್ ಉತ್ತಮ ಲಯದಲ್ಲಿದ್ದಾರೆ. ಬಾಂಗ್ಲಾದ ನಿಜವಾದ ಶಕ್ತಿ ಇರುವುದೇ ಸ್ಪಿನ್ ವಿಭಾಗದಲ್ಲಿ. ಶಕಿಬ್, ಮೆಹಿದಿ ಮಿರಾಜ್, ಮಹೆದಿ ಹಸನ್ ಮಿರಾಜ್, ನಾಸುಮ್ ಅಹ್ಮದ್ ಭಾರತದ ಟ್ರ್ಯಾಕ್‌ಗಳಲ್ಲಿ ಮಿಂಚುವ ಸಾಧ್ಯತೆ ಇದೆ.
Related Articles
ಅಫ್ಘಾನಿಸ್ಥಾನ 2017ರಲ್ಲಿ ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದ ಬಳಿಕ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತ ಬಂದ ತಂಡ. ಆದರೆ ವಿಶ್ವಕಪ್ ಇತಿಹಾಸದ 15 ಪಂದ್ಯಗಳಲ್ಲಿ ಜಯಿಸಿದ್ದು ಒಂದರಲ್ಲಿ ಮಾತ್ರ. ಅದೂ ಸ್ಕಾಟ್ಲೆಂಡ್ ವಿರುದ್ಧ.
Advertisement
2019ರ ವಿಶ್ವಕಪ್‌ನಲ್ಲಿ ಅಫ್ಘಾನ್ ಸಾಧನೆ ಚೇತೋಹಾರಿಯಾಗಿತ್ತು. ಅಂದು ಭಾರತ, ಪಾಕಿಸ್ಥಾವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಇದು ಹಶ್ಮತುಲ್ಲ ಶಾಹಿದಿ ಬಳಗಕ್ಕೆ ಸ್ಫೂರ್ತಿ ಆಗಬೇಕಿದೆ. ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್ ಅವರಂಥ ಅನುಭವಿಗಳನ್ನು ಹೊಂದಿರುವ ತಂಡವಿದು. ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಕೂಡ ತಂಡದ ರಕ್ಷಣೆಗೆ ನಿಲ್ಲಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಅಫ್ಘಾನಿಸ್ಥಾನದ ಬ್ಯಾಟಿಂಗ್ ಲೈನಅಪ್ ಬಲಿಷ್ಠವಾಗಿದ್ದರೂ ಸ್ಥಿರತೆಯ ಕೊರತೆ ಕಾಡುತ್ತಿದೆ. ಗೆಲುವಿನ ಹಂತದಲ್ಲಿ ಮುಗ್ಗರಿಸುವ ಸಮಸ್ಯೆಗೊಂದು ಪರಿಹಾರ ಕಂಡುಕೊಂಡರೆ ಅಫ್ಘಾನ್ ಅಪಾಯಕಾರಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.