Advertisement

Bangaluru Open Tennis: ಸುಮಿತ್‌ ನಾಗಲ್‌ ಕ್ವಾರ್ಟರ್‌ಫೈನಲಿಗೆ

11:00 PM Feb 15, 2024 | Team Udayavani |

ಬೆಂಗಳೂರು: ಉತ್ತಮ ಫಾರ್ಮ್ನಲ್ಲಿರುವ ಸುಮಿತ್‌ ನಾಗಲ್‌ ಅವರು ಹಾಂಕಾಂಗ್‌ನ ಕೋಲ್‌ವುನ್‌ ವಾಂಗ್‌ ಅವರನ್ನು ಸೋಲಿಸಿ ಬೆಂಗಳೂರು ಓಪನ್‌ ಟೆನಿಸ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು.

Advertisement

ಎರಡು ತಾಸುಗಳ ಕಠಿನ ಹೋರಾಟದಲ್ಲಿ ನಾಗಲ್‌ 6-2, 7-5 ಸೆಟ್‌ಗಳಿಂದ ಗೆಲುವು ಸಾಧಿಸಿ ಮುನ್ನಡೆದರು. 19ರ ಹರೆಯದ ವಾಂಗ್‌ ದ್ವಿತೀಯ ಸೆಟ್‌ನಲ್ಲಿ ತೀವ್ರವಾಗಿ ಹೋರಾಡಿದ್ದರು.

ದಿನದ ಇನ್ನೊಂದು ಪಂದ್ಯದಲ್ಲಿ ಸ್ಟೆಫಾನೊ ನಪೊಲಿತಾನೊ ಅವರು ವಾಸೆಕ್‌ ಪೊಸ್ಪಿಸಿಲ್‌ ಅವರನ್ನು 6-4, 4-6, 6-4 ಸೆಟ್‌ಗಳಿಂದ ಕೆಡಹಿದರೆ ಐದನೇ ಶ್ರೇಯಾಂಕದ ಆ್ಯಡಂ ವಾಲ್ಟನ್‌ ಅವರು ಗೌತಿಯರ್‌ ಆನ್‌ಕ್ಲಿನ್‌ ಅವರನ್ನು 6-2, 6-2 ಸೆಟ್‌ಗಳಿಂದ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next