ವಿಶ್ವದ 147ನೇ ರ್ಯಾಂಕಿನ ಇರಾ ಶರ್ಮ ಅವರು ಸಿಂಧು ವಿರುದ್ಧ ಪ್ರಬಲ ಹೋರಾಟ ಸಂಘಟಿಸಿ ದ್ವಿತೀಯ ಗೇಮ್ ಜಯಿಸಿದ್ದರು. ಆದರೆ ನಿರ್ಣಾಯಕ ಸೆಟ್ನಲ್ಲಿ ಸಿಂಧು ಹೊಡೆತಕ್ಕೆ ಉತ್ತರಿಸಲು ವಿಫಲರಾದ ಶರ್ಮ ಅಂತಿಮವಾಗಿ 10-21, 21-12, 15-21 ಗೇಮ್ಗಳಿಂದ ಸೋತರು. ಕೆಲವು ಸಮಯದಿಂದ ಶ್ರೇಷ್ಠ ಪ್ರದರ್ಶನ ನೀಡಲು ಒದ್ದಾಡುತ್ತಿರುವ ಸಿಂಧು ಕ್ವಾರ್ಟರ್ಫೈನಲ್ನಲ್ಲಿ ಚೀನದ ದೈ ವಾಂಗ್ ಅವರನ್ನು ಎದುರಿಸಲಿದ್ದಾರೆ. ವಾಂಗ್ ಇನ್ನೊಂದು ಪಂದ್ಯದಲ್ಲಿ ಭಾರತದ ದೇವಿಕಾ ಸಿಹಾಗ್ ಅವರನ್ನು 19-21, 21-18, 21-11 ಗೇಮ್ಗಳಿಂದ ಸೋಲಿಸಿದರು.
Advertisement
ಸೆನ್ ಮುನ್ನಡೆಅಗ್ರ ಶ್ರೇಯಾಂಕದ ಲಕ್ಷ್ಯ ಸೇನ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಡ್ಯಾನಿಲ್ ದುಬೊವೆಂಕೊ ಅವರನ್ನು 21-14, 21-13 ಗೇಮ್ಗಳಿಂದ ಸುಲಭವಾಗಿ ಮಣಿಸಿ ಕ್ವಾರ್ಟರ್ಫೈನಲಿಗೇರಿದರು. ಮುಂದಿನ ಪಂದ್ಯದಲ್ಲಿ ಅವರು ಮೈರಬ ಲುವಾಂಗ್ ಅವರನ್ನು ಎದುರಿಸಲಿದ್ದಾರೆ. ಲುವಾಂಗ್ ಇನ್ನೊಂದು ಪಂದ್ಯದಲ್ಲಿ ಐರ್ಲೆಂಡಿನ ಎನ್ಹಾಟ್ ಎನ್ಗುಯೆನ್ ಅವರನ್ನು ಸೋಲಿಸಿದ್ದರು.