Advertisement

Bangaluru; ಖಾಸಗಿ ಕಂಪನಿ ನಿರ್ದೇಶಕ ಆತ್ಮಹ*ತ್ಯೆ: ಪತ್ನಿ, ಆಕೆಯ ತಾಯಿಗೆ ಶೀಘ್ರ ನೋಟಿಸ್‌

08:16 AM Dec 11, 2024 | Team Udayavani |

ಬೆಂಗಳೂರು: ಖಾಸಗಿ ಕಂಪನಿಯ ನಿರ್ದೇಶಕ ಉತ್ತರ ಪ್ರದೇಶ ಮೂಲದ ಅತುಲ್‌ ಸುಭಾಷ್‌ ಆತ್ಮಹ*ತ್ಯೆ ಪ್ರಕರಣ
ಸಂಬಂಧ ಮೃತನ ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಚಿಕ್ಕಪ್ಪನಿಗೆ ಮಾರತ್ತಹಳ್ಳಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುವ ಸಾಧ್ಯತೆಯಿದೆ.

Advertisement

ಪ್ರಕರಣ ಕುರಿತು ಮೃತನ ಸಹೋದರ ಬಿಕಾಸ್‌ ಕುಮಾರ್‌ ಎಂಬುವರು ನೀಡಿದ ದೂರಿನ ಮೇರೆಗೆ ಮೃತನ ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮತ್ತೂಂದೆಡೆ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಮಧ್ಯೆ ಆರೋಪಿಗಳ ವಿಳಾಸ ಸಂಗ್ರಹಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಒಂದೆರಡು ದಿನಗಳಲ್ಲಿ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಬಳಿಕ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಅತುಲ್‌ ಸುಭಾಷ್‌ ವಿರುದ್ಧ ದಾಖಲಾಗಿರುವ ದೂರುಗಳು ಹಾಗೂ ವಿಚ್ಛೇದನ ಸಂಬಂಧ ಕೋರ್ಟ್‌ಗಳಲ್ಲಿರುವ ವಿಚಾರಣಾ ಹಂತದಮಾಹಿತಿ ಪಡೆದುಕೊಂಡು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ
ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಖಾಸಗಿ ಕಂಪನಿಯ ನಿರ್ದೇಶಕ ಉತ್ತರ ಪ್ರದೇಶ ಮೂಲದ ಅತುಲ್‌ ಸುಭಾಷ್‌, ಸುಮಾರು 26 ಪುಟಗಳ ಡೆತ್‌ನೋಟ್‌ ಬರೆದು, ಅದನ್ನು ಸುಪ್ರೀಂ ಕೋರ್ಟ್‌, ಹೈಕೋರ್ಟ್‌, ಕಚೇರಿ, ಸರ್ಕಾರೇತರ ಎಸ್‌ಐಎಫ್ಎಫ್ ಸಂಸ್ಥೆ, ಕುಟುಂಬ ಸದಸ್ಯರಿಗೆ ಇ-ಮೇಲ್‌ ಕಳುಹಿಸಿದ್ದ. ಬಳಿಕ ಮಾರತ್ತಹಳ್ಳಿಯ ಮಂಜುನಾಥ್‌ ಲೇಔಟ್‌ನ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನುಗಳ ದುರುಪಯೋಗ?

Advertisement

ವಕೀಲೆ ಅಭಾ ಸಿಂಗ್, ಪ್ರತಿಕ್ರಿಯಿಸಿ ‘ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಹಿಂಸಾಚಾರ ಆರೋಪ ನಿಜವಲ್ಲ ಮತ್ತು ಅತುಲ್‌ ಸುಭಾಷ್‌ ತನ್ನ ಪತ್ನಿಗೆ 2 ಲಕ್ಷ ರೂಪಾಯಿ ನೀಡುತ್ತಿದ್ದ. ಆಕೆ ಮಗನನ್ನು ನೋಡಲು ಬಿಡಲಿಲ್ಲ, ಮಗನನ್ನು ಬಳಸಿ ಆತನನ್ನು ಬ್ಲ್ಯಾಕ್‌ಮೇಲ್ ಮಾಡುವ ಸಾಧನ ಮಾಡಿಕೊಂಡಿದ್ದಳು. ಆಕೆ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಬೇಕು. ಅವನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು.ಇದು ಕಾನೂನಿನ ಘೋರ ದುರ್ಬಳಕೆ, ವರದಕ್ಷಿಣೆ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next