Advertisement

ಸೋಮವಾರದಿಂದ “ಬಾನ್‌ ದನಿ’ರೇಡಿಯೋ ಪಾಠ ಕಾರ್ಯಕ್ರಮ

09:22 PM Dec 11, 2022 | Team Udayavani |

ಬೆಂಗಳೂರು: ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ತರಬೇತಿ ಬೋಧನ ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆ ಹೋಗಲಾಡಿಸುವ ಉದ್ದೇಶದಿಂದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಆಕಾಶವಾಣಿ ಮೂಲಕ “ಬಾನ್‌ ದನಿ’ ರೇಡಿಯೋ ಪಾಠ ಕಾರ್ಯಕ್ರಮ ಡಿ.12ರಿಂದ ಪ್ರಸಾರವಾಗಲಿದೆ.

Advertisement

ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದ ವರೆಗೆ ಮಧ್ಯಾಹ್ನ 2.35ರಿಂದ 3 ಗಂಟೆಯ ವರೆಗೆ ಪ್ರಸಾರಗೊಳ್ಳಲಿದೆ. 13 ಆಕಾಶವಾಣಿ ಕೇಂದ್ರಗಳು ಮತ್ತು 3 ವಿವಿಧ ಭಾರತಿ ಎಫ್‌ಎಂ ಕೇಂದ್ರಗಳಲ್ಲಿ ಏಕಕಾಲದಲ್ಲಿ “ಬಾನ್‌ ದನಿ’ ಪ್ರಸಾರವಾಗಲಿದೆ.

ಜತೆಗೆ ಮೊಬೈಲ್‌, ಆಲ್‌ ಇಂಡಿಯಾ ರೇಡಿಯೋ, ಬೆಂಗಳೂರು ಯೂಟ್ಯೂಬ್‌ ಚಾನೆಲ್‌ ಹಾಗೂ ಪ್ರಸಾರಭಾರತಿ ನ್ಯೂಸ್‌ ಆನ್‌ಏರ್‌ನಲ್ಲೂ ಆಲಿಸಲು ಅವಕಾಶ ಕಲ್ಪಿಸಲಾಗಿದೆ.

//dsert.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬಹುದು. ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಉಪಯುಕ್ತ ಪಾಠಗಳು: 1ರಿಂದ 9ನೇ ತರಗತಿಗಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ, ಇಂಗ್ಲಿಷ್‌ ಕಲಿಕೆ ಒಳಗೊಂಡ ಸಾಮಾನ್ಯ ಪಾಠಗಳಿರಲಿವೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಗಣಿತ ವಿಷಯಗಳ ಪಾಠ ಇರಲಿದೆ. ಬಾನ್‌ದನಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಲು, ಪಾಠಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಜಿಲ್ಲಾ ಉಪನಿರ್ದೇಶಕರು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯಲ್ಲ: ಸಚಿವ ಅಶ್ವತ್ಥ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next