Advertisement

ಬ್ಯಾಲೆನ್ಸ್‌ ಶೀಟ್‌ ಅಂದರೆ ಏನು ಗೊತ್ತಾ?

03:45 AM Jan 09, 2017 | Harsha Rao |

ಕಂಪನಿ, ಬ್ಯಾಂಕ್‌ ಅಥವಾ ಯಾವುದೇ ಸಂಘ ಸಂಸ್ಥೆಗಳಿರಲಿ, ಅವುಗಳ ಬ್ಯಾಲೆನ್ಸ ಶೀಟ್‌ಗಳಲ್ಲಿ “”ಅನಿಶ್ಚಿತ ಹೊರೆ” (contingent liabilities)    ಎಂದು  ಕೆಲವು ಮೊತ್ತವನ್ನು ತೋರಿಸಲಾಗುತ್ತದೆ. ಇವು ಬ್ಯಾಲೆನ್ಸ ಶೀಟ್‌ ನ  “”ಹೊರೆ” ಸೈಡ್‌ ನಲ್ಲಿ ಅಥವಾ ಪ್ರತ್ಯೇಕವಾಗಿ ಫ‌ುಟ್‌ ನೋಟ್‌  ನಲ್ಲಿ ತೋರಿಸಲಾಗುತ್ತದೆ. ಅಕೌಂಟಿಂಗ್‌ ಸೂತ್ರ ಮತ್ತು ನಿಯಮಾವಳಿಯ ಅರಿವು ಇದ್ದವರಿಗೆ ಇದರ ಮರ್ಮ ಅರ್ಥವಾಗುತ್ತದೆ. ಆದರೆ, ಬ್ಯಾಲೆನ್ಸಶೀಟ್‌ ನಲ್ಲಿ ಅಸಕ್ತರಿರುವ  ಬಹುಜನರಿಗೆ ಇದರ ವಿಶೇಷತೆ  ಏನೆಂದು ತಿಳಿಯುವುದಿಲ್ಲ. ಕೆಲವು ಬ್ಯಾಲೆನ್ಸ ಶೀಟ್‌ಗಳಲ್ಲಿ ಈ ಮೊತ್ತ ಕಡಿಮೆ ಇರುತ್ತದೆ, ಕೆಲವುದರಲ್ಲಿ ನಾಮಕಾವಸ್ತೆ ಇರುತ್ತದೆ ಮತ್ತು ಕೆಲವು  ಬ್ಯಾಲೆನ್ಸ ಶೀಟ್‌ ಗಳಲ್ಲಿ ಸ್ವಲ್ಪ$ ದೊಡ್ಡ ಮೊತ್ತ  ಇರುತ್ತದೆ.  ಬ್ಯಾಲೆನ್ಸ ಶೀಟ್‌ ಗಳಲ್ಲಿ ಇವು ಯಾಕೆ ಮತ್ತು ಹೇಗೆ ಬಿಂಬತವಾಗುತ್ತವೆ? ಬ್ಯಾಲೆನ್ಸ ಶೀಟ್‌ ನಲ್ಲಿ “”ಅಸ್ತಿ ಮತ್ತು ಹೊರೆ” ಗಳು  ಬಿಂಬಿತವಾಗುತ್ತಿದ್ದು, ಆ “”ಅನಿಶ್ಚಿತ ಹೊರೆ” ಯ ಬಗೆಗೆ ಅಂಥ‌ ವಿಶೇಷತೆ ಏನು?

Advertisement

ಅನಿಶ್ಚಿತ ಹೊರೆ ಎಂದರೇನು?
ಇದು ಭವಿಷ್ಯದಲ್ಲಿ ಸಂಭವಿಸುವ ಕೆಲವು ಘಟನೆಗಳಿಂದ ಕಂಪನಿಯ ಮೇಲೆ  ಬರುವ ಹಣಕಾಸು ಹೊರೆ ಅಥವಾ ಕೆಲವು ಘಟನೆಗಳು ಆಗದಿರುವುದರಿಂದ ಕಂಪನಿಯ ಮೇಲೆ ಆಗುವ ಹೊರೆ ಎಂದೂ ಹೇಳಬಹುದು. ಹಲವು ಬಾರಿ ಕೆಲವು ಘಟನೆಗಳು ಭವಿಷ್ಯದಲ್ಲಿ  ಸಂಭವಿಸಿದಾಗಲೇ ಈ  “”ಹೊರೆ” ಯ ಅನುಭವ ಅಗುತ್ತದೆ. ಕೆಲವು ಬಾರಿ ಘಟನೆಗಳು ಆಗದಿ¨ªಾಗಲೇ ಈ “”ಹೊರೆ” ಬರುತ್ತದೆ. ಬ್ಯಾಂಕುಗಳಲ್ಲಿ ಆ ಪರಿಸ್ಥಿತಿ ಬರುವುದು ಮುಖ್ಯವಾಗಿ  ಸಾಲಪತ್ರ ಬ್ಯಾಂಕ್‌ ಗ್ಯಾರಂಟಿ ಮತ್ತು ಬ್ಯಾಂಕ್‌ ನ ವಿರುದ್ದ  ನ್ಯಾಯಾಲಯದಲ್ಲಿ ಪರಿಹಾರ,ದಂಡ  ಕೇಳಿ  ಪ್ರಕರಣಗಳು  ಬಾಕಿ ಇರುವಾಗ.  ಇದನ್ನು hypothetical liability  ಎಂದೂ  ಕರೆಯುತ್ತಾರೆ.

ಅಂತಿಮವಾಗಿ ಈ  ಹೊರೆ ಹಲವು   “”ಹಾಗೆ ಮತ್ತು ಹೀಗೆ” ( ಜಿ ಚಿಟಿಜ ಛOಣ ) ಮೇಲೆ ಅವಲಂಭಿಸಿಕೊಂಡಿರುತ್ತಿದ್ದು,  ಬ್ಯಾಲೆನ್ಸ ಶೀಟ್‌ ನಲ್ಲಿ  ಮುಖ್ಯವಾಗಿ ಕಾಣದೇ ಫ‌ುಟ್‌ ನೋಟ್‌ ಆಗಿ ಕಾಣುತ್ತದೆ.  ಒಂದು ಕಂಪನಿಯಲ್ಲಿ ಈ ತರಹದ liabilityಗಳು  ಮುಖ್ಯವಾಗಿ ನ್ಯಾಯಾಲಯದಲ್ಲಿ ಇರುವ  ಪ್ರಕರಣಗಳು, ಕಂಪನಿ ವಿರುದ್ದ ಇರುವ ಮತ್ತು ಸಾಲ ಎಂದು ಪರಿಗಣಿಸದಿರುವ ಬೇಡಿಕೆ,  ಕಾನೂನಾತ್ಮಕ  ಹೊರೆಗಳು, ವಾರಂಟಿಗಳು, ಆದಾಯಕರ ವಿವಾದ, ಮಾರಾಟಕರ ಪ್ರಕರಣಗಳು, ಹಣಕಾಸು ಗ್ಯಾರಂಟಿಗಳು ಮತ್ತು ನಷ್ಟ ಪರಹಾರದ ನಿಟ್ಟಿನಲ್ಲಿ ಇರುತ್ತವೆ.

ಸಾಲಪತ್ರ 
 ಇದು ಒಂದು ಬ್ಯಾಂಕ್‌ ತನ್ನ ಗ್ರಾಹಕನ ಪರವಾಗಿ ಇನ್ನೊಂದು ಬ್ಯಾಂಕಿಗೆ ಅಥವಾ ಆ ಬ್ಯಾಂಕಿನ ಗ್ರಾಹಕನಿಗೆ,   ಆ ಸಾಲಪತ್ರದ ಅಡಿಯಲ್ಲಿ ನಡೆಯುವ   ವ್ಯವಹಾರದ ನಿಟ್ಟಿನಲ್ಲಿ  ಪೇಮೆಂಟ್‌ ನೀಡುವ ಕಟ್ಟುನಿಟ್ಟಾದ ಬದ್ದತೆ.  ಬ್ಯಾಂಕಿನ ಗ್ರಾಹಕನ ಪೇಮೆಂಟ್‌ ಮಾಡಿದರೆ,ಈ ವ್ಯವಹಾರ ಮಗಿಯುತ್ತದೆ. ಪೇಮೆಂಟ್‌ ಮಾಡಲು ವಿಫ‌ಲನಾದರೆ, ವಿಳಂಬ ಮಾಡಿದರೆ,  ಬ್ಯಾಂಕ್‌ ಪೇಮೆಂಟ್‌ ಮಾಡಬೇಕಾಗುತ್ತಿದ್ದು, ಇದನ್ನು ಅನಿಶ್ಚಿತ ಹೊರೆ ಎಂದು ಹೇಳಲಾಗುತ್ತದೆ. ಇದೇ ಸೂತ್ರ ಮತ್ತು ನಿಯಮಾವಳಿಗಳು ಬ್ಯಾಂಕ್‌ ಗ್ಯಾರಂಟಿಗಳಿಗೂ ಅನ್ವಯಿಸುತ್ತಿದ್ದು, ಗ್ರಾಹಕರು  ಬ್ಯಾಂಕ್‌ ಗ್ಯಾರಂಟಿ ಕಟ್ಟಳೆಗಳನ್ನು ಪಾಲಿಸದಿದ್ದರೆ,  ಆ ಗ್ರಾಹಕನ ಪರವಾಗಿ ಬ್ಯಾಂಕ್‌  ಪೇಮೆಂಟ್‌ ಮಾಡಬೇಕಾಗುತ್ತದೆ.  ಬ್ಯಾಂಕ್‌ ಮಾಡಬೇಕಾದ ಪೇಮೆಂಟ್‌ ನ ಬಧªತೆ ಮತ್ತು ಮೊತ್ತ ನಂತರದ  ದಿನಗಳಲ್ಲಿ ಗೊತ್ತಾಗುತ್ತಿದ್ದು, ಅಲ್ಲಿಯವರೆಗೆ “”ಅನಿಶ್ಚಿತತೆಯ ಹೊರೆ” ಬ್ಯಾಂಕಿನ ಮೇಲೆ ಇರುತ್ತದೆ.

 ಹಲವು ಸಂದರ್ಭಗಳಲ್ಲಿ  ಬ್ಯಾಂಕ್‌ ಅಥವಾ ಕಂಪನಿಗಳು ತಮ್ಮ ಸಿಬ್ಬಂದಿ ಅಥವಾ ಗ್ರಾಹಕರಿಂದ ಪರಿಹಾರ ಅಥವಾ ದಂಡ ಕೇಳಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು    ಎದುರಿಸುತ್ತಿದ್ದು,  ನ್ಯಾಯಾಲಯಗಳಲ್ಲಿ  ಪ್ರಕರಣಗಳು  ಫೇಲ್‌ ಆಗಿ, ಪರಿಹಾರ ಮತ್ತು ದಂಡವನ್ನು ನೀಡುವ ಸಂದರ್ಭ ಬಂದರೆ, ಅವುಗಳಿಗಾಗಿ  ಬ್ಯಾಲೆನ್ಸ ಶೀಟ್‌ ನಲ್ಲಿ ಮೊತ್ತವನ್ನು ತೋರಿಸಬೇಕಾಗುತ್ತದೆ. ಇದು  ನ್ಯಾಯಾಲಯದ ನಿರ್ಣಯದ ಮೇಲೆ ಅವಲಂಭಿಸಿದ್ದು, ಮುಂದಿನ ದಿನಗಳಲ್ಲಿ  ಕೊಡಬೇಕಾದ  ಮೊತ್ತವೆಂದು  ಬ್ಯಾಲೆನ್ಸ ಶೀಟ್‌ ನಲ್ಲಿ  ನಮೂದಿಸಬೇಕಾಗುತ್ತದೆ. ಹಾಗೆಯೇ ಕೆಲವು ಕಂಪನಿಗಳಲ್ಲಿ ತಮ್ಮ  ಕಂಪನಿಯ ಉತ್ಪ$ನ್ನಗಳ ನಿಟ್ಟಿನಲ್ಲಿ ಗ್ರಾಹಕರಿಂದ  ಬರುವ  ವಾರಂಟಿಯನ್ನು ನೀಡಬೇಕಾಗುತ್ತಿದ್ದು,  ಈ  ನಿಟ್ಟಿನಲ್ಲಿ ಕೆಲವು ಮೊತ್ತವನ್ನು  ಬ್ಯಾಲೆನ್ಸಶೀಟ್‌ ನಲ್ಲಿ ಕೊಡಬೇಕಾದ  ” “”ಹೊರೆ” ಎಂದು  ತೋರಿಸಬೇಕಾಗುತ್ತದೆ.

Advertisement

ಸಾಮಾನ್ಯವಾಗಿ ಪ್ರತಿಯೊಂದು ಕಂಪನಿಯಲ್ಲಿಯೂ ಆದಾಯಕಕರ ಮತ್ತು ಮಾರಾಟಕರ ಅಥವಾ ಸರ್ಕಾರಕ್ಕೆ ನೀಡಬೇಕಾದ ಬಾಕಿಗಳ ಬಗೆಗೆ ವಿವಾದಗಳು ಇರುತ್ತಿದ್ದು,  ಅಂತಿಮವಾಗಿ  ನಿರ್ಣಯವು ಕಂಪನಿಯ ಪರವಾಗಿ ಅಥವಾ ವಿರುದ್ದವಾಗಿ ಬರಬಹುದು. ಕಂಪನಿಯ ವಿರುದ್ದ ನಿರ್ಣಯ ಬಂದರೆ, ಕಂಪನಿಯು ಹಣವನ್ನು ಕೊಡಬೇಕಾಗಿದ್ದು, ಈ ಮೊತ್ತವನ್ನು  “”ಅನಿಶ್ಚಿತ ಹೊರೆ”  ಯಲ್ಲಿ ತೋರಿಸಬೇಕಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಈ “”ಹೊರೆ” ಯನ್ನು ಮೌಲಿÂàಕರಿಸಲು  ಅಥವಾ ಲೆಕ್ಕಹಾಕಲು ಸಾಧ್ಯವಿಲ್ಲ.  ಗ್ರಾಹಕರಿಗೆ ದಂಡ, ಸಿಬ್ಬಂದಿಗಳಿಗೆ ಪರಿಹಾರ ಕೊಡುವ ದಿಸೆಯಲ್ಲಿ ಕಾನೂನು ತಜ್ಞರೊಂದಿಗೆ  ಪ್ರಕರಣದ ಸಾಧ್ಯಾ-ಸಾಧ್ಯತೆ ಬಗೆಗೆ ಚರ್ಚಿಸಿ ಕೆಲವು ಮೊತ್ತವನ್ನು   ಕೊಡಬೇಕಾದ liability ಅಡಿಯಲ್ಲಿ ತೋರಿಸಬಹುದು. ಈ ಮೊತ್ತವನ್ನು  ಲೆಕ್ಕ ಹಾಕಲು ಸಾಧ್ಯವಾದರೆ ಅದನ್ನು ಬ್ಯಾಲೆನ್ಸಶೀಟ್‌ ನಲ್ಲಿ ತೋರಿಸುತ್ತಾರೆ. ಇಲ್ಲದಿದ್ದರೆ ಫ‌ುಟ್‌ ನೋಟ್‌ ಆಗಿ ತೋರಿಸಲಾಗುತ್ತದೆ. ಸಾಲ±ಮತ್ತು ಬ್ಯಾಂಕ್‌  ಗ್ಯಾರಂಟಿ  ವಿಷಯದಲ್ಲಿ liability ಮೊದಲೇ  ಗೊತ್ತಾಗುತ್ತಿದ್ದು,, ಇದು ಬ್ಯಾಲೆನ್ಸ  ಶೀಟ್‌ ನಲ್ಲಿ ಕಾಣುತ್ತದೆ. ಕಂಪನಿಯ liability ಗಮನಾರ್ಹವಾಗಿದ್ದರೆ ಮಾತ್ರ ಇದನ್ನು ತೋರಿಸಲಾಗುತ್ತದೆ. ಈ ಮೊತ್ತ ತುಂಬಾ  ಸಣ್ಣದಾಗಿದ್ದರೆ ಬ್ಯಾಲೆನ್ಸಶೀಟ್‌ ನಲ್ಲಿ ನಮೂದಾಗುವುದಿಲ್ಲ. ಇದನ್ನು  ಮುಂದಿನ ದಿನಗಳಲ್ಲಿ  ಕೊಡಬೇಕಾಗದ liability ಬಗೆಗೆ,   ಮುಂಚಿತವಾಗಿ, ಕಂಪನಿಯಲ್ಲಿ ಅಸಕ್ತರಿರುವರಿಗೆ ತಿಳಿಸುವ  ಪ್ರಕ್ರಿಯೆ. ಒಂದು ಕಂಪನಿಯ ಹಣಕಾಸು ವಿಚಾರದಲ್ಲಿ ಶೇರುಧಾರರು, ಬ್ಯಾಂಕರುಗಳು ಮತ್ತು ಸಾಮಾನು ಪೂರೈಕೆ ಧಾರರು ಆಸಕ್ತರಿದ್ದು, ಅವರು ಈ  ಮಾಹಿತಿಗಳನ್ನು  ತಿಳಿಯಲು ಇಚ್ಚೆ ಪಡುತ್ತಾರೆ.
 
Financial Accounting Standard Board ಈ ಎÇÉಾ  liability ಗಳನ್ನು ಅರ್ಥೈಸುತ್ತಿದ್ದು,  General Accounting Acceptance Principles ಪ್ರಕಾರ  ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ., ಇದರ ಪ್ರಕಾರ ಕಂಪನಿಯು ಈ  liabilityಗಳಿಗೆ ಸುದೀರ್ಘ‌  ವಿವರಣೆ ಕೊಡಬೇಕಾಗುತ್ತದೆ ಮತ್ತು  ಕಂಪನಿಯ ಅಸಕ್ತರು  ಕೇಳುವ ಎÇÉಾ ಸಂದೇಹಗಳಿಗೆ ಸಮರ್ಥ ಉತ್ತರ ನೀಡ ಬೇಕಾಗುತ್ತದೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next