Advertisement
ಅಮೆರಿಕನ್ಯೂಯಾರ್ಕ್ನ ಟೈಮ್ ಸ್ಕ್ವೇರ್‌ನಲ್ಲಿ ಶ್ರೀರಾಮನ ಫೋಟೋ ಪ್ರದರ್ಶಿಸಲಾ ಯಿತು. ಜತೆಗೆ ನೂರಾರು ಮಂದಿ ಭಾರತೀಯ ಉಡುಪು ಧರಿಸಿ ಭಜನೆ, ಕೀರ್ತನೆಗಳನ್ನು ಹಾಡಿದರು. ವಿಎಚ್‌ಪಿ ಅಮೆರಿಕ ಘಟಕದ ವತಿಯಿಂದ ಟೆಕ್ಸಸ್, ಇಲಿನಾಯ್ಸ, ನ್ಯೂಯಾರ್ಕ್, ಜಾರ್ಜಿಯಾ ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 1 ಸಾವಿರ ಮಂದಿ ಭಾಗವಹಿಸಿದ್ದರು. ಮಾರಿಷಸ್
ದೇಶದಲ್ಲಿ ಶೇ.48 ಮಂದಿ ಹಿಂದೂ ಸಮುದಾಯದವರು. ಅಲ್ಲಿ ಸೋಮವಾರ 2 ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಣೆಗೆ ರಜೆ ಪ್ರಕಟಿಸಲಾಗಿತ್ತು. ಪ್ರಧಾನಿ ಪ್ರವಿಂದ್ ಕುಮಾರ್ ಜುಗನ್ನಾಥ್ ದೇಶದಲ್ಲಿರುವ ಹಿಂದೂ ಸಮುದಾಯದವರಿಗೆ ಶುಭ ಕೋರಿದ್ದಾರೆ.
Related Articles
ಕೆರೆಬಿಯನ್ ದ್ವೀಪ ಸಮೂಹದ ರಾಷ್ಟ್ರಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾನುವಾರ ವಿವಿಧ ಕಾರ್ಯಕ್ರಮ ಯೋಜಿಸಿದ್ದರು.
Advertisement
ವರ್ಜೀನಿಯಾದಲ್ಲಿ ಭಾಗವಹಿಸಿದ ಪಾಕಿಸ್ತಾನಿ ನಾಗರಿಕರುವಾಷಿಂಗ್ಟನ್ನ ವರ್ಜಿಯಾದ ಎಸ್.ಎಲ್.ಲೋಟಸ್ ಟೆಂಪಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ನಾಗರಿಕರು, ಹಿಂದೂ, ಮುಸ್ಲಿಂ, ಸಿಖ್ ಸಮುದಾಯದ 2,500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಸುವಾದಲ್ಲಿ ಸಂಭ್ರಮ
ರಾಜಧಾನಿ ಸುವಾದಲ್ಲಿ ಜ.18ರಿಂದ 22ರವರೆಗೆ ರಾಮಲಲ್ಲಾ ಉತ್ಸವ ಆಯೋಜಿಸಲಾಗಿತ್ತು. ವಿವಿಧ ಕಾರ್ಯಕ್ರಮಗಳು ನಡೆದವು. ಬುರ್ಜ್‌ನಲ್ಲಿ ಶ್ರೀರಾಮನ ಚಿತ್ತಾರ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭನದ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಬುರ್ಜ ಖಲಿಫಾದ ಮೇಲೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಚಿತ್ರವನ್ನು ಬೆಳಕಿನ ಚಿತ್ತಾರದೊಂದಿಗೆ ಪ್ರದರ್ಶಿಸಲಾಯಿತು.