Advertisement
ದೀಪಾವಳಿ ಹಿನ್ನೆಲೆಯಲ್ಲಿ ಹಿಂದೂ ಸಮುದಾಯವು ದೇಗುಲದಲ್ಲಿ ಸೇರಿತ್ತು. ಇದೇ ಸಂದರ್ಭ ಭಾರತೀಯ ರಾಯಭಾರ ಕಚೇರಿಯು ಭಾರ ತೀಯ ಸಮುದಾಯದ ಸದಸ್ಯರಿಗೆ ಅಗತ್ಯವಿರುವ ಆಡಳಿತ ಸೇವೆ ಒದಗಿಸಲು ದೇಗುಲದ ಆವರಣದಲ್ಲೇ ಶಿಬಿರವನ್ನು ಕೂಡ ಆಯೋಜಿಸಿತ್ತು.
ದೇಗುಲದ ಮೇಲಿನ ಖಲಿಸ್ಥಾನಿ ದಾಳಿಯನ್ನು ಖಂಡಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ದೇವಾಲಯದ ಮುಂದೆಯೇ ಮುಷ್ಕರ ನಡೆಸಿರುವ ಅವರು ಬಾಟೇಂಗೆ ತೋ ಕಟೇಂಗೆ (ನಾವು ದೂರವಾದರೆ ನಮ್ಮನ್ನು ತುಂಡರಿಸುತ್ತಾರೆ) ಎಂದು ಘೋಷಣೆಗಳನ್ನು ಮೊಳಗಿಸಿದ್ದಾರೆ. ಪ್ರತಿಭಟನೆಯ ವೀಡಿಯೋಗಳು ಕೂಡ ವೈರಲ್ ಆಗಿವೆ. ದಾಳಿಯನ್ನು ಖಂಡಿಸಿ ಪ್ರತಿ ಭ ಟಿ ಸು ತ್ತಿದ್ದ ಭಕ್ತರ ಮೇಲೆ ಕೆನಡಾದ ಪೊಲೀ ಸರು ದರ್ಪ ತೋರಿ ಲಾಠಿ ಪ್ರಹಾರ ನಡೆಸಿದ್ದು, ಈ ಬಗ್ಗೆಯೂ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
Related Articles
-ನ. 3ರಂದು ಬ್ರಾಂಪ್ಟನ್ ದೇಗುಲ ದಲ್ಲಿ ದೀಪಾವಳಿ ಸಂಭ್ರಮ
-ಅದರಲ್ಲಿ ಹಿಂದೂಸಮುದಾಯದ ಹಲವರು ಭಾಗಿ
-ದೇಗುಲದಲ್ಲಿ ಭಾರತ ರಾಯಭಾರ ಕಚೇರಿ ಕಾರ್ಯಕ್ರಮ
-ದುರುಳರಿಂದ ಖಲಿಸ್ಥಾನಿಧ್ವಜ ಹಿಡಿದು ದೇಗುಲ ಪ್ರವೇಶಿಸಿ, ದರ್ಪ ಪ್ರದರ್ಶನ
-ಭಕ್ತರಿಗೆ ಥಳಿಸಿದ್ದರಿಂದ ಪರಸ್ಪರ ಹೊಡೆದಾಟ, ಕೆಲವರಿಗೆ ಗಾಯ
Advertisement
ಖಲಿಸ್ಥಾನಿಗಳನ್ನು ನಿಗ್ರಹಿಸಿ: ಕೆನಡಾಗೆ ಭಾರತ ಆಗ್ರಹ ಹಿಂದೂ ಸಭಾ ದೇಗುಲದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಕೆನಡಾದಲ್ಲಿರುವ ಭಾರತೀಯರು ಮತ್ತು ಅಲ್ಲಿನ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ನಮ್ಮ ರಾಯಭಾರಿಗಳು ಮುಂದಾದರೆ ಅವರಿಗೆ ಬೆದರಿಕೆ ಎದುರಾಗುತ್ತಿದೆ. ಹಿಂದೂ ಗಳನ್ನು ಗುರಿಯಾಗಿಸಿ ಖಲಿಸ್ಥಾನಿಗಳು ನಡೆಸು ತ್ತಿರುವ ದಾಳಿ ಮೇರೆ ಮೀರಿದೆ. ಕೆನಡಾ ಸರಕಾರ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸ ಬೇಕು. ಜತೆಗೆ ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ದೇಗುಲಗಳ ಮೇಲಿನ
ಉದ್ದೇಶ ಪೂರ್ವಕ ದಾಳಿಯನ್ನು ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕ ರನ್ನು ಬೆದರಿಸಲು ಇಂಥ ಹೇಡಿ ಕೃತ್ಯ ಗಳನ್ನು ಎಸಗಲಾಗಿದೆ. ಇದಕ್ಕೆಲ್ಲ ಜಗ್ಗುವು ದಿಲ್ಲ. ಈ ಪ್ರಯತ್ನಗಳಿಂದ ಭಾರತದ ಸಂಕಲ್ಪವನ್ನು ಬದಲಿಸಲಾಗದು.
-ನರೇಂದ್ರ ಮೋದಿ, ಪ್ರಧಾನಿ ದೇಗುಲದ ಮೇಲೆ
ನಡೆದ ದಾಳಿ, ಹಿಂಸಾಚಾರ ಸರಿಯಲ್ಲ. ಕೆನಡಾದಲ್ಲಿ ಪ್ರತಿ ಯೊಬ್ಬರಿಗೂ ತಮ್ಮ ಧರ್ಮ , ನಂಬಿಕೆಯನ್ನು ಮುಕ್ತವಾಗಿ, ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ.
-ಜಸ್ಟಿನ್ ಟ್ರಾಡೋ,
ಕೆನಡಾ ಪ್ರಧಾನಿ ಖಲಿಸ್ಥಾನಿಗಳ ದಾಳಿಯಿಂದ ಭಕ್ತರು ಭಯಭೀತರಾಗಿದ್ದಾರೆ. ಹಿಂದೂಗಳಿಗೆ ರಕ್ಷಣೆ ಕೊಡುವಲ್ಲಿ ಪೊಲೀಸರು ವಿಫಲರಾಗಿದ್ದು, ಈ ವರೆಗೆ ದಾಳಿ ನಡೆಸಿದ ಒಬ್ಬ ಖಲಿಸ್ಥಾನಿಯನ್ನೂ ಬಂಧಿಸಲಾಗಿಲ್ಲ.
– ನಯನ್ ಬ್ರಹ್ಮಭಟ್, ಅರ್ಚಕ