Advertisement
ದಿಲ್ಲಿಯಲ್ಲಿ ಮಾಲಿನ್ಯ 3 ದಿನಗಳಿಂದ ಗಂಭೀರ ಸ್ಥಿತಿಯಲ್ಲೇ ಇರುವುದರಿಂದ ವಾಯು ಗುಣ ಮಟ್ಟ ನಿಯಂತ್ರಣ ಮಂಡಳಿಯು ರಾಜಧಾನಿ ವಲಯದಲ್ಲಿ 3ನೇ ಹಂತದ ನಿಯಂತ್ರಣವನ್ನು ಹೇರಿದೆ. ಹೀಗಾಗಿ ಕಟ್ಟಡಗಳ ನಿರ್ಮಾಣ, ಧ್ವಂಸ, ಕೈಗಾರಿಕೆಗಳಿಗೆ ನಿರ್ಬಂಧ ಹಾಗೂ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ವಾಹನ ಗಳನ್ನು ನಿಷೇಧಿಸಲಾಗಿದೆ.
ರಾಜಧಾನಿಯಲ್ಲಿ ವಿಷಾನಿಲ ಮಿಶ್ರಿತ ಗಾಳಿ ದಟ್ಟ ಮಂಜಿನಂತೆ ಆವರಿಸಿದ್ದು, ಶ್ವಾಸಕೋಶ ಸಹಿತ ಹಲವು ರೀತಿಯ ಕ್ಯಾನ್ಸರ್ ಜನರನ್ನು ಕಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ದಿಲ್ಲಿಯ ವಾತಾವರಣದಲ್ಲಿ ಧೂಳಿನ ಪ್ರಮಾಣ ಪ್ರತೀ ಘನ ಮೀಟರ್‌ಗೆ 247 ಮಿ. ಗ್ರಾಂನಷ್ಟಿದೆ. ಇದರ ಆರೋಗ್ಯಕರ ಪ್ರಮಾಣ 15 ಮಿಲಿಗ್ರಾಂ ಮಾತ್ರ. ಅಲ್ಲದೆ ದಿಲ್ಲಿಯ ಗಾಳಿಯಲ್ಲಿ ಗಂಧಕದ ಡೈಆಕ್ಸೆಡ್, ಇಂಗಾಲದ ಮೋನಾಕ್ಸೆ„ಡ್ ಹೆಚ್ಚಿದ್ದು, ಜನರ ಆಯುಷ್ಯ 7.8 ವರ್ಷ ಕುಸಿಯಬಹುದು ಎಂದು ಅಮೆರಿಕದ ಸಂಸ್ಥೆಯೊಂದು ತನ್ನ ವರದಿಯಲ್ಲಿ ಎಚ್ಚರಿಸಿದೆ.