Advertisement

“ಕೆಜಿಎಫ್’ನ ಧೀರನಿಗೆ ಚಿಯರ್ಸ್ ಎಂದ ಆಡಿಯನ್ಸ್: Watch

03:02 PM Dec 18, 2018 | Team Udayavani |

ಕನ್ನಡದ ಬಹುನಿರೀಕ್ಷಿತ, ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್’ ಚಿತ್ರದ ಟ್ರೈಲರ್ ಗಳು ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಹವಾ ಎಬ್ಬಿಸಿರುವ ಬೆನ್ನಲ್ಲೇ ಇದೀಗ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಹೌದು, ಇದೀಗ “ಧೀರ ಧೀರ’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.

Advertisement

ರವಿ ಬಸ್ರೂರ್ ಅವರ ಸಾಹಿತ್ಯದಲ್ಲಿ ಅನನ್ಯ ಭಟ್, ಸಂತೋಷ್ ವೆಂಕಿ, ಸಚಿನ್ ಬಸ್ರೂರ್, ಪುನೀತ್ ರುದ್ರಂಗ, ಮೋಹನ್ ಕೃಷ್ಣ, ಹೆಚ್.ಶ್ರೀನಿವಾಸ್ ಮೂರ್ತಿ ಮತ್ತು ವಿಜಯ್ ಅರಸ್ ಕಂಠದಲ್ಲಿ ಈ ಹಾಡು ಮೂಡಿ ಬಂದಿದ್ದು, ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಪಡೆದುಕೊಂಡಿದೆ. ಅಲ್ಲದೇ ಯೂಟ್ಯೂಬ್‍ ಟ್ರೆಂಡಿಂಗ್‍ನಲ್ಲಿದೆ.

ಇನ್ನು ಚಿತ್ರತಂಡ ಮೊದಲಿಗೆ “ಸಲಾಂ ರಾಕಿ ಭಾಯ್’ ಮತ್ತು “ಗರ್ಭಧಿ’ ಎಂಬ ವಿಭಿನ್ನ ಶೈಲಿಯ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಇದಾದ ಬಳಿಕ ಹಿಂದಿಯ “ಗಲಿ ಗಲಿ ಮೇ’ ಹಾಗೂ ಕನ್ನಡದ “ಜೋಕೆ’ ಐಟಂ ಸಾಂಗ್‍ಗಳು ಬಿಡುಗಡೆಯಾಗಿದ್ದವು. ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. 

ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಿಸೆಂಬರ್ 21ರಂದು ತೆರೆಗೆ ಬರಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next