Advertisement

ಬುಡಕಟ್ಟು ಸಮುದಾಯಕ್ಕೆ ಎಟಿಎಂ ಸೌಲಭ್ಯ

11:56 AM Jun 18, 2018 | Team Udayavani |

ಅಹ್ಮದಾಬಾದ್‌: ಗುಜರಾತ್‌ನಲ್ಲಿ ಇನ್ನು ಮುಂದೆ ಬುಡಕಟ್ಟು ಸಮುದಾಯದವರಿಗೆ ಹಣ ಪಡೆಯಲು ಕಷ್ಟ ಪಡುವ ಅಗತ್ಯವಿಲ್ಲ. ಅವರಿಗಾಗಿ 40 ಸ್ಥಳಗಳಲ್ಲಿ ಎಟಿಎಂ ಸ್ಥಾಪಿಸಲಾಗುತ್ತದೆ ಎಂದು ಬುಡಕಟ್ಟು ಸಮುದಾಯ ಸಚಿವಾಲಯದ ಕಾರ್ಯದರ್ಶಿ ರಮೇಶ್‌ ಚಂದ್‌ ಮೀನಾ ಹೇಳಿದ್ದಾರೆ. ಪ್ರಾಥಮಿಕವಾಗಿ ಅಗತ್ಯವಾಗಿರುವ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ನೀಡುವ ನಿಟ್ಟಿನಲ್ಲಿ ವಿವಿಧ ಬ್ಯಾಂಕ್‌ಗಳು ಎಟಿಎಂ ಸೇವೆ ಆರಂಭಿಸಲಿವೆ ಎಂದಿದ್ದಾರೆ. ದಕ್ಷಿಣ ಗುಜರಾತ್‌ನಲ್ಲಿರುವ ತಪಿ ಜಿಲ್ಲೆಯಿಂದ ಉತ್ತರ ಗುಜರಾತ್‌ನಲ್ಲಿರುವ ಸಬರ್‌ಕಾಂತಾ ಜಿಲ್ಲೆಯ ವರೆಗಿನ ಬುಡಕಟ್ಟು ಸಮುದಾಯದವರು ಇರುವ ಪ್ರದೇಶಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ ಮೀನಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next