Advertisement

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

03:17 PM Nov 29, 2024 | Team Udayavani |

ಗುಜರಾತ್: 19 ವರ್ಷದ ಯುವತಿಯನ್ನು ಅತ್ಯಾಚಾರಗೈದು ಹತ್ಯೆ ನಡೆಸಿದ ಆರೋಪದ ಮೇಲೆ ತನಿಖೆ ನಡೆಸಿದ ಗುಜರಾತ್ ಪೊಲೀಸರು ಹರಿಯಾಣ ಮೂಲದ ಆರೋಪಿಯನ್ನು ಬಂಧಿಸಿದ್ದು ಇದೀಗ ಆತನನ್ನು ವಿಚಾರಣೆ ನಡೆಸಿದ ವೇಳೆ ಆಘಾತಕಾರಿ ಅಂಶಗಳು ಹೊರಬಿದ್ದಿವೆ ಅಲ್ಲದೆ ಆತ ಓರ್ವ ಸರಣಿ ಹಂತಕನಾಗಿದ್ದು ಅಷ್ಟು ಮಾತ್ರವಲ್ಲದೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಹತ್ಯೆಗಳನ್ನು ಮಾಡಿದ್ದು ನಾಲ್ಕು ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಸೀರಿಯಲ್ ಕಿಲ್ಲರ್ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

Advertisement

ಸರಣಿ ಹಂತಕನನ್ನು ಹರಿಯಾಣದ ರೋಹ್ಟಕ್ ಮೂಲದ ರಾಹುಲ್ ಸಿಂಗ್ ಜಾಟ್(29) ಎನ್ನಲಾಗಿದೆ.

ರಾಹುಲ್ ಕೇವಲ ಒಂದು ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ಕೊಲೆಗಳನ್ನು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಅಲ್ಲದೆ ಈತ ರೈಲಿನಲ್ಲೇ ಹೆಚ್ಚಿನ ಕೃತ್ಯಗಳನ್ನು ಎಸಗುತ್ತಿದ್ದ ಎಂಬುದೇ ಆಘಾತಕಾರಿ ಸಂಗತಿ.

ನವೆಂಬರ್‌ 14ರಂದು ಗುಜರಾತ್ ನ ಉದ್ವಾಡ ರೈಲು ನಿಲ್ದಾಣದ ಸಮೀಪದ ರೈಲು ಹಳಿಯ ಪಕ್ಕದಲ್ಲಿ 19 ವರ್ಷದ ಯುವತಿಯ ಶವ ಪತ್ತೆಯಾಗಿತ್ತು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಗುಜರಾತ್ ರೈಲು ನಿಲ್ದಾಣದ ಬಳಿ ನವೆಂಬರ್‌ 24ರಂದು ಹರಿಯಾಣ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಸರಣಿ ಹತ್ಯೆಯ ವಿಚಾರ ಬೆಳಕಿಗೆ:
ಯುವತಿಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ರಾಹುಲ್ ವಿಚಾರಣೆ ವೇಳೆ ತಾನು ಕಳೆದ ಒಂದು ತಿಂಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು ನಾಲ್ಕು ಹತ್ಯೆಗಳನ್ನು ನಡೆಸಿರುವುದಾಗಿ ಹೇಳಿದ್ದಾನೆ ಅಲ್ಲದೆ ಎಲ್ಲ ಕೃತ್ಯಗಳನ್ನು ರೈಲಿನಲ್ಲೇ ನಡೆಸುತ್ತಿದ್ದ ಎಂಬುದು ಆಘಾತಕಾರಿ ಸಂಗತಿಯಾಗಿದೆ. ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿನ ರೈಲಿನಲ್ಲಿ ಸಂಚರಿಸಿ ಮಹಿಳೆಯರನ್ನು ಬೆದರಿಸಿ ಅವರಿಂದ ಚಿನ್ನ ಹಣ ಲೂಟಿ ಮಾಡಿ ಹತ್ಯೆಗೈಯ್ಯುತ್ತಿದ್ದನಂತೆ ಹೀಗಾಗಿ ನಾಲ್ಕು ರಾಜ್ಯಕ್ಕೆ ಸರಣಿ ಹಂತಕ ಬೇಕಾಗಿದ್ದ ಎನ್ನಲಾಗಿದೆ.

Advertisement

ಹಂತಕನ ಸುಳಿವು ಸಿಕ್ಕಿದ್ದು ಹೇಗೆ:
ಗುಜರಾತ್ ನ ಉದ್ವಾಡ ರೈಲು ನಿಲ್ದಾಣದ ಬಳಿ ಯುವತಿ ಟ್ಯೂಷನ್​ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ರಾಹುಲ್ ಏಕಾಏಕಿ ಯುವತಿಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರಗೈದು ಹತ್ಯೆ ನಡೆಸಿದ ಬಳಿಕ ಹಂತಕ ರಾಹುಲ್ ಹತ್ಯೆ ನಡೆಸಿದ ಸ್ಥಳದಲ್ಲಿ ಆತನ ಟಿ ಶರ್ಟ್ ಹಾಗೂ ಬ್ಯಾಗ್ ಬಿಟ್ಟು ಓಡಿ ಹೋಗಿದ್ದ ಇದರಿಂದ ಪೊಲೀಸರಿಗೆ ಹಂತಕನ ಜಾಡು ಪತ್ತೆಹಚ್ಚಲು ಸುಲಭವಾಯಿತು.

2000 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ:
ಆರೋಪಿಯ ಬಂಧನಕ್ಕೆ ಗುಜರಾತ್ ಪೊಲೀಸರು ಸುಮಾರು ಹತ್ತು ತಂಡವನ್ನು ರಚಿಸಿದ್ದರು ಅಲ್ಲದೆ ಆರೋಪಿಯನ್ನು ಪತ್ತೆ ಹಚ್ಚಲು ನಗರದ ಸುಮಾರು 2000 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Advertisement

Udayavani is now on Telegram. Click here to join our channel and stay updated with the latest news.

Next