Advertisement

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

11:44 PM Dec 18, 2024 | Team Udayavani |

ಹೊಸದಿಲ್ಲಿ: ಭೂತಾನ್‌ ಭಾಗ ಎನ್ನಲಾಗುವ ಡೋಕ್ಲಾಂ ಪ್ರದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಚೀನ 22 ಗ್ರಾಮಗಳನ್ನು ನಿರ್ಮಾಣ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಭಾರತದ ಸಿಕ್ಕಿಂ ಸಮೀ­­ಪ ಈ ಗ್ರಾಮಗಳ ನಿರ್ಮಾಣವಾಗಿದ್ದು, ಕಳವಳ ವ್ಯಕ್ತವಾಗಿದೆ.

Advertisement

ಡೋಕ್ಲಾಂನಲ್ಲಿ ಗ್ರಾಮ ನಿರ್ಮಾಣ­ವಾಗುತ್ತಿರುವುದರಿಂದ ಈ ಪ್ರಸ್ಥಭೂಮಿ ಯ ಅತ್ಯಂತ ದಕ್ಷಿಣಕ್ಕೆ ಚೀನದ ಸೇನಾ­ಪಡೆಗಳು ಸಂಚಾರ ಮಾಡಲು ಅವಕಾಶ ದೊರೆಯುತ್ತದೆ. ಇದು ಭಾರತಕ್ಕೆ ತೀರ ಸಮೀಪವಾಗಿದ್ದು, ಇವು ಚೀನದ ಮಿಲಿಟರಿ ನೆಲೆಗಳಿಗೂ ಸಮೀಪದಲ್ಲಿವೆ.

2017ರಲ್ಲಿ ಡೋಕ್ಲಾಂನ ಈ ಪ್ರದೇಶವು ಭಾರತ ಮತ್ತು ಚೀನದ ಸೈನಿಕರ ನಡುವೆ 73 ದಿನಗಳ ಕಾಲದ ಬಿಕ್ಕಟ್ಟಿನ ಪ್ರದೇಶವಾಗಿತ್ತು. ಹೀಗಾಗಿ ಈ ಪ್ರಸ್ಥಭೂಮಿಯ ದಕ್ಷಿಣಕ್ಕೆ ಚೀನದ ಸೇನೆಗಳು ತಲುವುದನ್ನು ತಡೆಯುವ ರಸ್ತೆ ಮಾರ್ಗಗಳ ನಿರ್ಮಾಣವನ್ನು ತಡೆಯಲು ಭಾರತ ಸರಕಾರ ಮಧ್ಯಪ್ರವೇಶಿಸಿತ್ತು.

ಇದೀಗ ಮತ್ತೆ ನಿರ್ಮಾಣಗಳು ಹೆಚ್ಚಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿರುವುದು ಆತಂಕಕ್ಕೆ ಕಾರಣವಾ­ಗಿದೆ ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next