Advertisement

ನಗರದಲ್ಲಿ ನಾಲ್ವರು ಪೆಡ್ಲರ್‌ಗಳ ಬಂಧನ

11:47 AM Dec 30, 2020 | Team Udayavani |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಚರಸ್‌ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಪೆಡ್ಲರ್‌ಗಳನ್ನು ಆಗ್ನೇಯ ವಿಭಾಗದ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಮೂಲದ ಕೆ.ಪ್ರೀತಿಪಾಲ್‌ ಅಲಿಯಾಸ್‌ ಪ್ರೀತಿಪಾಲ್‌ ರೈ (48), ಆತನ ಸಹಚರ ಕೆ.ಖಲಂದರ್‌ (31) ಹಾಗೂ ಮತ್ತೂಂದು ಪ್ರಕರಣದಲ್ಲಿ ಉತ್ತರ ಪ್ರದೇಶಮೂಲದ ಅಮಿತ್‌ ಕುಮಾರ್‌ (31),ಸೂರಜ್‌ (32) ಅವರನ್ನು ಬಂಧಿಸಲಾಗಿದೆ. ಎರಡು ತಂಡದಿಂದ 73 ಲಕ್ಷ ರೂ. ಮೌಲ್ಯದ 214 ಕೆ.ಜಿ. ಗಾಂಜಾ ಮತ್ತು 600 ಗ್ರಾಂ ಚರಸ್‌ ವಶಕ್ಕೆ ಪಡೆಯಲಾಗಿದೆ.

ಕಡಿಮೆ ಬೆಲೆಗೆ ಗಾಂಜಾ ಖರೀದಿ: ಆರೋಪಿಗಳಾದ ಕೆ.ಪ್ರೀತಿಪಾಲ್‌ ಮತ್ತು ಕೆ.ಖಲಂದರ್‌ ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿರುವಗುಡ್ಡಗಾಡು ಪ್ರದೇಶದಿಂದ ಕಡಿಮೆ ಬೆಲೆಗೆಗಾಂಜಾ ಖರೀದಿಸಿ ವಾಹನಗಳ ಮೂಲಕಬೆಂಗಳೂರಿಗೆ ತರುತ್ತಿದ್ದರು. ಪ್ರೀತಿಪಾಲ್‌, ಪೃಥ್ವಿ, ವಿನಯ್‌, ಗೌತಮ್‌ ಶೆಟ್ಟಿ ಹೆಸರಿನಲ್ಲಿಗುರುತಿಸಿಕೊಂಡಿದ್ದು, ಈತನ ವಿರುದ್ಧಗೋವಾ, ಕೇರಳ ರಾಜ್ಯಗಳಿಂದ ಅಕ್ರಮವಾಗಿಮದ್ಯ ಸಾಗಣೆ ಮಾಡುತ್ತಿದ್ದ. ಮಂಗಳೂರಿನಪುತ್ತೂರು ಟೌನ್‌ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಎಂಟಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣ:

ಬಂಟ್ವಾಳ ಗ್ರಾಮಾಂತರ, ಉಡುಪಿ ಬಂದರು ಠಾಣೆ, ಅಬಕಾರಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡಜಿಲ್ಲೆಯ ಎಂಟಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಲೆಮರಿಸಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಇದೀಗ ಆಂಧ್ರಪ್ರದೇಶದಿಂದ ಮಾದಕ ವಸ್ತು ತರಿಸಿ ಮಾರಾಟ ಮಾಡುತ್ತಿದ್ದಾನೆ.

Advertisement

ಕೆಲ ಪೆಡ್ಲರ್‌ಗಳ ಸಂಪರ್ಕ: ನಂತರ ಮಂಗಳೂರಿನ ಮಾರ್ಗವಾಗಿ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಶೇ.10ರಷ್ಟು ಮಾರಾಟ ಮಾಡಿದರೆ, ಮಂಗಳೂರಿನಲ್ಲಿ ಶೇ.20ರಷ್ಟು ಹಾಗೂಕಾಸರಗೋಡಿನಲ್ಲಿ ಶೇ.70ರಷ್ಟು ಪ್ರಮಾಣದಲ್ಲಿ ಪೆಡ್ಲರ್‌ಗಳು, ಕಾಲೇಜು ವಿದ್ಯಾರ್ಥಿ ಗಳು, ಸಾಫ್ಟ್‌ವೇರ್‌ ಕಂಪನಿ ನೌಕರರಿಗೆ ಮಾರಾಟ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದ. ಇತ್ತೀಚೆಗೆ ಜೈಲು ಸೇರಿದ್ದ ಕೆಲ ಪೆಡ್ಲರ್‌ಗಳು ಈತನ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ತರಕಾರಿ ಮಧ್ಯೆ ಗಾಂಜಾ ಸಾಗಾಟ :

ಪೊಲೀಸರ ಕಣ್ಣು ತಪ್ಪಿಸಲು ಆರೋಪಿಗಳಾದ ಪ್ರೀತಿಪಾಲ್‌ ರೈ, ಆತನ ಸಹಚರ ಕೆ.ಖಲಂದರ್‌ ಸ್ವರಾಜ್‌ ಮಜ್ಡಾ ವಾಹನದಲ್ಲಿ ತರಕಾರಿಗಳನ್ನು ತುಂಬಿ ಅದರ ಮದ್ಯದಲ್ಲಿ ಗಾಂಜಾವನ್ನು ಇಡುತ್ತಿದ್ದರು. ಚೆಕ್‌ ಪೋಸ್ಟ್‌ಗಳಲ್ಲಿ ತರಕಾರಿ ವಾಹನ ಎಂದು ಭಾವಿಸಿ ಅವರ ವಾಹನವನ್ನುಪೊಲೀಸರು ತಪಾಸಣೆ ನಡೆಸುತ್ತಿದ್ದರು. ಹೀಗಾಗಿ ಯಾರಿಗೂ ಅನುಮಾನ ಬರುತ್ತಿರಲಿಲ್ಲ.ಇತ್ತೀಚೆಗೆ ಸುದ್ದಗುಂಟೆಪಾಳ್ಯದ ಬಿ.ಜಿ. ರಸ್ತೆ ಬಳಿ ಆರೋಪಿಗಳು ಗಾಂಜಾ ಮಾರಾಟಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಮೈಕೋ ಲೇಔಟ್‌ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಸುಧೀರ್‌ ಎಂ. ಹೆಗಡೆ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಶದಲ್ಲಿದ್ದ 65 ಲಕ್ಷ ರೂ. ಮೌಲ್ಯದ 214 ಕೆ.ಜಿ. 500ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next