Advertisement

ರಸ್ತೆಗಿಳಿದು ಅಧಿಕಾರಿಗಳೊಂದಿಗೆ ರಸ್ತೆಯ ಗುಣಮಟ್ಟ ಪರಿಶೀಲಿಸಿದ ಶಾಸಕ ಲಿಂಬಾವಳಿ

07:11 PM Apr 09, 2022 | Team Udayavani |

ಮಹದೇವಪುರ ; ಕ್ಷೇತ್ರದ ಪ್ರಮುಖ ರಸ್ತೆಗಳ ಗುಣಮಟ್ಟ ಮತ್ತು ಸ್ಥಿತಿ ಗತಿಗಳ ಪರಿಶೀಲನೆ ನಡೆಸುವ ಸಲುವಾಗಿ ಕ್ಲೀನ್ ಸ್ಟ್ರೀಟ್ 75 ಕಿಲೋಮೀಟರ್ ಚಾಲೆಂಜ್ ನ ಅಂಗವಾಗಿ ದ್ವಿಚಕ್ರ ವಾಹನದಲ್ಲಿ ಶಾಸಕ ಅರವಿಂದ ಲಿಂಬಾವಳಿ ರಸ್ತೆಗಿಳಿದು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು ಸುಸ್ಥಿರವಾದ ರಸ್ತೆಗಳ ಅಭಿವೃದ್ಧಿ ಪರಿಶಿಲನೇ, ಬೀದಿಗಳಲ್ಲಿ ಸ್ವಚ್ಚತೆ ಕಾಯ್ದು ಕೊಳುವುದು, ವ್ಯವಸ್ಥಿತ ಬದಲಾವಣೆ ಅಗತ್ಯವಿದು ಅದಕ್ಕಾಗಿ ದ್ವಿಚಕ್ರ ವಾಹನದಲ್ಲಿ ಅಧಿಕಾರಿಗಳೊಂದಿಗೆ ತಪಾಸಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶನಿವಾರ ಬೆಳ್ಳಂದೂರು,ವರ್ತೂರು ಹಾಗೂ ಮಾರತ್ತಹಳ್ಳಿ ವಾರ್ಡಗಳ ಪ್ರಮುಖ ರಸ್ತೆಗಳ ಗುಣಮಟ್ಟ ಮತ್ತು ಸ್ಥಿತಿ ಗತಿಗಳ ಪರಿಶೀಲನೆ ನಡೆಸುವ ಸಲುವಾಗಿ ಕ್ಲೀನ್ ಸ್ಟ್ರೀಟ್ 75 ಕ್ಕೆ ಚಾಲೆಂಜ್ ನ ಭಾಗವಾಗಿ ಸ್ವತಃ ತಾನೇ ರಸ್ತೆಗಿಳಿದು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಲಾಗಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಾರ್ವಜನಿಕರು ಸಂಚರಿಸುವ ಪಾದಚಾರಿ ಮಾರ್ಗಗಳಲ್ಲಿ ಹಾಕಿರುವ ಅಂಗಡಿ ಮುಂಗಟ್ಟು,ಮಾರ್ಕೆಟ್ ಸ್ಟಾಲ್ ಗಳನ್ನು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿ ಅಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇದನ್ನೂ ಓದಿ : ಸುಬ್ರಹ್ಮಣ್ಯ: ಮರದ ರೆಂಬೆ ಮುರಿದು ಬಿದ್ದು ಕಾರು ಸಂಪೂರ್ಣ ಜಖಂ

Advertisement

ಈ ಸಂದರ್ಭದಲ್ಲಿ ಜಂಟಿ ಆಯುಕ್ತ ವೆಂಕಟಾಚಲಪತಿ, ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಕ್ಲೆಮೆಂಟ್ ಜಯಕುಮಾರ್, ಜಯಚಂದ್ರ ರೆಡ್ಡಿ, ರಾಜಾರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಮಹೇಂದ್ರ ಮೋದಿ, ಮಿಥುನ್ ರೆಡ್ಡಿ, ಎಲ್ ರಾಜೇಶ್, ಹಾಗೂ ಮಹದೇವಪುರ ಟಾಸ್ಕ್ ಫೋರ್ಸ್ ಸದಸ್ಯರು, ಅಧಿಕಾರಿಗಳು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next