ಬೆಂಗಳೂರು :ನಾನು 40 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಅರಗ ಜ್ಞಾನೆಂದ್ರ ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ಹೊಸದಾಗಿ ಆಯ್ಕೆಗೊಂಡ ವಿಧಾನಪರಿಷತ್ ಸದಸ್ಯರ ಪ್ರಮಾಣವಚನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪ್ರಮಾಣ ವಚನದಲ್ಲಿ ಇಷ್ಟೊಂದು ಜನ ಸೇರಿದ್ದಾರೆ. ಯಾಕೆ ಅವರ ಮೇಲೆ ಕೇಸ್ ಹಾಕಿಲ್ಲ ? ಗೃಹ ಸಚಿವರು ಯಾರನ್ನು ಹೆದರಿಸುತ್ತಿದ್ದಾರೆ. ಪಾದಯಾತ್ರೆ ಮಾಡ್ತೀವಿ. ತಾಕತ್ತಿದ್ರೆ ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ :ಕೋವಿಡ್ ನಿರ್ಬಂಧ ಎಲ್ಲರಿಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ
ನಮ್ಮನ್ನು ಜೈಲಿಗೆ ಹಾಕಿದ್ರು ಪರವಾಗಿಲ್ಲ. ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ. ಗೊಡ್ಡು ಬೆದರಿಕೆಗೆ ಹೆದರುವ ಮಕ್ಕಳು ನಾವಲ್ಲ ಎಂದು ಅಬ್ಬರಿಸಿದ್ದಾರೆ.
ಯಾರನ್ನು ಬೇಕಾದರೂ ಅರೆಸ್ಟ್ ಮಾಡಲಿ. ಕೊರನಾ ರೂಲ್ಸ್ ಗೆ ನಾವು ಗೌರವ ಕೊಡುತ್ತೇವೆ. ಕೊರೊನಾ ಇದೆ, ಎಲ್ಲರೂ ಗುಂಪಾಗಿ ಇದ್ದಾರಲ್ಲ. ಗೃಹ ಸಚಿವರು, ಆರೋಗ್ಯ ಸಚಿವರು ಏನು ಮಾಡುತ್ತಿದ್ದಾರೆ ? ನಾವು ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ಪಾದಯಾತ್ರೆಗೆ ಎಲ್ಲರೂ ಬರುತ್ತಾರೆ ಎಂದು ತಿರುಗೇಟು ನೀಡಿದರು.