ಸಾಗರ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ವಿಜಯಿಯಾಗುವುದರೊಂದಿಗೆ ಸತತ ಮೂರನೇ ಬಾರಿಗೆ ಸೂರ‍್ಯನಾರಾಯಣ ಖಂಡಿಕಾ ನೇತೃತ್ವದ ತಂಡ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಎಪಿಎಂಸಿ ಪ್ರಾಂಗಣದ ಆಪ್ಸ್‌ಕೋಸ್ ಕೇಂದ್ರ ಕಚೇರಿಯ ಹಿಂಭಾಗದ ಗೋಡೌನ್ ಕಟ್ಟಡಲ್ಲಿ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಎಂ.ಸೂರ‍್ಯನಾರಾಯಣ-ಬಿ.ಎ.ಇಂದೂದರ ಗೌಡ ನೇತೃತ್ವದ ತಂಡದ ಎಲ್ಲ ಸದಸ್ಯರೂ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಹಾಲಿ ಅಧ್ಯಕ್ಷ ಕೆ.ಎಂ. ಸೂರ‍್ಯನಾರಾಯಣ (1373), ಬಿ.ಎ. ಇಂದೂಧರ (1463), ಟಿ.ಆರ್. ಕೃಷ್ಣಮೂರ್ತಿ (1274), ಎ.ಎಸ್. ನಾಗರತ್ನ (1238), ನಂದನ ಕುಮಾರ (1071), ಎಂ.ಡಿ. ಭಾರತಿ (1278), ಕೆ.ಎಸ್. ಭಾಸ್ಕರ ಭಟ್ಟ (1225), ಎಂ.ಬಿ. ರಮೇಶ್ (1240), ಎಚ್.ಕೆ. ರಾಘವೇಂದ್ರ (1297), ವೈ.ಎನ್. ಸುರೇಶ್ (1130), ಕೆ.ಎಸ್. ಸುಬ್ಬರಾವ್ (1125) ಮತ ಪಡೆದು ಅಧಿಕಾರಕ್ಕೇರಿದ್ದಾರೆ.
ವಿರೋಧಿ ಬಣದಿಂದ ಸ್ಪರ್ಧಿಸಿದ್ದ ಪ್ರಮುಖರಲ್ಲಿ ಟಿಎಪಿಎಂಸಿಎಸ್‌ನ ಮಾಜಿ ಅಧ್ಯಕ್ಷ ಕೆ.ಆರ್. ಶ್ರೀಧರ ಭಟ್ (382), ಆಪ್ಸ್‌ಕೋಸ್‌ನ ಮಾಜಿ ಉದ್ಯೋಗಿ ಕೆ.ವಿ. ನರಹರಿ (323), ಬಿ.ಎಸ್. ಕೃಷ್ಣಮೂರ್ತಿ (255), ರತ್ನ ಶ್ರೀಧರಮೂರ್ತಿ ಗಡಿಕಟ್ಟೆ (276), ಕೆ.ಟಿ. ಸತ್ಯನಾರಾಯಣ (337), ಎಂ.ಜಿ. ಸಿದ್ದವೀರಪ್ಪ (346), ನಿಕಟಪೂರ್ವ ನಿರ್ದೇಶಕರಾಗಿದ್ದ ಪಿ.ಎನ್. ಸುಬ್ರಾವ್ (393) ಸೋಲನುಭವಿಸಿದ್ದಾರೆ.
ಹಿಂದಿನ ಉಪಾಧ್ಯಕ್ಷ ಎ.ಒ. ರಾಮಚಂದ್ರ ಅಂಬ್ಲಾಡಿ, ಎಚ್.ಬಿ. ಕಲ್ಯಾಣಪ್ಪಗೌಡ ಹೆಬ್ಬೈಲು, ಎಚ್. ಓಂಕೇಶ್ ಹರತಾಳು ಹೊಸನಗರ ಕ್ಷೇತ್ರದಿಂದ ಹಾಗೂ ಚೌಡಪ್ಪ ಹುಲಿಮನೆ, ಕೆ.ಎಂ. ಸತ್ಯನಾರಾಯಣ ಕೆಳದಿಯವರು ಮೀಸಲು ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿ ಒಟ್ಟು ೫೩ ನಾಮಪತ್ರ ಸಲ್ಲಿಕೆಯಾಗಿತ್ತು. ಒಂದು ನಾಮಪತ್ರ ತಿರಸ್ಕೃತವಾಗಿತ್ತು. ಕಣದಲ್ಲಿ 18 ಅಭ್ಯರ್ಥಿಗಳಿದ್ದರು. ನಾಮಪತ್ರ ವಾಪಾಸು ಪಡೆಯುವ ದಿನವಾಗಿದ್ದ ಸೋಮವಾರ 30 ಜನ ಕಣದಿಂದ ಹಿಂದೆ ಸರಿದಿದ್ದರಿಂದ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.