Advertisement
ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಅವರು “ಉದಯವಾಣಿ’ಯಲ್ಲಿ ಪ್ರಕಟವಾದ ವರದಿ ಪ್ರಸ್ತಾವಿಸಿ ಸದನದ ಗಮನ ಸಳೆದರು. ಇದಕ್ಕೆ ಉತ್ತರ ನೀಡಿದ ಸಚಿವ ಜಾರ್ಜ್, 400 ಕೆ.ವಿ. ಡಬಲ್ ಸರ್ಕ್ನೂಟ್ ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗವು ಅಂತಾರಾಜ್ಯ ಪ್ರಸರಣ ಮಾರ್ಗವಾಗಿದ್ದು ಕೇಂದ್ರ ಸರಕಾರ ಟಿಬಿಸಿಬಿ ಆಧಾರದಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದು ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾದುಹೋಗುತ್ತಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 68 ಕಿ.ಮೀ. ಮಾರ್ಗ ರಚನೆಯಾಗಬೇಕಾಗಿರುತ್ತದೆ. ಈ ಮಾರ್ಗವು ಕೇಂದ್ರ ಸರಕಾರದ ಪ್ರಸರಣ ಮಾರ್ಗವಾಗಿದ್ದರೂ ಸಹ ಮಾರ್ಗ ರಚನೆ ಅಗತ್ಯವಿರುವ ರಹದಾರಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದನ್ನು ಮತ್ತು ಪರಿಹಾರ ನಿಗದಿಪಡಿಸುವುದು ಇತ್ಯಾದಿಗಳ ಆಡಳಿತಾತ್ಮಕ ಸಹಕಾರವನ್ನು ರಾಜ್ಯ ಸರಕಾರ ನೀಡಬೇಕಾಗಿರುತ್ತದೆ ಎಂದರು.
Related Articles
ವಿರೋಧ ಲೆಕ್ಕಿಸದೆ ಟವರ್ ನಿರ್ಮಾಣಕ್ಕೆ ಮುಂದಾದಲ್ಲಿ ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂದು ಮಂಜುನಾಥ ಭಂಡಾರಿ ಗಮನ ಸೆಳೆದಿದ್ದರು. ಇದಕ್ಕೆ ಇಂಧನ ಸಚಿವರು ಉತ್ತರ ನೀಡಿದ್ದಾರೆ.
Advertisement
ಕಾನ್‌ಸ್ಟೆಬಲ್ ದಂಪತಿ ಅಂತರ ಜಿಲ್ಲಾ ವರ್ಗಾವಣೆಗೆ ಒತ್ತಾಯ ಪೊಲೀಸ್ ಇಲಾಖೆಯಲ್ಲಿ ಪತಿ-ಪತ್ನಿ ವರ್ಗಾವಣೆ ಪ್ರಕರಣದಲ್ಲಿ ಏಳು ವರ್ಷ ಪೂರೈಸಿದವರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವ ಮೂಲಕ ಪತಿ-ಪತ್ನಿ ಒಂದೇ ಕಡೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.
ಇಲಾಖೆಯಲ್ಲಿ ಪತಿ-ಪತ್ನಿ ಪರಸ್ಪರ ವರ್ಗಾವಣೆ ಪ್ರಕರಣದಲ್ಲಿ ಏಳು ವರ್ಷ ಪೂರೈಸಬೇಕೆಂಬ ನಿಯಮ ಪಾಲಿಸಿದವರ ವರ್ಗಾವಣೆ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶ ಇದ್ದು, ಈ ಬಗ್ಗೆ ಪ್ರತಿ ಭಟನೆ ನಡೆಸಲು ಪೊಲೀಸ್ ಕುಟುಂಬಗಳು ಸಿದ್ಧತೆ ನಡೆಸಿವೆ ಎಂದರು.
ಸಭಾನಾಯಕ ಎನ್.ಎಸ್. ಬೋಸರಾಜ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿ ದರು.