Advertisement

ರೈತ ವಿರೋಧಿ ಧೋರಣೆ: ಕಪ್ಪು ಬಟ್ಟೆ ಪ್ರದರ್ಶನಕ್ಕೆ ರೈತರ ನಿರ್ಧಾರ

12:01 AM Jan 02, 2020 | Lakshmi GovindaRaj |

ಹುಳಿಯಾರು: ಪ್ರಧಾನಿ ಮೋದಿಯವರ ರೈತ ವಿರೋಧಿ ಧೋರಣೆ ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ್‌ ನಿರ್ಧರಿಸಿರುವ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಬೆಂಬಲ ಸೂಚಿಸಿ ನೂರಾರು ರೈತರು ಪಾಲ್ಗೊಳ್ಳುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದರು.

Advertisement

ಮಹದಾಯಿ ಯೋಜನೆ, ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ, ರೈತರ ಸಾಲ ಮನ್ನಾ ವಿಚಾರ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿಲ್ಲ. ಮೊದಲ ಹಂತದ ಕೃಷಿ ಸಮ್ಮಾನ್‌ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಕೆಲವರಿಗೆ ಒಂದು ಕಂತಿನ 2 ಸಾವಿರ ರೂ. ಬಂದಿದ್ದರೆ, ಕೆಲವರಿಗೆ ಮೂರು ಕಂತುಗಳ 6 ಸಾವಿರ ರೂ.ಬಂದಿದೆ. ಈಗ 2ನೇ ಹಂತಕ್ಕೆ ಚಾಲನೆ ನೀಡಲು ಹೊರಟಿರುವುದು ಹಾಸ್ಯಾಸ್ಪದ ಎಂದರು.

ಪ್ರಧಾನಿ ಮೋದಿ ಅವರೊಂದಿಗೆ ರೈತರ ಸಂಕಷ್ಟಗಳ ಬಗ್ಗೆ ಮಾತನಾಡಲು ಅವಕಾಶ ಕೊಡದಿದ್ದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್‌ ತಿಳಿಸಿದರು. 2 ವರ್ಷದ ಹಿಂದೆ ಕರ್ನಾಟಕದಿಂದ 10 ಸಾವಿರ ರೈತರು ಅಹವಾಲು ಹೊತ್ತು ಮೋದಿ ಅವರನ್ನು ಭೇಟಿ ಮಾಡಲು ಬಂದಾಗ ಅವಕಾಶ ನೀಡಲಿಲ್ಲ. ಸಚಿವರನ್ನೂ ಕಳುಹಿಸದೆ ಅವಮಾನಿಸಿದ್ದಾರೆ ಎಂದು ಬೇಸರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next