Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ವಿಚಾರ ನನಗೆ ಗೊತ್ತಿಲ್ಲ. ಅವರು ದೊಡ್ಡ ನಾಯಕರು. ಅಮಿತ್ ಶಾ ಅವರು ಬರುವ ಸಾಧ್ಯತೆಯಿದೆ. ಸಿಎಂ ಅವರು ಈ ಕುರಿತು ಹೇಳಿದ್ದಾರೆ.ಒಂದು ವೇಳೆ ಶಾ ಅವರು ಬರದಿದ್ದರೆ ಸಿಎಂ ಅವರಿಂದ ಚಾಲನೆ ಕೊಡಿಸಲಿದ್ದೇವೆ. ಅಂಜಿನಾದ್ರಿ ಟೆಂಡರ್ ಕರೆಯುವ ಜೊತೆಗೆ ರೂಪ್ ವೇ, ಪ್ರದಕ್ಷಣ ಪಥ, ಶೌಚಾಲಯ, ಪಾರ್ಕಿಂಗ್ ಸೇರಿ ಇತರೆ ಕಾರ್ಯಗಳಿಗೆ ಚಾಲನೆ ನೀಡಲಿದ್ದೇವೆ. ನಂದಿ ಬೆಟ್ಟಕ್ಕೂ ರೂಪ್ ವೇ ನಿರ್ಮಾಣಕ್ಕೂ ಒಪ್ಪಂದ ಆಗಿದೆ. ಅದಕ್ಕೂ ಕೇಂದ್ರ ನಾಯಕರ ಆಹ್ವಾನಕ್ಕೆ ಸಿಎಂ ಅವರ ಗಮನಕ್ಕೆ ತಂದಿದ್ದೇವೆ ಎಂದರು.
Related Articles
ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ವಿಧಾನ ಸಭಾ ಚುನಾವಣಾ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅದರೊಳಗೆ ಎಲ್ಲ ಕಾಮಗಾರಿಗಳಿಗೆ ಚಾಲನೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
Advertisement
ಹಂಪಿ ಉತ್ಸವ ಚಾಲನೆಗೆ ಸಿಎಂ ಬೊಮ್ಮಾಯಿಹಂಪಿ ಉತ್ಸವ ಸಂಭ್ರಮದಿಂದ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.27 ರಂದು ಉತ್ಸವಕ್ಕೆ ಚಾಲನೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ನಾಲ್ಕು ಮುಖ್ಯ ವೇದಿಕೆಯಲ್ಲಿ ಉತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ. ರಾಜ್ಯದಲ್ಲಿನ ಉತ್ಸವಗಳನ್ನು ಗಮನಿಸಿದ್ದೇನೆ. ಬೇರೆ ಉತ್ಸವಕ್ಕೂ ನಮ್ಮ ಉತ್ಸವಗಳಿಗೂ ಕೆಲ ವ್ಯತ್ಯಾಸಗಳಿವೆ. ಹಂಪಿ ಉತ್ಸವ ಅತ್ಯಂತ ವೈಭವ ಮಾಡಲು ನಿರ್ಧರಿಸಿದ್ದೇವೆ ಎಂದರು. ಹಂಪಿಯಲ್ಲಿ ಸ್ಥಳದ ಕೊರತೆಯಿದೆ. ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು ನೋಡಿದ್ದೇವೆ. ಹಂಪಿಯಲ್ಲಿ ಎದುರು ಬಸವಣ್ಣ, ಗಾಯಿತ್ರಿ ಪೀಠ, ಸಾಸಿವೆಕಾಳು ಗಣಪತಿ, ಆನೆಸಾಲು ಒಂಟೆ ಸಾಲು ಸ್ಥಳದಲ್ಲಿ ಉತ್ಸವ ಆಚರಣೆ ಮಾಡಲು ಮುಂದಾಗಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಒಂಬತ್ತು ದಿನ ನಡೆಯಲಿದೆ ಎಂದರು. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ
ಉತ್ಸವಕ್ಕೆ ಸಿನಿಮಾ ತಾರೆಗಳನ್ನು ಆಹ್ವಾನಿಸಿ ಆಕರ್ಷಣೆ ಮಾಡಲು ಮುಂದಾಗಿಲ್ಲ. ಸ್ಥಳೀಯ ಕಲಾವಿದರನ್ನು ಆಹ್ವಾನಿಸಿ ಅವರಿಗೆ ವೇದಿಕೆ ನೀಡಿ ಜನರ ಆಕರ್ಷಣೆ ಮಾಡಲು ಮುಂದಾಗಿದೆ. ನಮ್ಮ ಸಂಸ್ಕೃತಿ, ಕಲೆ, ಕಲಾವಿದರಿಗೆ ಅವಕಾಶವನ್ನು ನೀಡಿ ಈ ಬಾರಿಯ ಉತ್ಸವದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ. ಗಾಯಕರಾದ ಅರ್ಜುನ್ ಜನ್ಯಾ, ವಿಜಯ ಪ್ರಕಾಶ ಸೇರಿ ನಾಲ್ವರು ಮಾತ್ರ ಆಹ್ವಾನ ಮಾಡಿದ್ದೇವೆ. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ದೀಪಾಲಂಕಾರ ಮಾಡಿದ್ದೇವೆ. ನಾಯಕ ಎಂ.ಪಿ.ಪ್ರಕಾಶ ಅವರ ಶ್ರಮದಿಂದ ಪುರಂದರ ದಾಸರ ಸಣ್ಣ ಮಂಟಪದಲ್ಲಿ ಮೊದಲು ಹಂಪಿ ಉತ್ಸವವು ನಡೆಯುತ್ತಿದ್ದವು. ಈಗ ದೊಡ್ಡದಾಗಿ ಮಾಡಲಾಗುತ್ತಿದೆ. ನವರಾತ್ರಿ ಮೈಸೂರು ದಸರಾ ನಡೆದ ಬಳಿಕ ಹಂಪಿ ಉತ್ಸವ ಮಾಡಬೇಕು ಎನ್ನುವ ಅಭಿಪ್ರಾಯ ಬಂದಿದೆ. ಮೈಸೂರು ನೋಡಲು ಬರುವ ಜನರು ನಂತರದಲ್ಲಿ ಹಂಪಿಗೆ ಬರುತ್ತಾರೆ. ಇದರಿಂದ ಒಂದು ಸರ್ಕ್ಯೂಟ್ ಆಗಲಿದೆ. ಈ ಕುರಿತಂತೆಯೂ ಚರ್ಚೆ ಮಾಡಲಾಗುತ್ತಿದೆ ಎಂದರು ಆನೆಗೊಂದಿ, ಕೊಪ್ಪಳ ರಜತ ಮಹೋತ್ಸವ ಮಾಡ್ತೇವೆ
ಕೊಪ್ಪಳ: ಕೊಪ್ಪಳ ರಜತ ಮಹೋತ್ಸವ ಹಾಗೂ ಆನೆಗೊಂದಿ ಉತ್ಸವವನ್ನು ನಾವು ಮಾಡಲಿದ್ದೇವೆ. ಮೊದಲು ಕೊಪ್ಪಳ ರಜತ ಮಹೋತ್ಸವ ಮಾಡಲಿದ್ದು, ನನ್ನ ಪ್ರವಾಸೋಧ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶವನ್ನು ತಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು. ಕೊಪ್ಪಳ ರಜತ ಮಹೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನಕ್ಕೆ ಮನವಿ ಮಾಡಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಯಾವ ದಿನಾಂಕ ಎಂದು ನಿಗಧಿ ಮಾಡಲಿದ್ದಾರೆ. ಆನೆಗುಂದಿ ಉತ್ಸವಕ್ಕೆ 1 ಕೋಟಿ ರೂ. ನನ್ನ ಇಲಾಖೆಯಿಂದ ಬಿಡುಗಡೆ ಮಾಡಲಿದ್ದೇನೆ. ವಿಜಯನಗರ ಮೂಲ ರಾಜಧಾನಿ ಆನೆಗುಂದಿಯಾಗಿದ್ದು, ಅದರ ಉತ್ಸವವೂ ನಡೆಯಲಿದೆ ಎಂದರು.